ಶ್ರೀಲಂಕಾ ವಿರುದ್ಧ ಹರಿಣಗಳಿಗೆ 4 ವಿಕೆಟ್ ಜಯ

ಶಾರ್ಜಾ, ಅ.30-ಟಿ-20 ವಿಶ್ವಕಪ್ ಟೂರ್ನಿಯ ಸೂಪರ್ 12 ಗುಂಪು ಪಂದ್ಯದಲ್ಲಿ ಇಂದು ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ನಾಲ್ಕು ವಿಕೆಟ್ ಗಳಿಂದ ಗೆಲುವು ಸಾಧಿಸಿತು.
143 ರನ್ ಗಳ ಗಲುವಿನ ಗುರಿಯನ್ನು 20 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ವಿಜಯದ ದಕ್ನಿಣ ಆಫ್ರಿಕಾ ವಿಜಯದ ನಗೆ ಬೀರಿತು.
ಒಂದು ಹಂತದಲ್ಲಿ 112 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ದಕ್ಷಿಣ ಆಫ್ರಿಕಾ ಸೋಲಿನ ದವಡೆಗೆ ಸಿಲುಕಿತ್ತು. ಈ ಹಂತದಲ್ಲಿ ಡೇವಿಡ್ ಮಿಲ್ಲರ್ ಅಜೇಯ 23 ಹಾಗೂ ಮರ್ಕರಂ ಔಟಾಗದೆ 19 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ತಂಬು ಬವೂಮಾ 46 ರನ್ ಗಳಿಸಿದರು. ಲಂಕಾ ಪರ ಹಸರಂಗಾ 3 ಹಾಗೂ ಚಮೀರಾ 2 ವಿಕೆಟ್‌ ಗಳಿಸಿದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಬೌಲಿಂಗ್ ಗೆ ಸಮರ್ಥ ಉತ್ತರ ನೀಡಲು ವಿಫಲವಾಯಿತು.
20 ಓವರ್ ಗಳಲ್ಲಿ 142 ರನ್ ಗಳಿಗೆ ಸರ್ವಪತನ ಕಂಡಿತು.
ಆರಂಭಿಕ ಆಟಗಾರ ಪಥೂಮ್ ನಿಸ್ಸಾಂಕ 72 ಹಾಗೂ ಅಸಾಲಂಕ 21 ರನ್ ಗಳಿಸಿದ್ದನ್ನು ಹೊರತುಪಡಿಸಿ ಉಳಿದ ಆಟಗಾರರು ಉತ್ತಮ ಆಟ ಪ್ರದರ್ಶಿಸಲು ವಿಫಲರಾದರು.
ದಕ್ಷಿಣ ಆಫ್ರಿಕಾ ಪರ ಪ್ರೆಟೋರಿಯಸ್ ಹಾಗೂ ಶಂಸಿ ತಲಾ ಮೂರು ವಿಕೆಟ್ ಪಡೆದರೆ, ನೋರ್ಟೆ ಎರಡು ವಿಕೆಟ್‌ ಗಳಿಸಿದರು.