ಶ್ರೀರಾಮ ನವಮಿ ನಿಮಿತ್ತ ಆನ್‌ಲೈನ್‌ನಲ್ಲಿ ಶ್ರೀರಾಮ ನಾಮಜಪ ಯಜ್ಞ ಸಂಪನ್ನ !

ಮಂಗಳೂರು, ಎ. ೨೨- ಶ್ರೀರಾಮ ನವಮಿಯ ನಿಮಿತ್ತ ಸನಾತನ ಸಂಸ್ಥೆಯ ವತಿಯಿಂದ ಆನ್‌ಲೈನ್ ಸಾಮೂಹಿಕ ನಾಮಜಪ ಯಜ್ಞದ ಆಯೋಜನೆ, ೨೯೦೦ ಕ್ಕೂ ಅಧಿಕ ಮಂದಿಯಿಂದ ವೀಕ್ಷಣೆ !
ಶ್ರೀರಾಮನವಮಿಯ ನಿಮಿತ್ತ ಸನಾತನ ಸಂಸ್ಥೆಯ ವತಿಯಿಂದ ದಿನಾಂಕ ೨೧ ಏಪ್ರಿಲ್ ೨೦೨೧ ರಂದು ಮಧ್ಯಾಹ್ನ ೧೨ ಕ್ಕೆ ಆನ್ಲೈನ್‌ನಲ್ಲಿ ಶ್ರೀರಾಮ ನಾಮಜಪ ಯಜ್ಞದ ಆಯೋಜನೆ ಮಾಡಲಾಗಿತ್ತು, ಈ ಜಪಯಜ್ಞದಲ್ಲಿ ೨೯೦೦ ಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಚಂದ್ರ ಮೋಗೇರ್ ಇವರು ಮಾತನಾಡಿ ಈ ದಿನ ಪೃಥ್ವಿಯ ಮೇಲೆ ೧೦೦೦ಕ್ಕೂ ಹೆಚ್ಚು ಪಟ್ಟು ಶ್ರೀರಾಮನ ತತ್ತ್ವವು ಕಾರ್ಯನಿರತವಾಗಿರುತ್ತದೆ, ಅದಕ್ಕಾಗಿ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ನಾಮಜಪ, ಶ್ರೀರಾಮರಕ್ಷಾಸ್ತೋತ್ರ ಮತ್ತು
ಶ್ರೀರಾಮನ ಇತರ ಉಪಾಸನೆ ಮಾಡುವುದರಿಂದ ಹೆಚ್ಚು ಪ್ರಮಾಣದಲ್ಲಿ ಶ್ರೀರಾಮತತ್ತ್ವವನ್ನು ಗ್ರಹಣ ಮಾಡಲು ಸಹಾಯವಾಗುತ್ತದೆ ಮತ್ತು ಶ್ರೀರಾಮನ ರಕ್ಷಾಕವಚವು ನಿರ್ಮಾಣವಾಗುತ್ತದೆ. ಸದ್ಯದ ಸಂಕಟ ಕಾಲವನ್ನು ಎದುರಿಸಲು, ಆಧ್ಯಾತ್ಮಿಕ ಪ್ರಗತಿಗಾಗಿ ಹಾಗೂ ಶೀಘ್ರವೇ ರಾಮರಾಜ್ಯದ ನಿರ್ಮಾಣವಾಗಲಿ ಎಂಬ ಉದ್ದೇಶದಿಂದ
ರಾಜ್ಯಾದ್ಯಂತ ಈ ಜಪಯಜ್ಞವನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದರು. ನಂತರ ೨೫ ನಿಮಿಷಗಳ ಕಾಲ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಈ ನಾಮ
ಜಪವನ್ನು ಮಾಡಲಾಯಿತು.