ಶ್ರೀರಾಮ ಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನೆ ನಿಮಿತ್ಯ ವಿವಿಧ ಕಾರ್ಯಕ್ರಮ

ಬೀದರ:ಜ.18: ಜ.22ರಂದು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 1 ರ ವರೆಗೆ ಅಯೋಧ್ಯಯ ನವನಿರ್ಮಿತ ರಾಮ ಮಂದಿರದಲ್ಲಿ ಶ್ರೀರಾಮ ಲಲ್ಲಾ ಇವರ ಮೂರ್ತಿ ಪ್ರಾಣಪ್ರತಿಷ್ಠಾಪನೆ ಜರುಗಲಿದೆ. ಈ ನಿಮಿತ್ಯ ಬೀದರ ಜಿಲ್ಲಾದ್ಯಂತ ವಿಶ್ವ ಹಿಂದು ಪರಿಷತ್ತು ಮತ್ತು ಶ್ರೀ ಪಾಪನಾಶ ಮಹಾದೇವ ಮಂದಿರದ ಟ್ರಸ್ಟ್ ವತಿಯಿಂದ ಈ ಕೆಳಗಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.
ಆಯಾ ಮಂದಿರಗಳಲ್ಲಿ ಪ್ರತಿಷ್ಠಾಪನೆಯಾಗುವ ದಿನ ವಿವಿಧ ದೇವತೆಗಳ ಭಜನೆ, ಕೀರ್ತನೆ, ಪೂಜೆ ಮತ್ತು ಆರತಿ ಮಾಡುವುದು, ಶ್ರೀರಾಮ ಜಯರಾಮ ಜಯಜಯರಾಮ ಈ ವಿಜಯ ಮಹಾಮಂತ್ರವನ್ನು ಸಾಮೂಹಿಕವಾಗಿ 108 ಬಾರಿ ಜಪಿಸುವುದು. ಜೊತೆಗೆ ಹನುಮಾನ ಚಾಲಿಸಾ, ರಾಮರಕ್ಷಾ ಸ್ತೋತ್ರ ಪಠಣ ಮಾಡಬಹುದು. ಸಂಜೆ ಸೂರ್ಯಾಸ್ತದ ಮೇಲೆ ತಮ್ಮ ತಮ್ಮ ಮನೆಗಳ ಮುಂದೆ ಕನಿಷ್ಠ 5 ದೀಪಗಳನ್ನು ಬೆಳಗಿಸುವುದು, ಪ್ರಾಣ ಪ್ರತಿಷ್ಠಾಪನೆಯ ಅಯೋಧ್ಯಯಲ್ಲಿನ ಸಮಯ 11 ರಿಂದ 1 ಗಂಟೆಯವರೆಗೆ ಎಲ್ಲಾ ಟಿ.ವಿ. ಮಾಧ್ಯಮಗಳಲ್ಲಿ ನೇರ ಪ್ರಸಾರ ಇರುತ್ತದೆ. ಅದನ್ನು ಎಲ್ಲರು ಗಮನವಿಟ್ಟು ತಪ್ಪದೇ ವೀಕ್ಷಿಸಬೇಕು. ಬೀದರ ನಗರದಲ್ಲಿಯ ನಮ್ಮ ಕಾರ್ಯಕ್ರಮಗಳು ಹೀಗಿವೆ.
ಕಾರ್ಯಕ್ರಮದ ವಿವರಗಳು: ದಿನಾಂಕ: 01-01-2024 ರಿಂದ 15-01-2024 ರ ವರೆಗೆ ಅಯೋಧ್ಯಯ ಮಂತ್ರಾಕ್ಷತೆ ಫೆÇೀಟೊ ಮತ್ತು ಕರ ಪತ್ರ ಮನೆ ಮನೆಗೆ ವಿತರಣೆ ಮಾಡುವುದು ಮುಗಿದಿದೆ. ಜಿಲ್ಲೆಯ ಸಣ್ಣ ಮತ್ತು ದೊಡ್ಡ ದೇವಸ್ಥಾನಗಳ ಸ್ವಚ್ಛತೆ ದಿನಾಂಕ: 16-01-2024 ರಿಂದ ಪ್ರಾರಂಭವಾಗಿದೆ. ದಿನಾಂಕ: 17-01-2024 ರಂದು ಸರಸ್ವತಿ ಶಾಲೆಯ ಸಭಾ ಭವನದಲ್ಲಿ ದೇವಸ್ಥಾನಗಳ ಅರ್ಚಕರು ಮತ್ತು ಆಡಳಿತ ಮಂಡಳಿಯವರಿಗೆ 3ನೇ ಬೈಠಕ್ ಕರೆಯಲಾಗಿದೆ. ಅವರಿಗೆ ಸುಂದರ ಭಜನೆ, ಸತ್ಸಂಗ ಪ್ರವಚನ ಏರ್ಪಡಿಸಿ, ದಿನಾಂಕ: 24-01-2024 ರಂದು ಬೆಳಿಗ್ಗೆ 11 ರಿಂದ 1 ಗಂಟೆಯವರೆಗೆ ರಾಮ ಪ್ರತಿಷ್ಠಾನೆಯ ಟಿ.ವಿ. ಮಾಧ್ಯಮದಲ್ಲಿ ನೇರ ಪ್ರಸಾರ ವೀಕ್ಷಣೆ ಮಾಡುವುದು.ದಿನಾಂಕ: 22-01-2024 ರ ಸೋಮವಾರದಂದು ಮೂರ್ತಿ ಪ್ರತಿಷ್ಠಾಪನೆಯ ನಿಮಿತ್ಯ ಜಿಲ್ಲೆಯ ಎಲ್ಲಾ ಮಂದಿರ ಮನೆ ಮನೆಗಳಿಗೂ ಅಲಂಕಾರಗೊಳಿಸಿ, ಹಬ್ಬದ ವಾತಾವರಣ ನಿರ್ಮಿಸಿ, ರಂಗೋಲಿ ಹಾಕಿ ಸಜ್ಜುಗೊಳಿಸುವುದು. ಇದೊಂದು ದೀಪಾವಳಿ ಹಬ್ಬದಂತೆಯೇ ಆಚರಿಸುವುದು. ಎಲ್ಲಾ ಸದ್ಭಕ್ತರು ತಮಗೆ ಅನುಕೂಲವಿರುವ ಹತ್ತಿರ ಯಾವುದೇ ದೇವಸ್ಥಾನದಲ್ಲಿ ಭಾಗವಹಿಸಬೇಕಾಗಿ ವಿನಂತಿ.
