ಶ್ರೀರಾಮ ಲಕ್ಷ್ಮಣ ಸೀತೆ ಹನುಮಂತ ವೇಷಧಾರಿಗೆ ದ್ವಿತೀಯ ಸ್ಥಾನ

ತಾಳಿಕೋಟೆ : ಜ.18: ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಯಲ್ಲಿ ಭವ್ಯ ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ಐತಿಹಾಸಿಕ ಅವಿಸ್ಮರಣೀಯ ಸಂದರ್ಭದಲ್ಲಿ ತಾಳಿಕೋಟೆ ಪಟ್ಟಣದ ಸಮಸ್ತ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಆಯೋಜಿಸಲಾದ ಛದ್ಮವೇಷಧಾರಿಗಳ ಪ್ರದರ್ಶನದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಂತ ವೇಷದಾರಿ ಮಕ್ಕಳಲ್ಲಿ ಪಟ್ಟಣದ ಮಿಣಜಗಿ ಕ್ರಾಸ್‍ನಲ್ಲಿರುವ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ವತಿಯಿಂದ ಭಾಗವಹಿಸಿದ್ದ ಮೂರು ತಂಡಗಳು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿವೆ.
ಈ ಸ್ಪರ್ದೆಯಲ್ಲಿ ಭಾಗವಹಿಸಿದ್ದ ಶ್ರೀ ಘನಮಠೇಶ್ವರ ಆಂಗ್ಲ ಮಾಧ್ಯಮದ ಪ್ರೌಢ ಶಾಲೆಯ ಕು.ಗೌತಮ ಬದಾಮಿ, ಕು.ದಕ್ಷೆ ನವಲೆ, ಕು.ಶ್ರಾವಣಿ ಪೆÇೀಲಿಸಪಾಟಿಲ, ಕು.ಪ್ರಜ್ವಲ್ ಕುರಲೆ, ತಂಡ ಎರಡರಲ್ಲಿ ಕು.ಅಮೀತಾ ನವಲೆ, ಕು.ಕುಶಾಲ ಕುಂಬಾರ, ಕು.ಸಂಗಮೇಶ ಕಮತಗಿ, ಕು.ಶ್ರೀನಿವಾಸ ಚಿರಕನಹಳ್ಳಿ, ಕನಕ ಕನ್ನಡ ಮಾಧ್ಯಮ ಶಾಲೆಯ ಕು.ಶಿವರಾಜ ಕೊಲಕಾರ, ಕು.ಯುವರಾಜ ರಾಠೋಡ, ಕು.ಪ್ರಜ್ವಲ್ ಹೂಗಾರ, ಕು.ಶ್ರದ್ಧಾ ಯಾಳಗಿ, ದ್ವಿತೀಯ ಸ್ಥಾನಪಡೆದುಕೊಂಡಿದ್ದಾರೆ.
ಈ ವಿಧ್ಯಾರ್ಥಿಗಳ ಸಾಧನೆಗೆ ಶ್ರೀಘನಮಠೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಸ್.ಎಮ್ ಸಜ್ಜನ, ಹಾಗೂ ಆಡಳಿತಾಧಿಕಾರಿಯಾದ ಬಿ.ಜಿ.ಸಜ್ಜನ, ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.