ಶ್ರೀರಾಮ ನವಮಿ ನಮ್ಮ ಹಿಂದುಗಳ ವಿನೋದ ಹಬ್ಬ

ಶ್ರೀರಾಮನವಮಿ ಯುಗಾದಿಯ ನಂತರ ಬರುವ ಹಿಂದುಗಳ ಮೊದಲ ಹುಟ್ಟು ಹಬ್ಬ ಅಯೋದ್ಯದಲ್ಲಿ ಹುಟ್ಟಿದ ಶ್ರೀರಾಮ ಚಂದ್ರಪ್ರಭುರವರ ಹುಟ್ಟು ಹಬ್ಬವನ್ನು ತನ್ನ ಹುಟ್ಟುಹಬ್ಬಕ್ಕಿಂತ ಹೆಚ್ಚಾಗಿ ಶ್ರದ್ದಾ ಭಕ್ತಿಯಿಂದ ಎಲ್ಲಾ ಜನಾಂಗದವರೂ ಪಾನಕ ಪನ್ನಾರಗಳನ್ನು ಹಂಚುತ್ತಾ ಸಂತೋಷವನ್ನು ಎಲ್ಲರೊಂದಿಗೆ ಹಚ್ಚಿಕೊಂಡು ಆನಂದಿಸುತ್ತಾರೆ. ಹಳ್ಳಿಗಳಲ್ಲಂತೂ ವಸಂತಋತುವಿನ ಚಿಗುರು ಕಾಣಿಗೆಲೆಗಳ ರೆಂಬೆಗಳನ್ನು ತಂದು ಅಂದ ಚಂದವಾಗಿ ಚಪ್ಪರ ಹಾಕಿ ಮಾವಿನ ಎಲೆಗಳ ತೋರಣಗಳಿಂದ ಸಿಂಗರಿಸಿ ಪಾಣಕ ಕೋಸಂಬರಿ ಪ್ರಸಾದವನ್ನು ಶ್ರೀರಾಮಚಂದ್ರನಿಗೆ ನೈವೇದ ಮಾಡಿ ಊರಿನಲ್ಲಿ ಡಂಗೂರ ಹಾಕಿಸಿ ಊರಿನ ಎಲ್ಲಾ ಜನರಿಗೂ ಪ್ರ್ರೀತಿಯಿಂದ ಪಾಣಕ ಪ್ರಸಾದವನ್ನು ಹಂಚುತ್ತಾರೆ. ಅದನ್ನು ನೋಡುವುದರಿಂದ ಕಣ್ಣಿಗೆ ಹಬ್ಬ ಮನಸ್ಸಿಗೆ ನೆಮ್ಮದಿ ಆನಂದ ಸಿಗುತ್ತದೆ. ಎಲ್ಲಾ ಶ್ರೀರಾಮ ದೇವಾಲಯಗಳಲ್ಲಿ ದೀಪಾಲಂಕಾರದಿಂದ ಸಿಂಗರಿಸಿ ಇಡೀ ಇಪ್ಪತ್ತನಾಲ್ಕು ಗಂಟೆಗೂ ಮೀರಿ ರಾಮಕೋಟೆ ಭಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಊರಿನ ಜನರನ್ನು ಭಕ್ತಿ ಪರಿವಶರನ್ನಾಗಿ ಮಾಡಿ ಆ ಶ್ರೀರಾಮ ಚಂದ್ರನ ಅಪಾರ ಶಕ್ತಿಯನ್ನು ಹಾಡಿ ಹೊಗಳಿ ಕೊಂಡಾದಿ ದೇವರ ಆಶೀರ್ವಾದವನ್ನು ಪಡೆಯುತ್ತಾರೆ. “ಎಲ್ಲಿ ರಾಮನೋ ಅಲ್ಲಿ ಹನುಮನು ಎಲ್ಲಿ ಹನುಮನೂ ಅಲ್ಲಿ ರಾಮನು” ಇದ್ದೇ ಇರುತ್ತಾರೆ ಆದ ಕಾರಣ ಶ್ರೀರಾಮನವಮಿ ದಿವಸ ಶ್ರೀರಾಮ ದೇವಾಲಯಗಲ್ಲದೆ ಎಲ್ಲಾ ಹನುಮನ ದೇವಾಲಯಗಳಲ್ಲಿಯೂ ಸಹ ಈ ಹಬ್ಬ ವಿಜೃಂಭಣೆ, ವಿನೋಧದಿಂದ ನಡೆಯುತ್ತದೆ.
