ಶ್ರೀರಾಮ ಸೇನೆಯಿಂದ ಪತ್ರಕರ್ತರಿಗೆ ಹಬೆ ಯಂತ್ರ ವಿತರಣೆ

ದಾವಣಗೆರೆ.ಮೇ.೧೭; ಕೊರೊನಾದ ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಕುಟುಂಬವನ್ನು ಲೆಕ್ಕಿಸದೆ ದಾವಣಗೆರೆ ನಗರದಲ್ಲಿನ ಕೊರೊನಾದ ಅಟ್ಟಹಾಸದ ಮಾಹಿತಿಯನ್ನು ನಗರದ ತುಂಬಾ ಸಂಚರಿಸುತ್ತಾ  ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿರುವ  ನಗರದ ಪತ್ರಕರ್ತರಿಗೆ ಶ್ರೀ ರಾಮಸೇನೆ ವತಿಯಿಂದ ಹಬೆಯಂತ್ರ ನೀಡಲಾಗಿದೆ ಎಂದು ಸೇನೆಯ ಜಿಲ್ಲಾಧ್ಯಕ್ಷ ಮಣಿಸರ್ಕಾರ್ ಹೇಳಿದರು.ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ   ಸದಸ್ಯರಿಗೆ ಹಬೆಯಂತ್ರ ವಿತರಣೆ ಮಾಡಿ ಮಾತನಾಡಿದ ಅವರು ಪತ್ರಕರ್ತರ ಆರೋಗ್ಯ ಹಿತದೃಷ್ಟಿಯಿಂದ ಹಬೆ ಯಂತ್ರವನ್ನು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಪೊಲಿಸ್ ಸಿಬ್ಬಂದಿಗಳಿಗೆ ೨೫೦ ಹಬೆ ಯಂತ್ರ ನೀಡಲಾಗುವುದು ಎಂದರು.ವರದಿಗಾರರ ಕೂಟದ ಅಧ್ಯಕ್ಷರಾದ ಜಿ.ಎಂ.ಆರ್ ಆರಾಧ್ಯ ಮಾತನಾಡಿ ಪತ್ರಕರ್ತರು ತಮ್ಮ ಜೀವ ಲೆಕ್ಕಿಸದೇ ಕೊರೊನಾ ವಾರಿಯರ್ ಗಳಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಜಾಗರೂಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ಮನವಿ ಮಾಡಿದರು.  ಈ ಸಂದರ್ಭದಲ್ಲಿ  ಶ್ರೀರಾಮ ಸೇನಾ ರಾಜ್ಯ ಸಂಪರ್ಕ್ ಪ್ರಮುಖ್ ಪರಶುರಾಮ್ ನಡುಮನಿ, ಜಿಲ್ಲಾ ಉಪಾಧ್ಯಕ್ಷ ಆಲೂರು ರಾಜಶೇಖರ್,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಗರ್, ಜಿಲ್ಲಾ ಸಂಪರ್ಕ ಪ್ರಮುಖ ವಿವೇಕ್ ಮೂರ್ತಿ, ಜಿಲ್ಲಾ ಹೋರಾಟ ಪ್ರಮುಖ  ರಮೇಶ್, ಮಾಧ್ಯಮ ಪ್ರಮುಖ್ ವಿನೋದ್ ರಾಜ್,   ಜಿಲ್ಲಾ ವ್ಯವಸ್ಥಾಪಕ  ಸುನೀಲ್ ವಾಲಿ ಜಿಲ್ಲಾ ಖಜಾಂಚಿ ಶ್ರೀಧರ್  ರಾಹುಲ್  ಮತ್ತಿತರರು ಭಾಗಿಯಾಗಿದ್ದರು.