ಶ್ರೀಲಂಕಾ ವಿರುದ್ಧ ಅದ್ಬುತ ಗೆಲುವು:ದ್ರಾವಿಡ್ ‌ಬಣ್ಣನೆ

ಕೊಲಂಬೋ, ಜು.19- ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾದ ಜಯ ಅದ್ಭುತ ಗೆಲುವು ಎಂದು ಕೋಚ್ ರಾಹುಲ್ ದ್ರಾವಿಡ್ ಬಣ್ಣಿಸಿದ್ದಾರೆ.
3 ವಿಕೆಟ್‍ಗಳ ರೋಚಕ ಗೆಲುವಿನ ನಂತರ ಡ್ರೆಸ್ಸಿಂಗ್ ರೂಮಿನಲ್ಲಿ ಸಂಭ್ರಮ ಮನೆ ಮಾಡಿತ್ತು. ಈ ವೇಳೆ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀಲಂಕಾ ಉತ್ತಮವಾಗಿ ಆಟವಾಡಿತು. ನಾವು ಅತ್ಯುತ್ತಮವಾಗಿ ಚಾಂಪಿಯನ್ ತಂಡದಂತೆ ಪ್ರತಿಕ್ರಿಯಿಸಿದ್ದೇವೆ. ನೀವೆಲ್ಲರೂ ಚೆನ್ನಾಗಿ ಆಡಿದ್ದೀರಿ. ಅದ್ಭುತ ಗೆಲುವು ಎಂದು ಹೇಳಿ ತಂಡದ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಹೊಗಳಿದ್ದಾರೆ.
ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆ ಸರಣಿ ಗೆದ್ದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ದ್ರಾವಿಡ್ ಟ್ರೆಂಡಿಂಗ್ ಆಗಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ದ್ರಾವಿಡ್ ಅವರ ಕೋಚ್ ಶೈಲಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎರಡು ವಿಕೆಟ್ ತೆಗೆದು 69 ರನ್ ಹೊಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ದೀಪಕ್ ಚಹರ್ , ರಾಹುಲ್ ದ್ರಾವಿಡ್ ಅವರ ಬಗ್ಗೆ ಮಾತನಾಡಿ, ಭಾರತ ಎ ತಂಡದಲ್ಲಿ ಆಡುತ್ತಿದ್ದಾಗ ರಾಹುಲ್ ದ್ರಾವಿಡ್ ಏಳನೇ ಕ್ರಮಾಂಕದಲ್ಲಿ ನನ್ನ ಸಾಮಥ್ರ್ಯವನ್ನು ಗುರುತಿಸಿದ್ದರು ಎಂದು ಹೇಳಿದರು.