ಶ್ರೀರೇವಣಸಿದ್ದೇಶ್ವರ ಗುಡ್ಡ: ಕಾಳಗಿಯಿಂದ-ಕಮಲಾಪೂರಕ್ಕೆ ಸ್ಥಳಾಂತರ ಖಂಡಿಸಿ ಪ್ರತಿಭಟನೆ

ಕಾಳಗಿ:ಸೆ.1:ತಾಲೂಕಿನ ರೇವಗ್ಗಿ(ರಟಕಲ್) ಐತಿಹಾಸಿಕ ತಾಣ ಶ್ರೀರೇವಣಸಿದ್ದೇಶ್ವರ ಗುಡ್ಡವನ್ನು ಜನಾಭಿಪ್ರಾಯಕ್ಕೆ ಮನ್ನಣೆ ನೀಡದೆ, ಇಲ್ಲಿಯ ಭಕ್ತರ ಕಠೋರವಾಗಿರುವ ವಿರೋಧಗಳ ಮಧ್ಯೆಯೂ ಧಿಡೀರನೆ ಕಾಳಗಿಯಿಂದ-ಕಮಲಾಪೂರಕ್ಕೆ ಸ್ವಿಪ್ಟ್ ಮಾಡಿರುವುದು ಸರ್ಕಾರದ ಆದೇಶವನ್ನು ಕಂಡ ಇಲ್ಲಿಯ ನೂರಾರು ಗ್ರಾಮಗಳ ನಾಗರಿಕರು, ರಾಜ್ಯ ಹೆದ್ದಾರಿಯನ್ನು ಬಂದ್ ಮಾಡುವ ಮೂಲಕ ಕ್ರಾಂತಿಯನ್ನೇ ಪ್ರಾರಂಭಿಸಿದ್ದಾರೆ.
ಕಾಳಗಿ ತಾಲೂಕಿನಿಂದ-ಕಮಲಾಪೂರ ತಾಲೂಕಿಗೆ ರೇವಣಸಿದ್ಧನ ಗುಡ್ಡವನ್ನು ಸೇರ್ಪq ಮಾಡಿರುವ ವಿಷಯತಿಳಿಯುತ್ತಿದ್ದಂತೆ ಇಲ್ಲಿಯ ಸರ್ವ ಪಕ್ಷಗಳ ರಾಜಕೀಯ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು, ಮಠಾಧೀಶರು, ಯುವ ಶಕ್ತಿ ಸೇರಿ ಅನ್ಯಾಯವನ್ನು ಸರ್ಕಾರ ಸರಿಪಡಿಸುವಂತೆ ಒತ್ತಾಯಿಸಿ ನಡೆಸಿರುವ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಮಹಾಗಾಂವ ಕ್ರಾಸ್-ಚಿಂಚೋಳಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಕಂದಗೋಳ ಕ್ರಾಸ್‍ನಲ್ಲಿ ಗುರುವಾರ ಬೃಹತ್ ಪ್ರತಿಭಟನೆ ಮಾಡುವ ಮೂಲಕ ಕಾಳಗಿ ಗ್ರೇಡ್-1 ತಹಸೀಲ್ದಾರ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಪತ್ರಿ ಸಲ್ಲಿಸಿದರು.
ಭೊಗೋಳಿಕ ಹಾಗೂ ವೈಜ್ಞಾನಿಕ ಆಧಾರವನ್ನಿಟ್ಟುಕೊಂಡೇ ಗುಡ್ಡ ಕಾಳಗಿ ತಾಲೂಕಿನಲ್ಲಿರುತ್ತದೆ. ಮೇಲಾಗಿ ಇಲ್ಲಿಯ ಜನಾಭೀಪ್ರಾಯವೂ ಕೂಡ ಕಾಳಗಿ ತಾಲೂಕಿನ ವ್ಯಾಪ್ತಿಗೆ ಸೂಕ್ತವೆಂಬಂತೆ ಇದ್ದರೂ ಸಹ ಸೇರ್ಪಡೆ ಮಾಡಿರುವುದು ಎಷ್ಠರ ಮಟ್ಟಿಗೆ ಸರಿ ಎಂಬ ಪ್ರಶ್ನೆಯಾಗಿದೆ.