ಶ್ರೀರಾಮರ ಹುಟ್ಟಿನ ವೃತ್ತಾಂತ ತಿಳಿಯೋಣ:-
ದಶರಥ ಮಹಾರಾಜರಿಗೆ ಮಕ್ಕಳಿಲ್ಲದ ಕಾರಾಣ ಪುತ್ರಕಾಮೇಷಿಯಜ್ಞವನ್ನು ಮಾಡುತ್ತಾರೆ, ಆಗ ಯಜ್ಞದೇವರು ಪ್ರತ್ಯಕ್ಷರಾಗಿ ಪಾಯಸ ತುಂಬಿದ ಪಾತ್ರೆಯನ್ನು ಕೊಟ್ಟು ನಿಮ್ಮ ಮಡದಿಯರಿಗೆ ಸಮಾನವಾಗಿ ಹಂಚಿ ಅಂತ ಹೇಳಿ ಅದ್ರುಸನಾಗುತ್ತಾರೆ ಆದರಂತೆ ದಶರಥ ಮಹಾರಾಜರು ತನ್ನ ಮೂರು ಮಡದಿಯರಿಗೆ ಸಮಾನಾಗಿ ಪಾಯಸ ಹಂಚುತ್ತಾರೆ. ಕೈಕೆ ಹುಟ್ಟು ಮಗನಿಗೆ ರಾಜ ಪಟ್ಟಾಭಿಷೇಕ ಅಂತ ರಾಜನಿಂದ ಅಭಯ ವಚನ ಸಿಕ್ಕಿದ್ದರಿಂದ ಮತ್ತು ಕೌಶಲ್ಯ ಪಟ್ಟದ ರಾಣಿಯಾಗಿದ್ದರಿಂದ ತನ್ನ ಮಗನಿಗೆ ರಾಜ ಸಿಂಹಾಸನ ಸಿಗುವುದೆಂದು ತಿಳಿದು ತಮ್ಮ ತಮ್ಮ ಪಾಯಸದ ಬಟ್ಟಲುಗಳನ್ನು ಭದ್ರವಾಗಿ ನೋಡಿಕೊಂಡಿದ್ದರು. ಸುಮಿತ್ರ ಉದಾಸೀನದಿಂದ ತನಗೆ ಹುಟ್ಟು ಮಗು ಹೇಗೂ ರಾಜನಾಗುವುದಿಲ್ಲ ಅಂತ ಕೆಟ್ಟ ಯೋಚನೆಯಿಂದ ತನಗೆ ಕೊಟ್ಟಿದ ಪಾಯಸದ ಬಟ್ಟಲಿನ ಮೇಲೆ ನಿಗಾ ಹಿಡದೇ ಬೇಜಾವಾಬ್ದಾರಿಯಿಂದ ಅದರ ಕಡೆ ಗಮನ ಕೊಡದ ಕಾರಣ ಗರುಡಪಕ್ಷಿ ಬಂದು ಆ ಬಟ್ಟಲನ್ನು ಎತ್ತಿಕೊಂಡು ಹೋಗಿ ಬಹಳ ದೂರದ ಒಂದು ಬೆಟ್ಟದ ಗುಡ್ಡದ ಮೇಲೆ ಇಟ್ಟು ಮಾಯವಾಯಿತು. ಆಗ ಸುಮಿತ್ರದೇವಿ ಚಿತ್ತಾ ಕ್ರಾಂತಳಾಗಿ ಭಯ ಭೀತಿಯಿಂದ ನಡೆದ ವಿಷಯವನ್ನು ಕೈಕೇ ಮತ್ತು ಕೌಶಲ್ಯ ದೇವಿಯ ಹತ್ತಿರ ಹೇಳಿ ದುಃಖದಿಂದ ಅಳತೊಡಗಿದಳು ದಶರಥಮಹಾರಾಜನಿಗೆ ಈ ವಿಷಯನ್ನು ತಿಳಿಸದೇ ಈ ಗಂಡಾಂತರದಿಂದ ನನ್ನನ್ನು ಪಾರು ಮಾಡುಬೇಕೆಂದು ಕೇಳಿಕೊಂಡಳು. ಆಗ ವಿದಿಯಿಲ್ಲದೆ ರಾಜನಿಗೆ ಗೊತ್ತಿಲ್ಲದಂತೆ ಕೈಕೇ ಸ್ವಲ್ಪ ಪಾಯಸ ಮತ್ತು ಕೌಶಲ್ಯ ಸ್ವಲ್ಪ ಪಾಯಸವನ್ನು ಸುಮಿತ್ರ ದೇವಿಗೆ ಕೊಟ್ಟು ಸಹಕರಿಸಿ ಸಮಾಧಾನಗೊಳಿಸಿ ಮೂರು ಹೆಂಗಸರು ಪಾಯಸವನ್ನು ಕುಡಿದರು. ಮೂರು ಜನ ಗರ್ಭವತಿಯಾಗಿ ಒಂಭತ್ತು ತಿಂಗಳ ನಂತರ ಕೈಕೇ ಮತ್ತು ಕೌಶಲ್ಯ ಒಂದೊಂದು ಮಗುವಿಗೆ ಮತ್ತು ಸುಮಿತ್ರ ಲಕ್ಷಣ ಶತ್ರುಷ್ಣಾ ಎಂಬ ಎರಡು ಮಕ್ಕಳಿಗೆ ಜನ್ಮ ನೀಡಿದಳು ಕಾರಣ ಕೈಕೇ ಅರ್ಧ ಪಾಯಸದಿಂದ ಲಕ್ಷ್ಮಣ ಮತ್ತು ಕೌಶಲ್ಯ ಅರ್ಧ ಪಾಯಸದಿಂದ ಶತ್ರುಷ್ಣಾ ಹುಟ್ಟಿದರು. ಗರುಡಪಕ್ಷಿ ಎತ್ತಿಕೊಂಡು ಹೋಗಿದ್ದ ಪಾಯಸವನ್ನು ಅಂಜಲಾದೇವಿಯು ಕುಡಿದಳು ಆದ್ದರಿಂದ ಅವಳ ಹೊಟ್ಟೆಯಲ್ಲಿ ಹನುಮಂತ ಜನನವಾದನು. ದಶರಥ ಅಂಶದಲ್ಲಿ ಹುಟ್ಟಿದ್ದರಿಂದ ಹನುಮಂತ ಶ್ರೀರಾಮಚಂದ್ರರ ಪರಮ ಭಕ್ತನಾಗಿ ಪರಾಕ್ರಮಿಯಾಗಿ ವಿಶ್ವಕ್ಕೆ ಆದರ್ಶ ದೇವನಾಗಿ ರಾಮನಿಗೆ ಜಯತಂದುಕೊಟ್ಟನು.
ಲಕ್ಷ್ಮಣ ಹುಟ್ಟಿದ ತಕ್ಷಣ ವಿರಹ ವೇದನೆಯಿಂದ ಅಳಲಾರಂಬಿಸಿದ ಎಷ್ಟೇ ಪ್ರಯತ್ನ ಮಾಡಿದರೂ ಯಾವ ರೀತಿ ಸಮಾದಾನ ಮಾಡಿದರೂ ಆಳು ನಿಲ್ಲಿಸದೇ ಹಾಲು ಕುಡಿಯದೇ ಹಠ ಮಾದಿ ನೆಮ್ಮದಿಯನ್ನು ಕೆಡಿಸಿದ. ಯಾವ ಯಂತ್ರ ಮಂತ್ರಗಳಿಗೆ ಅವನು ಅಳುವುದನ್ನು ನಿಲ್ಲಿಸಲಿಲ್ಲ ಆಗ ಸುಮಿತ್ರೆಯು ವಷಿಷ್ಠಮುನಿಗಳ ಹತ್ತಿರ ಹೋಗಿ ವಿಷಯ ತಿಳಿಸಲು ಅವರು ಯೋಗ ದೃಷ್ಟಿಯಿಂದ ಅವನ ಅಳುವಿನ ರಹಸ್ಯ ತಿಳಿದು ಲಕ್ಷ್ಮಣ ರಾಮನ ಅಂಶದಿಂದ ಹುಟ್ಟಿದ್ದರಿಂದ ಅವನನ್ನು ರಾಮನ ತೊಟ್ಟಿಲಲ್ಲಿ ಮಲಗಿಸು