
ಸಂಜೆವಾಣಿ ವಾರ್ತೆ
ಹೊಸಪೇಟೆ ಫೆ26: ಶ್ರೀ ರಾಮುಲು ಸಂಡೂರಿನಿಂದ ಸ್ಪರ್ಧಿಸಿದ್ದಾದರೆ ಸೋಲು ನಿಶ್ಚಿತ ಇಂತಹ ಸೋಲುಣಿಸಲು ಕ್ಷೇತ್ರದ ಜನ ಕಾಯುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಸಿರಾಜ್ ಶೇಖ್ ಹೇಳಿದರು.
ಕ್ಷೇತ್ರದಿಂದ ಕ್ಷೇತ್ರಕ್ಕೆ ಬದಲಾವಣೆ ಮಾಡುವುದು ಸೋಲಿನ ಭಯದಿಂದ ಇಂತಹ ಸೋಲು ಈ ಭಾರಿ ಮೊಳಕಾಲಮೂರು ಸೇರಿದಂತೆ ಸಂಡೂರಿನಲ್ಲಿ ಆಗಲಿದೆ. ಯಾವುದೆ ಕೆಲಸ ಮಾಡದೆ ರಾಜ್ಯ ನಾಯಕರಂತೆ ಫೋಸ್ ನೀಡಿ ಕೆಲಸ ಮಾಡದೆ ಇರುವುದರಿಂದ ಹೊಸ ಕ್ಷೇತ್ರ ಸಂಡೂರು ಮೀಸಲು ಕ್ಷೇತ್ರ ಆಯ್ಕೆ ಮಾಡಲು ಮುಂದಾಗಿದ್ದಾರೆ. ಆದರೆ ಇಲ್ಲಿನ ಜನರು ಸಹ ಇವರಿಗೆ ಸೊಪ್ಪುಹಾಕದೆ ತಿರಸ್ಕರಿಸಲಿದ್ದಾರೆ ಎಂದರು.