ಶ್ರೀಲಂಕಾ ವಿರುದ್ಧ ಯುಎನ್‌ಎಚ್‌ಆರ್‌ಸಿ ಚಿದಂಬರಂ ವಾಗ್ದಾಳಿ


ನವದೆಹಲಿ.ಮಾ೨೪: ಶ್ರೀಲಂಕಾದಲ್ಲಿನ ತಮಿಳರ ರಕ್ಷಣೆ ಸಂಬಂಧ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಮತದಾನದಿಂದ ಭಾರತ ದೂರ ಉಳಿದಿರುವುದನ್ನು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಖಂಡಿಸಿದ್ದಾರೆ.
ತಮಿಳು ನಾಗರಿಕರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ‘ಎಐಎಡಿಎಂಕೆಬಿಜೆಪಿ‘ ಮೈತ್ರಿಯನ್ನು ಶಿಕ್ಷಿಸುವ ಮೂಲಕ ಮತದಾನದಿಂದ ದೂರ ಉಳಿದವರಿಗೆ ಪಾಠ ಕಲಿಸಬೇಕು ಎಂದಿದ್ದಾರೆ.ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ಶ್ರೀಲಂಕಾ ವಿಚಾರದಲ್ಲಿ ಕೈಗೊಂಡಿರುವ ಈ ನಿರ್ಣಯಕ್ಕೆ ಸಂಬಂಧಿಸಿದ ಮತದಾನದಿಂದ ದೂರ ಉಳಿದಿದೆ. ಇದು ತಮಿಳರಿಗೆ ಮಾಡಿರುವ ದ್ರೋಹ‘ ಎಂದು ಚಿದಂಬರಂ ಟ್ವಿಟರ್‌ನಲ್ಲಿ ಬರೆದಿದ್ದಾರೆ.
ತಮಿಳುನಾಡಿನ ಜನತೆಯ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುವಂತಹ ಈ ಬೆಳವಣಿಯನ್ನು ವಿರೋಧಿಸುವ ಸಲುವಾಗಿ ತಮಿಳುನಾಡಿನ ಜನರು ಈ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟವನ್ನು ಶಿಕ್ಷಿಸಬೇಕು‘ ಎಂದು ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ತಮಿಳರ ವಿರುದ್ಧ ಹಿಂಸಾಚಾರ, ಅಪರಾಧದಂತಹ ಕಠಿಣ ಕ್ರಮಕ್ಕೆ ಮುಂದಾಗದಂತೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ವೇದಿಕೆ(ಯುಎನ್‌ಎಚ್‌ಆರ್‌ಸಿ) ತೆಗೆದುಕೊಂಡಿರುವ ನಿರ್ಣಯ ಸಂಬಂಧ ನಡೆಯುತ್ತಿರುವ ಮತದಾನದಿಂದ ಭಾರತ ಸೇರಿದಂತೆ ಕೆಲವು ರಾಷ್ಟ್ರಗಳು ದೂರ ಉಳಿದಿವೆ.