ಶ್ರೀಲಂಕಾದಲ್ಲಿ ಲೀಟರ್ ಪೆಟ್ರೋಲ್‌ಗೆ ೩೦೦೦ ರೂ!

ಕೊಲಂಬೋ, ಆ.೨- ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಒದ್ದಾಡುತ್ತಿರುವ ಶ್ರೀಲಂಕಾದಲ್ಲಿ ಹನಿ ಇಂಧನಕ್ಕೂ ಹಾಹಾಕಾರವೆದ್ದಿದೆ.
ಇಂಧನಕ್ಕಾಗಿ ಶ್ರೀಲಂಕಾದಲ್ಲಿ ಕಾಳಸಂತೆಯ ಮೂಲಕ ಮಾರಾಟದಿಂದ ಜನತೆ ಮತ್ತಷ್ಟು ಸಂಕಷ್ಟಕ್ಕೆ ಈಡಾಗಿದ್ದಾರೆ. ಸದ್ಯ ಕಾಳಸಂತೆಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ ಬರೊಬ್ಬರಿ ೩೦೦೦ ರೂ. ಗಡಿ ದಾಟಿದೆ.
ಸಂಕಷ್ಟದ ಹಿನ್ನೆಲೆಯಲ್ಲಿ ಆರಂಭಿಕ ಹಂತದಲ್ಲಿ ಭಾರತ ಭಾರೀ ಪ್ರಮಾಣದ ಇಂಧನ ಸರಬರಾಜು ಮಾಡುವ ಮೂಲಕ ಔದಾರ್ಯತೆ ಪ್ರದರ್ಶಿಸಿತ್ತು. ಆದರೆ ಸದ್ಯ ದಿನದಿಂದ ದಿನಕ್ಕೆ ಶ್ರೀಲಂಕಾದಲ್ಲಿ ಪರಿಸ್ಥಿತಿ ಗಂಭೀರವಾಗುತ್ತಾ ಸಾಗುತ್ತಿದೆ. ಅದರಲ್ಲೂ ಆಹಾರ ವಸ್ತುಗಳ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಇಂಧನ ಬೆಲೆಯಲ್ಲಿ ಸಾಮಾನ್ಯ ಜನತೆಯ ಕೈಗೆಟುಕದ ರೀತಿಯಲ್ಲಿ ಸಾಗಿದೆ. ಜನತೆ ವಾರಗಟ್ಟೆಲೆ ಕ್ಯೂನಲ್ಲಿ ನಿಂತರೂ ಇಂಧನ ಸಿಗುತ್ತಿಲ್ಲ. ಮುಖ್ಯವಾಗಿ ಇಂಧನವನ್ನು ಸದ್ಯ ಅಲ್ಲಿನ ಡೀಲರ್‌ಗಳು ಕಾಳಸಂತೆಯ ಮೂಲಕ ಮಾರಾಟ ಮಾಡುತ್ತಿದ್ದು, ಇವುಗಳ ದರ ಮುಗಿಲುಮುಟ್ಟಿದೆ. ಇದು ಅಲ್ಲಿನ ಸಂಕಷ್ಟದ ಪರಿಸ್ಥಿತಿಯನ್ನು ಮತ್ತಷ್ಟು ಭೀಕರವಾಗಿಸಿದೆ. ಶ್ರೀಲಂಕಾದಲ್ಲಿ ಸದ್ಯ ಲೀಟರ್ ಪೆಟ್ರೋಲ್ ಬೆಲೆ ೪೫೦ರ ಅಸುಪಾಸಿನಲ್ಲಿದ್ದರೂ ಪೂರೈಕೆಯಲ್ಲಿ ವ್ಯತ್ಯಯ ಹಿನ್ನೆಲೆಯಲ್ಲಿ ಕಾಳಸಂತೆಯಲ್ಲಿ ಬರೊಬ್ಬರಿ ೨೫೦೦ ರೂ.ನಿಂದ ಹಿಡಿದು ೩೦೦೦ ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಹೆಚ್ಚಿನ ಬಂಕ್ ಮಾಲಕರು ಸದ್ಯ ತಮ್ಮ ಮನೆಯಲ್ಲಿ ಮಾಡಿರುವ ಭೂಗತ ಬಂಕ್‌ನಲ್ಲಿ ಇಂಧನ ಶೇಖರಿಸಿಟ್ಟು, ಅಲ್ಲಿಂದಲೇ ದೊಡ್ಡ ದೊಡ್ಡ ವಾಹನಗಳಿಗೆ ಪೂರೈಕೆ ಮಾಡುತ್ತಿದ್ದು, ಒಂದು ಲೀಟರ್‌ಗೆ ಸುಮಾರು ೩೦೦೦ ರೂ.ನ ಆಸುಪಾಸಿನಲ್ಲಿ ದರ ನಿಗದಿ ಮಾಡಿದ್ದಾರೆ. ಕೆಲವರು ತಮ್ಮ ಸ್ವಂತ ವಾಹನದಲ್ಲಿರುವ ಇಂಧನವನ್ನು ತೆಗೆದು ಉಳಿದವರಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಅಲ್ಲಿ ಭೀಕರ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಸದ್ಯದ ಪರಿಸ್ಥಿತಿಗೆ ತಕ್ಕಮಟ್ಟಿನಲ್ಲಿ ಯಾವುದೇ ಪರಿಹಾರ ಸಿಗುವ ಲಕ್ಷಣ ಗೋಚರಿಸುತ್ತಿಲ್ಲ. ಯಾಕೆಂದರೆ ಮುಂದಿನ ೧೨ ತಿಂಗಳಿನ ಅವಧಿಗೆ ಶ್ರೀಲಂಕಾ ಇಂಧನವನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂದು ಸ್ವತಹ ಅಲ್ಲಿನ ಇಂಧನ ಸಚಿವ ಕಂಚನ ವಿಜೇಶೇಖರ ತಿಳಿಸಿದ್ದಾರೆ. ಒಟ್ಟಿನಲ್ಲಿ ಅಲ್ಲಿನ ನಾಯಕರು ಮಾಡಿರುವ ಆರ್ಥಿಕ ತಪ್ಪಿನ ಪರಿಣಾಮ ಜನತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.