ಶ್ರೀಲಂಕಾದಲ್ಲಿ ತ್ವರಿತ ಹೂಡಿಕೆ ಹರಿವು ಹೆಚ್ಚಳಕ್ಕೆ ಭಾರತ ಬದ್ಧ

ಕೊಲೊಂಬೋ,ಜ. ೨೦- ಆರ್ಥಿಕ ಸಂಕಷ್ಟದಿಂದ ನಲುಗಿರುವ ದ್ವೀಪ ರಾಷ್ಟ್ರ “ಶ್ರೀಲಂಕಾ ಚೇತರಿಸಿಕೊಳ್ಳಲು ತ್ವರಿತ ಹೂಡಿಕೆಯ ಹರಿವು ಹೆಚ್ಚಿಸುವ ಭಾರತದ ಬದ್ಧತೆಯನ್ನು ವಿದೇಶಾಂಗ ಸಚಿವ ಡಾ.ಎಸ್ .ಜೈಶಂಕರ್ ಪುನರುಚ್ಚರಿಸಿದ್ದಾರೆ.
ಶ್ರೀಲಂಕಾದ ಆರ್ಥಿಕ ಚೇತರಿಕೆಗೆ ಭಾರತ ೩.೯ ಶತಕೋಟಿ ಡಾಲರ್ ಮೌಲ್ಯದ ನೆರವು ವಿಸ್ತರಿಸಿದೆ.ಈ ಮೂಲಕ ತೀವ್ರ ಆರ್ಥಿಕ ಪಾರು ಮಾಡಲು ಭಾರತ ಬೆಂಬಲಿಸಲಿದೆ ಎಂದು ಹೇಳಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಪ್ರಧಾನಿ ದಿನೇಶ್ ಗುಣವರ್ಧನೆ ಮತ್ತು ಇತರ ಗಣ್ಯರನ್ನು ಭೇಟಿಯಾಗಲಿರುವ ಡಾ. ಎಸ್ ಜೈಶಂಕರ್, ಅಲ್ಲಿನ ವಿದೇಶಾಂಗ ಸಚಿವ ಅಲಿ ಸಬ್ರಿ ಅವರೊಂದಿಗೆ ಮೂಲಸೌಕರ್ಯ, ಸಂಪರ್ಕ, ಇಂಧನ, ಉದ್ಯಮ ಮತ್ತು ಆರೋಗ್ಯದ ಸಹಕಾರದ ಕುರಿತು ಚರ್ಚೆ ನಡೆಸಿದ ವೇಳೆ ಈ ಅಭಿಪ್ರಾಯ ತಿಳಿಸಿದ್ದಾರೆ.
ಜೊತೆಗೆ ಔಷಧಗಳು, ಅಡುಗೆ ಅನಿಲ, ತೈಲ ಮತ್ತು ಆಹಾರ ಪದಾರ್ಥಗಳು, ಶ್ರೀಲಂಕಾ ಅಗತ್ಯತೆ ವಸ್ತುಗಳಿಗೆ ಆದ್ಯತೆ ನೀಡಲಾಗುವುದು ಈ ಸಂಬಂಧ ಶ್ರೀಲಂಕಾದೊಂದಿಗೆ ಮೂಲಸೌಕರ್ಯ, ಸಂಪರ್ಕ, ಇಂಧನ, ಉದ್ಯಮ ಮತ್ತು ಆರೋಗ್ಯದಲ್ಲಿ ಭಾರತ-ಶ್ರೀಲಂಕಾ ಸಹಕಾರವನ್ನು ಚರ್ಚಿಸಲಾಗಿದೆ” ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ವಿದೇಶಾಂಗ ಸಚಿವ ಅಲಿ ಸಬ್ರಿ, ಶ್ರೀಲಂಕಾ ಪ್ರಜಾಸತ್ತಾತ್ಮಕ ಸಮಾಜವಾದಿ ಗಣರಾಜ್ಯದ ಬಂದರು, ಶಿಪ್ಪಿಂಗ್ ಮತ್ತು ವಿಮಾನಯಾನ ಸಚಿವ ನಿಮಲ್ ಸಿರಿಪಾಲ ಡಿ ಸಿಲ್ವಾ, ಡಾ ಬಂಡುಲಾ ಗುಣವರ್ಧನ, ಸಾರಿಗೆ, ಹೆದ್ದಾರಿ ಮತ್ತು ಸಚಿವರೊಂದಿಗೆ ಭಾರತ-ಶ್ರೀಲಂಕಾ ಸಹಭಾಗಿತ್ವದ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
೨೦೨೨ರ ಫೆಬ್ರವರಿಯಲ್ಲಿ, ಭಾರತ ತನ್ನ ಇಂಧನ ಕೊರತೆ ನೀಗಿಸಲು ಶ್ರೀಲಂಕಾಕ್ಕೆ ಸಹಾಯ ಮಾಡಲು, ಕ್ರೆಡಿಟ್ ಲೈನ್ ಮೂಲಕ ಇಂಡಿಯನ್ ಆಯಿಲ್ ಕಂಪನಿಯಿಂದ ೫೦೦ ದಶಲಕ್ಷ ಮೌಲ್ಯದ ಡಾಲರ್ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಭಾರತ ಮತ್ತು ಚೀನಾದೊಂದಿಗೆ ಸಾಲ ಪುನರ್‌ರಚನೆ ಕುರಿತು ಮಾತುಕತೆ ಯಶಸ್ವಿಯಾಗಿದೆ.”ಈ ನಿಟ್ಟಿನಲ್ಲಿ ಚರ್ಚೆ ಮುಂದುವರೆಸುತ್ತಿದ್ದೇವೆ ಎಂದು ಶ್ರೀಲಂಕಾದ ಅಧ್ಯಕ್ಷ ಮಾಧ್ಯಮ ವಿಭಾಗದ ಪತ್ರಿಕಾ ಪ್ರಕಟಣೆ ತಿಳಿಸಿದೆ.