ಶ್ರೀರಾಮ ನವಮಿ ಉತ್ಸವ, ಬೃಹತ ಶೋಭಾಯಾತ್ರೆರಾರಾಜಿಸಿದ ಕೇಸರಿ ದ್ವಜ, ಜಯಘೋಷ

ಶಹಾಬಾದ:ಎ.3:ನಗರದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಹಾಗೂ ಶ್ರೀರಾಮ ನವಮಿ ಸ್ವಾಗತ ಸಮಿತಿ ವತಿಯಿಂದ ಶ್ರೀರಾಮ ನವಮಿ ಉತ್ಸವ ಬೃಹತ್ ಶೋಭಾ ಯಾತ್ರೆ ನಡೆಸಲಾಯಿತು, ನಗರದ ಪ್ರತಿ ರಸ್ತೆಯಲ್ಲಿ ಕೇಸರಿ ದ್ವಜ ರಾರಾಜಿಸದರೆ, ಜಯಶ್ರೀರಾಮ ಜಯಘೋಷ ಮೊಳಗಿತು. ಬೆಳಗ್ಗೆ ಶ್ರೀಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶಾಸಕ ಬಸವರಾಜ ಮತ್ತಿಮಡು ಅವರು ಶ್ರೀಶರಣಬಸವೇಶ್ವರರಿಗೆ ಆರತಿ ಬೆಳಗಿ, ಬೃಹತ್ ಶ್ರೀರಾಮ ಮೂರ್ತಿಗೆ ಪೂಜೆ ಸಲ್ಲಿಸಿದರು. ನಂತರ ಸಾರ್ವಜನಿಕರಿಂದ ಸಾಮೂಹಿಕ ಶ್ರೀರಾಮ ತಾರಕ ಮಂತ್ರ, ಹಾಗೂ ಹನುಮಾನ ಚಾಲೀಸ್ ಪಠಿಸಲಾಯಿತು.

ಶಾಸಕ ಬಸವರಾಜ ಮತ್ತಿಮಡು ಅವರು ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಶ್ರೀಶರಣಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ, ರೈಲು ನಿಲ್ದಾಣ, ಮಜೀದ್ ವೃತ್ತ, ಮುಖ್ಯ ರಸ್ತೆಯಿಂದ ಶಾಸ್ತ್ರಿ ಚೌಕ, ಸುಭಾಷಚೌಕ, ಸರ್ದಾರ ವಲ್ಲಭಭಾಯಿ ಪಟೇಲ ವೃತ್ತಿದಿಂದ ಭಾರತ ಚೌಕ ಹನುಮಾನ ಮಂದಿರಕ್ಕೆ ತಲುಪಿತು.

ಮೆರವಣಿಗೆ ಉದ್ದಕ್ಕೂ ಯುವಕರು ಡಿಜೆ ಹಾಡಿಗೆ ಹೆಜ್ಜೆ ಹಾಕಿ, ಜಯಘೋಷ ಕೂಗಿದರು. ಶಾಸಕ ಮತ್ತಿಮಡು ಸೇರಿದಂತೆ ಮುಖಂಡರಿಗೆ ಯುವಕರು ಹೆಗಲ ಮೇಲೆ ಹೊತ್ತುಕೊಂಡು ಕುಣಿದರು. ಮೆರವಣಿಗೆ ಉದ್ದಕ್ಕೂ ಸಾರ್ವಜನಿಕರು ತಮ್ಮ ಮನೆಯ ಮುಂದೆ ರಂಗೋಲಿ ಹಾಕಿ, ಶ್ರೀರಾಮ ದೇವರ ಬೃಹತ ಮೂರ್ತಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು. ಮೆರವಣಿಗೆ ದಾರಿಯಲ್ಲಿ ಸ್ಥಳೀಯರು ಸ್ವಯಂ ಕುಡಿಯುವ ನೀರಿನ ವ್ಯವಸ್ಥೆ, ಪಾನಕ, ಪ್ರಸಾದ ವ್ಯವಸ್ಥೆ ಮಾಡಿದರು. ಭಾರತ ಚೌಕ ಹನುಮಾನ ಮಂದಿರಕ್ಕೆ ಮೆರವಣಿಗೆ ತಲುಪಿದ ನಂತರ ಮಹಾಮಂಗಳಾರತಿ ನೇರವೇರಿಸಿ, ಮೆರವಣಿಗೆ ಮುಕ್ತಾಯಗೊಳಿಸಲಾಯಿತು. ಮೆರವಣಿಗೆಯಲ್ಲಿ ವಿಹಿಂಪ. ಗೌರವ ಅಧ್ಯಕ್ಷ ಚಂದ್ರಕಾಂತ ಗೊಬ್ಬುರಕರ, ಅಧ್ಯಕ್ಷ ಬಸವರಾಜ ಸಾತಿಹಾಳ, ಬಜರಂಗದಳದ ಅಧ್ಯಕ್ಷ ಉದಯಕುಮಾರ ನಂದಾಗೌಳಿ, ವಿಹಿಂಪ ಕಾರ್ಯದರ್ಶಿ ಗೋವಿಂದ ಕುಸಾಳೆ, ನಗರದ ಗಣ್ಯರಾದ ದಿವ್ಯಾ ಹಾಗರಗಿ, ಅಣವೀರ ಇಂಗಿನಶೆಟ್ಟಿ, ನರೇಂದ್ರ ವಮಾ, ನಾಗರಾಜ ಮೇಲಗಿರಿ,ವಿಶ್ವರಾದ್ಯ ಬಿರಾಳ, ಆಕಾಶ ಮತ್ತಿಮಡು, ಗೋರಖನಾಥ ಶಾಖಾಪುರ, ದಿನೇಶ ಗೌಳಿ, ನಿಂಗಣ್ಣ ಹುಳಗೋಳ, ರಾಕೇಶ ಶರ್ಮಾ, ರವಿ ರಾಠೋಡ, ಅಮೂಲ, ಸಚೀನ ಛತ್ರಬಂಧ, ಮಹಾದೇವ ಗೊಬ್ಬುರಕರ್, ಅಜಯ ಬಿದ್ರೆ, ಅಭಿಷೇಕ, ದತ್ತಾ ಫಂಡ್, ಅನೀಲ ಬೊರಗಾಂವಕರ ಸೇರಿದಂತೆ ಸಾವಿರಾರು ಜನ ಯುವಕರು ಪಾಲ್ಗೊಂಡಿದ್ದರು.