ಶ್ರೀರಾಮುಲುಗೆ ಡಿಸಿಎಂ ನೀಡಬೇಕೆಂದು ಗ್ರೂಪಿಸಂ ಮಾಡಿಲ್ಲ: ಸೋಮಶೇಖರ ರೆಡ್ಡಿ.

ಬಳ್ಳಾರಿ ನ 17 : ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ನಾವು ಗ್ರೂಪಿಸಂ ಮಾಡಿಲ್ಲ, ಯಾವುದೇ ಟೀಂ ಕಟ್ಟಿಲ್ಲ ಎದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಅವರು ನಿನ್ನೆ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಶ್ರೀರಾಮುಲು, ತಾವು ಸೇರಿಂದತೆ 30 ಶಾಸಕರನ್ನೊಳಗೊಂಡ ಒಂದು ಟೀಂ ಕಟ್ಟಿ. ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನಕೊಡಬೇಕು. ಇಲ್ಲದಿದ್ದರೆ ಮುಂದೆ ಬೇರೆ ರೀತಿಯ ಬೆಳೆವಣಿಗೆ ಆಗಬಹುದೆಂದು ಮುಖ್ಯ ಮಂತ್ರಿ ಯಡಿಯೂರಪ್ಪ ಅವರಿಗೆ, ಪಕ್ಷ ಹೈ ಕಮಾಂಡಿಗೆ ಸಂದೇಶ ರವಾನಿಸಿದೆ ಎಂಬ ಪ್ರಶ್ನೆಗೆ. ಅಂತಹ ಯಾವುದೇ ಟೀಂ ಮಾಡಿಲ್ಲ, ಮಾಡುವ ಅಗತ್ಯತೆ ಇಲ್ಲ, ಶ್ರೀರಾಮುಲು ಅವರಿಗೆ ಡಿಎಸಿಎಂ ಮಾಡಬೇಕು ಎಂಬುದು ಜನರ, ಅವರ ಸಮುದಾಯದ ಬೇಡಿಕೆಯಾಗಿದೆ ಅಷ್ಟೇ ಎಂದರು.
ತಾವು ಸಚಿವರಾಗಲು ಬಯಸುತ್ತೀರ ಎಂಬ ಪ್ರಶ್ನೆಗೆ. ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿ ಮತ್ತು ಹೈ ಕಮಾಂಡಿಗೆ ಬಿಟ್ಟ ವಿಚಾರ, ಆ ದೇವರು ಕೊಟ್ಟರಷ್ಟೇ ನಾನು ಸಚಿವನಾಗಬಹುದು ಎಂದು ನಕ್ಕರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ವೀರಶೇಖರ ರೆಡ್ಡಿ, ಶ್ರೀನಿವಾಸ ಮೋತ್ಕರ್, ಕೆ.ಎಸ್.ಅಶೋಕ್ ಕುಮಾರ್ ಮೊದಲಾದವರು ಇದ್ದರು.