ಶ್ರೀರಾಮುಲು ಗೆಲುವಿಗಾಗಿ ಮತಯಾಚನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ ಮೇ 06 : ಗ್ರಾಮೀಣ ಅಭ್ಯರ್ಥಿ ಸಚಿವ ಬಿ.ಶ್ರೀರಾಮುಲು ಅವರಿಗೆ ಮತ ನೀಡುವಂತೆ ನಗರದ ಕವಬಕ್ ಬಜಾರ್ ಮತ್ತು ರೇಡಿಯೋ ಪಾರ್ಕ್ ಪ್ರದೇಶದಲ್ಲಿ ಬುಡಾ ಮಾಜಿ ಅಧ್ಯಕ್ಷ ಡಿ.ವಿನೋದ್, ಮುಖಂಡರಾದ ವಿಜಯಲಕ್ಷ್ಮಿ,   ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎ.ಎಂ.ಸಂಜಯ್ ಅವರುಗಳು ಮನೆ ಮನೆಗೆ ತೆರಳಿ ಇಂದು  ಬಿರುಸಿನ ಪ್ರಚಾರ ನಡೆಸಿದರು.
ಸಚಿವ ಶ್ರೀರಾಮುಲು ಅವರು ಈ ಹಿಂದೆ ಮೂರು ಬಾರಿ ಈ ಕ್ಷೇತ್ರದ ಶಾಸಕರಾಗಿ ಈ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದರು. ನಂತರ ಬಂದ ಇತರೇ ಪಕ್ಷದ ಶಾಸಕರು ಇತ್ತ ತಿರುಗಿ ನೋಡುತ್ತಿಲ್ಲ. ಡಂಬಲ್ ಇಂಜಿನ್ ಸರ್ಕಾರ ರಚನೆಗಾಗಿ ಮತ್ತೊಮ್ಮೆ ಬಿಜೆಪಿಗೆ ಮತ ನೀಡಿ ಶ್ರೀರಾಮುಲು ಅವರನ್ನು ಆಯ್ಕೆ ಮಾಡಬೇಕೆಂದು ಕರಪತ್ರ ನೀಡಿ ಮನವಿ ಮಾಡಿದರು.