
ದೇವದುರ್ಗ,ಮಾ.೦೩- ಜಗದ್ಗುರು ಶ್ರೀರೇಣುಕಾಚಾರ್ಯರ ಜಯಂತಿ ಅದ್ದೂರಿಯಾಗಿ ಆಚರಣೆ ಮಾಡಲು ಗಬ್ಬೂರು ಶ್ರೀಬೂದಿಬಸವೇಶ್ವರ ಮಠದಲ್ಲಿ ಜರುಗಿದ ವೀರಶೈವ ಲಿಂಗಾಯತ ಸಮುದಾಯದ ಪೂರ್ವಭಾವಿ ಸಭೆಯಲ್ಲಿ ಗುರುವಾರ ತೀರ್ಮಾನ ಕೈಗೊಳ್ಳಲಾಯಿತು.
ಜಿಪಂ ಮಾಜಿ ಸದಸ್ಯ ಸದಾಶಿವಯ್ಯ ತಾತ ಮಾತನಾಡಿ, ಮಾ.೬ರಂದು ಪಟ್ಟಣದಲ್ಲಿ ವೀರಶೈವ ಧರ್ಮದ ಮೂಲಪುರುಷ ಶ್ರೀರೇಣುಕಾಚಾರ್ಯರ ಜಯಂತಿ ಅದ್ದೂರಿಯಾಗಿ ಆಚರಣೆ ಮಾಡಲಾಗುವುದು. ಕರೊನಾ ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಸರಳವಾಗಿ ಆಚರಣೆ ಮಾಡಲಾಗಿದೆ.
ಅಂದು ಬೆಳಗ್ಗೆ ಶ್ರೀಮಠದ ಒಳಗಿನ ದೇವಸ್ಥಾನದಿಂದ ಶ್ರೀರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ವಿವಿಧ ಬಡಾವಣೆಗಳ ಮೂಲಕ ಶ್ರೀಬೂದಿ ಬಸವೇಶ್ವರ ದೇವಸ್ಥಾನದವರೆಗೆ ಮಾಡಲಾಗುವುದು. ಮೆರವಣಿಗೆ ಉದ್ದಕ್ಕೂ ಮಹಿಳೆಯರ ಕುಂಭ ಕಳಸ, ವಿವಿಧ ಭಾಜಭಜಂತ್ರಿ, ಕಲಾವಿದರ ತಂಡ ಭಾಗವಹಿಸಲಿವೆ. ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಮುಖಂಡರಾದ ಬಸವಲಿಂಗಯ್ಯ ಸ್ವಾಮಿ ಚಿಕ್ಕಮಠ, ಸೂಗಪ್ಪಗೌಡ ಪೊಪಾ, ಸಂಗಪ್ಪಗೌಡ, ಶರಣಪ್ಪಗೌಡ ಹರವಿ, ಅಮರೇಶ ತಾತ, ಸಿದ್ದರಾಮಪ್ಪಗೌಡ, ಚನ್ನಬಸಯ್ಯ ಸ್ವಾಮಿ, ಗೂಳಯ್ಯ ಸ್ವಾಮಿ, ಶೇಖರಯ್ಯಸ್ವಾಮಿ, ಮರಿಗೌಡ ಮಂದಕಲ್, ಅಯ್ಯನಗೌಡ ಕಾತರಕಿ, ಚನ್ನಬಸವ ಸಾಹು ಇತರರಿದ್ದರು.