ಅಂತ ಹೇಳುತ್ತಾರೆ ಅದೇ ರೀತಿ ಇಬ್ಬರನ್ನು ಒಂದೇ ತೊಟ್ಟಿಲಿನಲ್ಲಿ ಮಲಗಿಸಲಾಗಿ ಅವನು ಅಳುವುದನ್ನು ನಿಲ್ಲಿಸಿ ಅನಂದದಿಂದ ಆಟವಾಡಿಕೊಂಡು ಬೆಳೆಯತೊಡಗಿದನು ಲಕ್ಷ್ಮಣ ಆತ್ಮವಾದರೆ ರಾಮನು ಪರಮಾತ್ಮ ಎರಡು ಆತ್ಮಗಳನ್ನು ಒಂದು ಕಡೆ ಸೇರಿದಾಗ ತಾನಾಗಿಯೇ ದುಃಖದುಮಾನಗಳು ಸಮಸ್ಯೆಗಳು ಮಾಯವಾಗಿ ಜೀವನದಲ್ಲಿ ಸದಾ ಆನಂದ ಸಿಗುತ್ತದೆ. ನಮ್ಮ ಆತ್ಮ ಪರಮಾತ್ಮ ಶ್ರೀರಾಮನಲ್ಲಿ ಸೇರಲು ಸತ್ಸಂಗದೊಂದಿಗೆ ಸದ್ಗುಣ, ಜೀವನ ಒಳ್ಳೆಯ ಯೋಚನೆಗಳೊಂದಿಗೆ ಯೋಗ ಜೀವನದಿಂದ “ಆಮರ ಈಮರ ರಾಮ” ಮಂತ್ರವನ್ನು ತಾರಕ ಮಂತ್ರ ಉಪದೇಶದಿಂದ ಸಾಧನೆ ಮಾಡಿದರೆ ಆರಾಮನಲ್ಲಿ ಆರಾಮಾಗಿ ಐಕ್ಯವಾಗಿ ಆನಂದಾನುಭೂತಿ ಮೋಕ್ಷವನ್ನು ಪಡೆಯಬಹುದು.
ರಾಮ ಮಂತ್ರ ಮಹಿಮೆ ತಿಳಿಯೋಣ:-
ರಾಮ ಮಂತ್ರ ಅಗಾಧವಾದ ಶಕ್ತಿಯನ್ನು ಹೊಂದಿದೆ, ರಾಮ ಬಾಣಕ್ಕೆ ಎದರು ಬಾಣವೇ ಇಲ್ಲ ಇದನ್ನು ತಾರಕ ಮಂತ್ರ ಅಂತ ಏಕೆ ಕರೆಯುತ್ತಾರೆ? ರಾಮ ಮಂತ್ರದಲ್ಲಿ ಮೂರು ಅಕ್ಷರಗಳಿಗೆ ಅವೇ ರಾ-ಆ-ಮ ರಾ ಎಂದರೆ ಹರಿ ಮ ಎಂದರೆ ಹರ ಆ ಎಂದರೆ ಆಂಜನೇಯ ಅಂದರೆ ಹರಿಹರ ಅಂಜನೇಯ ಸೇರಿ ರಾಮ ಆಗಿದೆ. ಇದು ಒಂದು ತ್ರಿವೇಣಿಸಂಗಮ ಮಂತ್ರ ಗಂಗ, ಯಮುನ, ಸರಸ್ವತಿ ತ್ರಿವೇದಿಸಂಗಮ ಅಲಹಾಬಾದಿನಲ್ಲಿದೆ, ಇದು ರಾ-ಎಂದರೆ ವಿಷ್ಣು ಆ ಎಂದರೆ ಬ್ರಹ್ಮ ಮತ್ತು ಮ ಎಂದರೆ ಮಹೇಶ್ವರ ರಾಮ ಮಂತ್ರವನ್ನು ಉಚ್ಚಾರಣೆ ಸಾಧನೆ ಜಪ ಮಾಡುವುದರಿಂದ ಮೂರು ದೇವರುಗಳ ಶಕ್ತಿ ಸಿಕ್ಕೇ ಸಿಗುತ್ತದೆ ಆದ್ದರಿಂದ ರಾಮ ಮಂತ್ರವನ್ನು ತಾರಕ ಮಂತ್ರ ಅಂತ ಕರೆಯುತ್ತೇವೆ. ಈ ಒಂದು ಮಂತ್ರವನ್ನು ಸಾಧನೆಗೈದರೆ ಸಾಕು ಹರಿಹರ ಬ್ರಹ್ಮ ಆಂಜನೇಯನ ಶಕ್ತಿ ನಮಗೆ ಲಭಿಸುತ್ತದೆ. ಈ ಮಂತ್ರದ ಪಠಣೆಯಿಂದ ದೇಹದಲ್ಲಿನ ಎಲ್ಲಾ ಶಕ್ತಿ ಕೇಂದ್ರಗಳಲ್ಲಿ ಪ್ರಾಣಶಕ್ತಿ ಜಾಸ್ತಿಯಾಗಿ ಜೀವ ಹೊಸ ಚೈತನ್ಯವನ್ನು ಹೊಂದುತ್ತದೆ. ಆದ್ದರಿಂದಲೇ ಏನು ಗೊತ್ತಿಲ್ಲದ ವಾಲ್ಮೀಕಿ “ಆಮರ ಈಮರ” ಮಂತ್ರದಿಂದ ರಾಮ ಮಂತ್ರವಾಗಿ ಆದರಿಂದಲೇ ಅಗಾದವಾದ ಶಕ್ತಿಯನ್ನು ಪಡೆದು ಪ್ರಪಂಚಕ್ಕೆ ಸಂಪೂರ್ಣ ರಾಮಾಯಣವನ್ನು ರಚಿಸಿ ವಿಶ್ವಕ್ಕೆ ನೀಡಲು ಆಯಿತು, ರಾಮಾಯಣದ ಒಳಾರ್ಥವಿಷ್ಟೇ.
ಪುರುಷ (ರಾಮ) ಪುರುಷೋತ್ತಮ ಪ್ರಕೃತಿ ಮಾತೆ ಸೀತೆ ಇದರಲ್ಲಿ ಜೀವನ ಮಾಡುವರೆಲ್ಲಾ ಮಾನವರು. ಧನಶಕ್ತಿ ರಾಮ, ಋಣಶಕ್ತಿ ಸೀತೆ, ಧನಶಕ್ತಿ ಸಾಧನೆಯಿಂದ ನಮ್ಮ ಒಳಗೆ ಇರುವ ರಾವಣ ಸ್ವರೂಪ ಐದು ಪಂಚೇಂದ್ರಿಗಳು ಮತ್ತು ಐದು ಕರ್ಮೇಂದ್ರಿಗಳನ್ನು ಹತೋಟಿಯಲ್ಲಿಟ್ಟು ತಾರಕಮಂತ್ರ ಸಾಧನೆಯಿಂದ ಆತ್ಮ ಪರಮಾತ್ಮನಲ್ಲಿ ಲೀನವಾಗಿ ಸದಾ ಆನಂದದಿಂದ ಪ್ರಪಂಚಕ್ಕೆ ಸೇವೆಗೈದು ಆದರ್ಶ ಆತ್ಮರಾಮನಾಗಬಹುದು ಶ್ರೀರಾಮನವಮಿ ಹಬ್ಬ ಎಲ್ಲರಿಗೂ ಸುಮಂಗಳವನ್ನು ಉಂಟುಮಾಡಿ ಜೀವನದಲ್ಲಿ ಎಲ್ಲರೂ ಸಾಧನೆಗೈದು ಆತ್ಮರಾಮಗಳಾಗಿ ಆದರ್ಶ ವ್ಯಕ್ತಿಗಳಾಗಿ ಬಾಳಲಿ ಅಂತ ಹಾರೈಸಿ ಆ ರಾಮನಲ್ಲಿ ಆಶೀರ್ವಾದ ಬೇಡುತ್ತೇನೆ.
ಇಂತಿ, ಡಾ. ಪೋಸ್ಟ್ ಎಂ.ನಾರಾಯಣಸ್ವಾಮಿ,
ಕವಿ ಲೇಖಕರು, ಗಲ್‌ಪೇಟೆ,
ಅಂಚೆ ಇಲಾಖೆ ಕೋಲಾರ.