ಶ್ರೀರಾಮ ಮಂದಿರ ನಿರ್ಮಾಣಕ್ಕೆ ೩೨ ಲಕ್ಷ ಕೂಡುಗೆ

ಕೆಜಿಎಫ್;ಜ:೨೧:ಉತ್ತರ ಪದೇಶದ ಅಯೋಧ್ಯೆಯಲ್ಲಿ ಉದ್ಘಾಟನೆಯಾಗುತ್ತಿರುವ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಕೆಜಿಎಫ್ ನಗರದ ನಾಗರೀಕರು ಸರಿ ಸುಮಾರು ೩೨ ಲಕ್ಷ ಕೂಡುಗೆಯನ್ನು ನೀಡಿರುವುದು ಸೇರಿದಂತೆ ಅಲ್ಲಿನ ದೇವಾಲಯದ ನಿರ್ಮಾಣ ಕಾಮಗಾರಿಗೆ ಬಳಸಲಾಗಿರುವ ಕಲ್ಲುಗಳ ಗುಣಮಟ್ಟವನ್ನು ಕೆಜಿಎಫ್ ನಗರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ರಾಕ್ ಮೆಕಾನಿಕ್ಸ್ ನ ವಿಜ್ಞಾನಿಗಳ ಪಾತ್ರವಿರುವುದರಿಂಮ ಅಯೋಧ್ಯೆ ಶ್ರೀರಾಮನಿಗೂ ಕರ್ನಾಟಕ ಅದರಲ್ಲೂ ಕೆಜಿಎಫ್ ನಗರಕ್ಕೆ ಅವಿನಾವುಭ ಸಂಭದವಿರುವುದು ನಮ್ಮಲ್ಲೆರ ಪುಣ್ಯವಾಗಿದೆ ಎಂದು ವಿಶ್ವಹಿಂದು ಪರಿಷತ್ ಮುಖಂಡ ಶಿಂಧೆ ಹಾಗೂ ಶ್ರೀರಾಮ ಆಚರಣಾ ಸಮಿತಿ ಅಧ್ಯಕ್ಷ ಮಂಜುನಾಥ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ೫೦೦ ವರ್ಷಗಳ ಹಿಂದು ಭಾದಂವರ ಕನಸು ೨೨ ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಸ್ಠಾಪನೆ ಮೂಲಕ ನನಸು ಆಗುತ್ತಿರುವುದು ನಮ್ಮಲೆರ ಸೌಭಾಗ್ಯವಾಗಿದ್ದು ನಮ್ಮಲ್ಲೆರಿಗೂ ದೀಪಾವಳಿ ಹಬ್ಬದಷ್ಟೆ ಸಂಭ್ರಮದಿಂದ ಆಚರಿಸಲು ತೀರ್ಮಾನಿಸಿದ್ದೇವೆ ನಗರದ ಸನಾತನ ಧರ್ಮ ಶಾಲೆ ಹಾಗೂ ೪ ನೇ ಅಡ್ಡ ರಸ್ತೆಯಲ್ಲಿರುವ ಶ್ರೀರಾಮನ ಮಂದಿರ ಹಾಗೂ ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಬಳಿಯಿರುವ ಅಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹೋಮ ಹವನ ಬೆಳ್ಳಿಗ್ಗೆಯಿಂದ ಪ್ರಾಣ ಪ್ರತಿಸ್ಠಾಪನೆ ನಡೆಯುವವರೆಗೂ ಭಜನೆಗಳನ್ನು ಅಯೋಜಿಸಲಾಗಿದೆ ಸಂಜೆ ಸನಾತನ ಧರ್ಮದಿಂದ ಶ್ರೀರಾಮನ ಹೊತ್ತ ಪಲ್ಲಕ್ಕಿಯು ೪ ನೇ ಅಡ್ಡ ರಸ್ತೆಯಲ್ಲಿರುವ ಶ್ರೀರಾಮಮಂದಿರಕ್ಕೆ ಆಗಮಿಸಿ ಶ್ರೀವೆಂಟಕರಮಣಸ್ವಾಮಿ ದೇವಾಲಯಕ್ಕೆ ತೆರಳಿ ಅಲ್ಲಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಲಿದೆ ಎಂದು ತಿಳಿಸಿದರು.
ಪ್ರಾಣ ಪ್ರತಿಸ್ಠಾಪನೆ ನಂತರ ಎಲ್ಲರು ಮನೆಗಳಲ್ಲಿ ೫ ದೀಪಗಳನ್ನು ಹಚ್ಚಿ ಹಿರಿಯರಿಂದ ತಲೆ ಮೇಲೆ ಆಕ್ಷತೆಯನ್ನು ಪೋಕ್ಷಣೆ ಮಾಡಿಸಿಕೊಳ್ಳಬೇಕು ಇದರಿಂದ ೫೦೦ ವರ್ಷಗಳ ಹೋರಾಟಕ್ಕೆ ಸಂತೃಪ್ತಿ ದೊರಕಲಿದೆ ಎಂದು ಹೇಳಿ ಮಂತ್ರಾಕ್ಷತೆಯು ಲಭಿಸದವರು ೬ ನೇ ಅಡ್ಡ ರಸ್ತೆಯಲ್ಲಿರುವ ಸನಾತನ ಧರ್ಮ ಸಭಾದಲ್ಲಿ ಮಂತ್ರಾಕ್ಷತೆ ಲಭಿಸಲಿದ್ದು ಎಲ್ಲರು ಆಗಮಿಸಿ ಮಂತ್ರಾಕ್ಷತೆಯನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹಿಂದುಪರ ಸಂಘಟನೆಗಳ ಮುಖಂಡರಾದ ಬಾಬು, ಪ್ರಸಾದ, ವಿಧ್ಯನಂದನ, ದೇಶಪಾಂಡೆ,ರಘುನಾಥ್,ಮಹೇಶ್ ಹಾಗೂ ಇತರರು ಹಾಜರಿದ್ದರು.