ಶ್ರೀರಾಮುಲು ಗೆಲುವಿಗಾಗಿ ಬೇವಿನಹಳ್ಳಿಯಲ್ಲಿಗ್ರಾಮೀಣ ಮುಖಂಡರಿಂದ ಮನೆ ಮನೆ ಪ್ರಚಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.24: ಲೋಕಸಭಾ ಚುನಾವಣೆ ಅಂಗವಾಗಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರ ಗೆಲುವಿಗಾಗಿ ಹಾಗೂ ದೇಶದಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು. ಬಳ್ಳಾರಿ ಗ್ರಾಮಾಂತರ ಮಂಡಲದ  ಕಕ್ಕಬೇವಿನಹಳ್ಳಿ ಬೇವಿನಹಳ್ಳಿ ಗ್ರಾಮದಲ್ಲಿ ಪಕ್ಷದ ಗ್ರಾಮೀಣ ಮುಖಂಡರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
 ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಹಿಳೆಯರಿಗೆ ಮನೆಗೆ ನಳದ ನೀರು, ಉಜ್ಬಲ ಗ್ಯಾಸ್ ನಂತಹ ಶಾಸ್ವತ ಗ್ಯಾರೆಂಟಿಗಳನ್ನು ಕೊಟ್ಟಿದ್ದಾರೆ. ಮಹಿಳೆಯರನ್ನು ಸ್ವಾವಲಂವಿಗಳನ್ನಾಗಿ ಮಾಡುವ ಶಾಶ್ವತ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಲಕ್ಷ ಪತಿ ದೀದಿ ಎನ್ನುವ ಯೋಜನೆ ಮೂಲಕ ಮಹಿಳೆಯರಿಗೆ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುತ್ತಿದ್ದಾರೆ. ಮೋದಿಯವರದು ಶಾಸ್ವತ ಗ್ಯಾರೆಂಟಿ, ಕಾಂಗ್ರೆಸ್ ನವರದು ತಾತ್ಕಾಲಿಕ ಗ್ಯಾರೆಂಟಿ ಎಂದು ಹೇಳಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.
ಭಾರತೀಯ ಜನತಾ ಪಾರ್ಟಿಯ ರಾಜ್ಯ ಎಸ್. ಟಿ. ಮೋರ್ಚಾ ಉಪಾಧ್ಯಕ್ಷ ಬಿ.  ಓಬಳೇಶ್,  ಬಳ್ಳಾರಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಹೆಚ್.ಆರ್. ಮಲ್ಲಿಕಾರ್ಜುನ್ ಗೌಡ. ಜಿಲ್ಲಾ ಕಾರ್ಯದರ್ಶಿ ಡಿ. ಪ್ರಕಾಶ, ಬಿಜೆಪಿ ಮುಖಂಡರಾದ ಬಾಣಾಪುರ ಜಗದೀಶ್ ಗೌಡ,  ಮಂಡಲ ಪ್ರಧಾನ ಕಾರ್ಯದರ್ಶಿ ಲೋಕೇಶ್ ರೆಡ್ಡಿ ಬೋಗರಾಜ್,  ಯುವ ಮೋರ್ಚಾ ಬಳ್ಳಾರಿ ಗ್ರಾಮಾಂತರ ಮಂಡಲ ಅಧ್ಯಕ್ಷ ತಿಮ್ಮಪ್ಪ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಅಕ್ಷಯ ಗೌಡ, ಶ್ರೀನಿವಾಸ, ಸುಧಾಕರ್,ಸೋಮಶೇಖರಗೌಡ, ಹೊನ್ನಪ್ಪ, ದೇವೇಂದ್ರಪ್ಪ, ಉಳ್ತಿ ಮಲ್ಲಿಕಾರ್ಜುನ, ಉಳ್ತಿ ಲೋಕೇಶ್ ಕಾರ್ಯಕರ್ತರು ಗ್ರಾಮದ ಮುಖಂಡರು
ಉಪಸ್ಥಿತರಿದ್ದರು.