ಕೋನೆಗೆ ಯಾವ ಗ್ರಾಮಗಳಾದರೂ ಕಮಲಾಪೂರಕ್ಕೆ ಸೇರ್ಪಡೆಗೆ ನಮ್ಮ ಅಭ್ಯಾಂತರವಿಲ್ಲ ಆದರೆ ರೇವಣಸಿದ್ಧನ ಗುಡ್ಡ ಮತ್ತು ಗೋಣಗಿ ಈ ಎರಡನ್ನು ಯಾವ ಕಾರಣಕ್ಕೂ ಬಿಟ್ಟು ಕೊಡೇವು. ಈ ವಿಚಾರದಲ್ಲಿ ಈ ಭಾಗದ ನೂರಾರು ಗ್ರಾಮಗಳ ಸಾವಿರಾರು ಜನರು, ಹೊರಾಟಕ್ಕಾಗಿ ಸರ್ಕಾರದ ಜೊತೆಗೆ “ಸ್ನೇಹಕ್ಕು ಬದ್ಧ, ಸಮರಕ್ಕೂ ಸಿದ್ಧ” ಎಂಭ ಘೋಷ ವಾಕ್ಯಗಳೊಂದಿಗೆ ತಾಲೂಕಿನ ಭಕ್ತಗಣ ತಯ್ಯಾರಿ ನಡೆಸಿದ್ದಾರೆ.

‘ಸಿದ್ಧನಿಗಾಗಿ ಸಿದ್ಧರಾಮಯ್ಯನವರೆಗೂ ಪಾದಯಾತ್ರೆ’
ಈ ಭಾಗದ ಭಕ್ತರ ಭಾವನೆಗಳಿಗೆ ಹಾಗೂ ತಾಲೂಕಿನ ನಾಗರಿಕರ ಆಸೋತ್ತರಗಳಿಗೆ ಶಿಘ್ರವಾಗಿ ಸರ್ಕಾರ ಸ್ಪಂದಿಸದೆ ಇದ್ದರೆ, ಮುಂದಿನ ದಿನಗಳಲ್ಲಿ ಉಗ್ರಹೋರಾಟಕ್ಕಿಳಿದು ಕಾಳಗಿ ತಾಲೂಕಿನ ರೇವಣಸಿದ್ದೇಶ್ವರ ಗುಡ್ಡದಿಂದ ಬೆಂಗಳೂರಿನ ವಿಧಾನಸೌದದ ವರೆಗೂ 700ಕೀ.ಮೀ. ಪಾದಯಾತ್ರೆಗೆ ಸಜ್ಜಾಗಬೇಕಾಗುತ್ತದೆ ಎಂದ ಪ್ರತಿಭಟನಾಕಾರರು. ಗುಡ್ಡವನ್ನು ಕಾಳಗಿಯಿಂದ-ಕಮಲಾಪೂರಕ್ಕೆ ಸೇರ್ಪಡೆಮಾಡುತ್ತಿರುವ ವಿಚಾರದಲ್ಲಿ ಇಲ್ಲಿಯ ಸರ್ವ ಪಕ್ಷಗಳ ನಾಯಕರೂ ಕೂಡ ಒಂದಾಗಿ ಗುಡ್ಡದಗೋಸ್ಕರ ದುಡಿಯುತ್ತೇವೆ ಎಂದರು. ಒಂದು ವೇಳೆ ನಮ್ಮ ಹೋರಾಟ ನಾಟಕೀಯವಾಗಿದ್ದರೆ. ಕಲಬುರಗಿ ಉಸ್ತುವಾಗಿ ಸಚೀವರಾದ ಪ್ರೀಯಂಕ್ ಖರ್ಗೆ, ಸಂಸದರಾದ ಭಗವಂತ ಖೂಬಾ, ಉಮೇಶ ಜಾಧವ, ಶರಣಪ್ರಕಾಶ ಪಾಟೀಲ ಸೇಡಂ ಸೇರಿದಂತೆ ಎಲ್ಲಾ ಪಕ್ಷದ ಪ್ರಮುಖ ನಾಯಕರು ಬಂದು ಸಾಮಾನ್ಯ ಜನತೆಯ ಜನಾಭೀಪ್ರಾಯವನ್ನು ಬಹಿರಂಗವಾಗಿ ಸಂಗ್ರಹಿಸಿ, ಅಂತಿಮ ನಿರ್ಧಾರ ಕೈಗೊಳ್ಳಿ ಎಂದು ಮನವಿ ಮಾಡಿಕೊಂಡರು.
ಸುಳ್ಳುವರದಿಗಳನ್ನಾಧರಿಸಿ, ಈ ಭಾಗದ ಜನತೆ ಸುಮಾರು ಐದಾರು ವರ್ಷಗಳಿಂದಲೂ ಗುಡ್ಡ ಮತ್ತು ಗೊಣಗಿ ಗ್ರಾಮಗಳು ಯಾವ ಕಾರಣಕ್ಕೂ ಕಮಲಾಪೂರಕ್ಕೆ ಸೇರ್ಪಡೆ ಮಾಡಬಾರದೆಂಬ ಮನವಿಗಳನ್ನು ಗಾಳಿಗೆ ತೂರಿ ಆದೇಶ ಹೊರಡಿಸಿರುವುದು ಎಷ್ಠರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ರೇವಣಸಿದ್ದೇಶ್ವರ ಗುಡ್ಡದ ವಾರ್ಷಿಕ ಆದಾಯ 2ಕೋಟಿ:
ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ರೇವಗ್ಗಿ(ರಟಕಲ್) ಶ್ರೀ ರೇವಣಸಿದ್ದೇಶ್ವರ ಗುಡ್ಡದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ 2ಕೋಟಿ ಬರುತ್ತದೆ.
