ಶ್ರೀರಾಮ ಭಕ್ತರಿಂದ ಪ್ರಭು ಶ್ರೀರಾಮನ ಭಾವಚಿತ್ರದ ಮೆರವಣಿಗೆ

ತಾಳಿಕೋಟೆ :ಜ.20: ಅಯೋಧ್ಯಾ ನಗರಿಯಲ್ಲಿ ಇದೇ ದಿ. 22 ರಂದು ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಹಿನ್ನೇಲೆ ಪಟ್ಟಣದ ಕಾಮನಕಟ್ಟಿ ಬಡಾವಣೆಯ ನವರಾತ್ರೋತ್ಸವ ಸಮಿತಿ ನೇತೃತ್ವದಲ್ಲಿ ಶ್ರೀರಾಮ ಭಕ್ತರು ಗುರುವಾರರಂದು ಪ್ರಭು ಶ್ರೀರಾಮಚಂದ್ರನ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸುವ ಮೂಲಕ ಬಡಾವಣೆಯಲ್ಲಿ ದೀಪೋತ್ಸವ ಕಾರ್ಯಕ್ರಮವನ್ನು ಕೈಗೊಂಡರು.
ಪಟ್ಟಣದ ಡೋಣಿ ತೀರದ ಹತ್ತಿರವಿರುವ ಪುರಾತನ ಶ್ರೀರಾಮ ಮಂದಿರದಿಂದ ಪ್ರಭು ಶ್ರೀರಾಮ ಚಂದ್ರನ ಭಾವಚಿತ್ರದ ಭವ್ಯ ಮೇರವಣಿಗೆಯು ಪ್ರಾರಂಭಗೊಂಡು ವಿವಿಧ ಪ್ರಮುಖ ರಸ್ತೆಗಳ ಮೂಲಕ ಹಾಯ್ದು ಕಾಮನಕಟ್ಟಿ ಬಡಾವಣೆಯ ಶ್ರೀದೇವಿ ಉತ್ಸವ ಮಂಟಪಕ್ಕೆ ತಲುಪಿತು.
ನಂತರ ಭಕ್ತಾಧಿಗಳು ದೀಪೋತ್ಸವ ಕಾರ್ಯಕ್ರಮದೊಂದಿಗೆ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಮಸ್ತ ಭಕ್ತಾಧಿಕಾರಿಗಳಿಗೆ ಮಹಾ ಪ್ರಸಾದ ವಿತರಿಸಲಾಯಿತು.
ಈ ಸಮಯದಲ್ಲಿ ಉತ್ಸವ ಕಮಿಟಿ ಅಧ್ಯಕ್ಷ ಚಂದ್ರಶೇಖರ ಬಬಲೇಶ್ವರ, ಶರಣಗೌಡ ಪಾಟೀಲ, ಸುರೇಶ ಬಬಲೇಶ್ವರ, ಪುರಸಭಾ ಸದಸ್ಯ ವಾಸುದೇವ ಹೆಬಸೂರ, ಜೈಸಿಂಗ್ ಮೂಲಿಮನಿ, ವಿವೇಕ ಬಬಲೇಶ್ವರ, ಸಂಗನಗೌಡ ಪಾಟೀಲ, ಸಚೀನ್ ಚಿಕ್ಕೋಡಿ, ಶರಣು ಕುಂಭಾರ, ಭೋರನ್ನ ಕುಂಭಾರ, ದ್ರಾಕ್ಷಾಯಿಣಿ ಚಿಕ್ಕೋಡಿ, ಗಂಗೂಬಾಯಿ ಮೇಲಿನಮನಿ, ಮೊದಲಾದವರು ಪಾಲ್ಗೊಂಡಿದ್ದರು.