ಶ್ರೀರೇಣುಕಾಚಾರ್ಯರ ಜಯಂತಿ ಆಚರಣೆ

ಸಂಡೂರು:ಮಾ:27: ಸಂಡೂರಿನಲ್ಲಿ ಶುಕ್ರವಾರ ಬೇಡಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲಾಯಿತು. ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಗೆ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮಿಗಳು ಚಾಲನೆ ನೀಡಿದರು.
ಮೆರವಣಿಗೆಯ ನಂತರ ಬೇಡಜಂಗಮ ಕ್ಷೇಮಾಭಿವೃದ್ಧಿ ಸಂಘದ ಜಾಗದಲ್ಲಿ ಎಚ್.ಎಂ. ಜಂಬಯ್ಯ ಮತ್ತವರ ಕುಟುಂಬದವರು ನಿರ್ಮಿಸುತ್ತಿರುವ ಶ್ರೀರೇಣುಕಾಚಾರ್ಯರ ಮಂದಿರಕ್ಕೆ ಚಾಲನೆ ನೀಡಲಾಯಿತು.
ಸಂಘದ ಗೌರವ ಅಧ್ಯಕ್ಷರಾದ ಕೆ.ಎಂ. ವೀರಯ್ಯ, ಎಚ್.ಎಂ. ಜಂಬಯ್ಯ, ಮಾಜಿ ಅಧ್ಯಕ್ಷ ಎಸ್.ಎಂ. ಗಿರೀಶ್, ಮುಖಂಡರಾದ ಎಚ್.ಎಂ. ವಿನಾಯಕ, ಎಚ್.ಎಂ. ಸಂಪತ್, ಬಿ.ಎಂ. ಮಂಜುಳಾ, ಎಚ್.ಎಂ. ವಿಶ್ವನಾಥ, ಬಿ.ಎಂ. ಕುಮಾರಸ್ವಾಮಿ, ಎಂ.ವಿ. ಹಿರೇಮಠ್, ಎಚ್.ಎಂ. ಶರಣಬಸಯ್ಯ, ಅಮರೇಶಯ್ಯಸ್ವಾಮಿ, ವಿ.ಎಂ. ಶರಣಯ್ಯ, ವಿ.ಎಂ. ನಾಗರಾಜ, ಎಚ್.ಎಂ. ಗುರುಬಸವರಾಜ, ಬಿ.ಎಂ. ಸೋಮಶೇಖರ್, ಎಚ್.ಎಂ. ಸಂತೋಷ್, ಎಚ್.ಎಂ. ಚರಂತಯ್ಯ, ಜೆ.ಎಂ. ಪರಮೇಶ್ವರಯ್ಯ, ಎಚ್.ಎಂ. ತೋಟಪ್ಪಯ್ಯ, ಎ.ಎಂ.ಪಿ. ಕೊಟ್ರೇಶ್, ಎ.ಎಂ.ಪಿ. ಸಿದ್ರಾಮಯ್ಯ, ಪಂಪಯ್ಯಸ್ವಾಮಿ ಉಪಸ್ಥಿತರಿದ್ದರು.