ಹಲವಾರು ವರ್ಷಗಳಿಂದ ಸಾಂಪ್ರದಾಯಿಕವಾಗಿ ನಡೆದು ಕೊಂಡು ಬಂದಿರುವ ಈ ದೇವಸ್ಥಾನಕ್ಕೆ ಕಾಳಗಿ ತಾಲೂಕಿನ ಪ್ರತಿಯೊಬ್ಬ ನಾಗರಿಕನ ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಮತ್ತು ಸರ್ವ ಧರ್ಮಗಳ ಸಾರ್ವಜನಿಕರ ಶ್ರಮ ದೇವಸ್ಥಾನದಲ್ಲಡಗಿದೆ.
ಈ ಭಾಗದ ಸಾರ್ವಜನಿಕರ ಶ್ರಮದ ಭಕ್ತಿತಾಣವಾಗಿರುವ ಗುಡ್ಡವನ್ನು ನಮ್ಮೇಲ್ಲರ ಗುಂಡಿಗೆ ಇದ್ದಂತೆ, ಈ ಗುಂಡಿಗೆಗಳಿಗೆ ಗುಂಡಿಕ್ಕಿದರೂ ಸಹ ಗುಡ್ಡ ಬಿಡೇವು ಎಂಬ ನಿರ್ಧಾರಕ್ಕೆ ಹೋರಾಟಗಾರರು ಸಿದ್ಧರಾಗಿದ್ದಾರೆ. ಸರ್ಕಾರ ನಮ್ಮ ಗುಡ್ಡ ನಮಗೆ ಬುಡುತ್ತಾರೆಂಬ ಅಪಾರ ನಂಬಿಕೆಯೂ ನಮಗಿದೆ.
ರೇವಗ್ಗಿ, ರಟಕಲ್, ಗೊಣಗಿ, ಕಂದಗೋಳ, ಬೆಡಸೂರ, ಅರಣಕಲ್, ಮುಕರಂಬ, ಕಂಚಿನಾಳ, ಹುಲಸಗೂಡ, ಹುಳಗೇರಾ, ವಟವಟಿ, ಹೇರೂರ(ಕೆ), ಸೆಳ್ಳಗಿ, ಜೀವನಮಾಡಗಿ, ಕಲ್ಲಹಿಪ್ಪರಗಾ, ಚಿಂಚೋಳಿ(ಎಚ್) ಸೇರಿದಂತೆ ಸಾವಿರಾರು ಜನ ಹೋರಾಟಗಾರರು ಪ್ರತಿಭಟನೆಗೆ ಸಾಕ್ಷಿಯಾಗಿದ್ದರು.
ರಟಕಲ್ ವಿರಕ್ತ ಮಠದ ಸಿದ್ಧರಾಮ ಮಹಾಸ್ವಾಮಿಗಳು ಮತ್ತು ಹಿರೇಮಠದ ರೇವಣಸಿದ್ಧ ಶಿವಾಚಾರ್ಯರು, ಗೌರಿಗುಡ್ಡದ ರೇವಣಸಿದ್ಧ ಶರಣರು, ಸೂಗೂರ(ಕೆ)ಡಾ.ಚನ್ನರುದ್ರಮುನಿ ಶಿವಾಚಾರ್ಯರು, ಚಂದ್ರಶೇಖರಯ್ಯ ಸ್ವಾಮಿಜೀ, ಹೋರಾಟಗಾರ ಶರಣಬಸಪ್ಪ ಮಮಶೇಟ್ಟಿ, ವೀರಣ್ಣ ಗಂಗಾಣಿ, ಶಿವರಾಜ ಪಾಟೀಲ ಗೊಣಗಿ, ರೇವಣಸಿದ್ದ ಬಡಾ, ರಾಜಶೇಖರ ಗುಡದಾ, ಸಂತೋಷ ಹಂದ್ರೂಳಿ, ರೇವಣಸಿದ್ದಪ್ಪ, ಗೌರಿಶಂಕರ ಕಿಣ್ಣಿ, ಶರಣು ಬೈರನ್, ಮಲ್ಲಿನಾಥ ಮುಚ್ಚಟ್ಟಿ, ಮಲ್ಲು ಮರಗುತ್ತಿ, ರಾಜು ಜಾಧವ ಸೇರಿದಂತೆ ಅನೇಕರಿದ್ದರು.