ವಿಶೇಷವೆಂದರೆ, ದಿನಾಂಕ: 22-01-2024 ರಂದು ಬೀದರ ನಗರ ದೇವತೆಯಾದ ಪಾಪನಾಶ ಮಹಾದೇವ ದೇವಸ್ಥಾನದಲ್ಲಿ ದೇವಸ್ಥಾನವು ಅತೀ ಮಹತ್ವ ಹೊಂದಿದೆ. ಶ್ರೀರಾಮನು ಇಲ್ಲಿಂದ ಹಾದು ಹೋಗುವಾಗ ಈ ಲಿಂಗ ಉದ್ಭವವಾಗಿದೆ. ಅಂಥ ಒಂದು ಶ್ರೇಷ್ಠ ದೇವಸ್ಥಾನದಲ್ಲಿ ಪುಣ್ಯಪ್ರದವಾದ ಪಾಪನಾಶದಲ್ಲಿ ವಿಶ್ವಹಿಂದು ಪರಿಷತ್ತು ಮತ್ತು ಮಹಾದೇವ ಟ್ರಸ್ಟ್ನವರು ಮುಂದೆ ಬಂದು, ಲಕ್ಷ??ದೀಪೆÇೀತ್ಸವ ಏರ್ಪಡಿಸಲು ಮುಂದೆ ಬಂದಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಯಿಂದ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ, ಸಂಜೆ 6 ಗಂಟೆಯಿಂದ ದೀಪಗಳನ್ನು ಪ್ರಜ್ವಲಿಸುವುದು ಕಾರ್ಯಕ್ರಮವಿರುತ್ತದೆ. ಉತ್ತಮ ರಂಗೋಲಿ ಬಿಡಿಸಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು.
ಇದಲ್ಲದೇ ಅದೇ ದಿನಾಂಕದಂದು ಬೃಹತ್ ಸತ್ಸಂಗ ಮತ್ತು ಸಂಗೀತ ಕಾರ್ಯಕ್ರಮ ಜೋಡಿಸಿಕೊಂಡಿದ್ದೇವೆ. ಕಾರಣ ಸರ್ವ ಭಕ್ತಾದಿಗಳು ತಮ್ಮ ತಮ್ಮ ಯೋಗ್ಯತೆಗೆ ಮೀರಿ ಈ ಕಾರ್ಯಕ್ರಮಕ್ಕೆ ಸಹಾಯ ಹಸ್ತ ನೀಡಿ, ಯಶಸ್ವಿಗೊಳಿಸಬೇಕಾಗಿ ವಿನಂತಿ. ಎಲ್ಲಾ ಇಷ್ಟಮಿತ್ರ ಬಂಧುಗಳು ಬಂದು, ಪಾಪನಾಶ ಮಹಾದೇವ ದರ್ಶನ ಪಡೆದು, ಪುನೀತರಾಗಬೇಕಾಗಿ ವಿನಂತಿ. ಕಾರ್ಯಕ್ರಮಗಳು ಮುಗಿದ ನಂತರ ಸಂಜೆ 8 ಗಂಟೆಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಪಾಪನಾಶ ದೇವಸ್ಥಾನದ ಅಧ್ಯಕ್ಷರಾದ ಚಂದ್ರಕಾಂತ ಶೆಟಕಾರ ಹಾಗೂ ವಿಶ್ವ ಹಿಂದು ಪರಿಷತ್ತ್ ಜಿಲ್ಲಾಧ್ಯಕ್ಷರಾದ ಸತೀಶಕುಮಾರ ನೌಬಾದೆ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