
ಕಲಬುರಗಿ,ನ.7: ಜಿಲ್ಲೆಯ ಜೇವರಗಿ ತಾಲೂಕಿನ ಆಂದೋಲಾ ಗ್ರಾಮದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಹಾಕಿದ್ದ ಫ್ಲೆಕ್ಸ್ ಹಾಗೂ ಆಂದೋಲಾ ಕರುಣೇಶ್ವರ ಮಠಕ್ಕೆ ಹೋಗುವ ಮಾರ್ಗ ಎಂದು ಬರೆದಿರುವ ನಾಮಫಲಕಕ್ಕೆ ಕೆಲ ದುಷ್ಕರ್ಮಿಗಳು ಸಗಣಿ ಎರಚಿ ಅವಮಾನಗೊಳಿಸಿದ್ದು,ಕೂಡಲೇ ಅವರನ್ನು ಬಂಧಿಸುವಂತೆ ಹಿಂದೂ ಜಾಗೃತಿ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ ಅವರು ಒತ್ತಾಯಿಸಿದ್ದಾರೆ
ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ,ಫ್ಲೆಕ್ಸ್ ನಲ್ಲಿ ಶ್ರೀರಾಮ, ಆಂಜನೇಯ, ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ,ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ರಾಜಾಸಿಂಗ್ ರಾಠೋಡ,ಆಂದೋಲಾ ಶ್ರೀಗಳ ಭಾವಚಿತ್ರ ಇದೆ.ಈ ಎಲ್ಲ ಭಾವಚಿತ್ರಗಳಿಗೆ ದುಷ್ಕರ್ಮಿಗಳು ಸಗಣಿ ಎರಚಿ ಅವಮಾನಿಸಿದ್ದಾರೆ.ಅಲ್ಲದೇ ಆಂದೋಲಾ ಶ್ರೀಗಳಿಗೆ ಒಬ್ಬ ವ್ಯಕ್ತಿ ಫೋನ್ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದು,ಕೂಡಲೇ ಈ ಆರೋಪಿಯನ್ನು ಬಂಧಿಸಬೇಕು.ಈ ಘಟನೆ ಅ.30 ರಂದು ನಡೆದಿದ್ದರೂ ಈವರೆಗೆ ದುಷ್ಕರ್ಮಿಗಳ ಬಂಧನವಾಗಿಲ್ಲ ಎಂದು ದೂರಿದರು.ಆಂದೋಲಾ ಶ್ರೀಗಳಿಗೆ ಅಂಗರಕ್ಷಕರನ್ನು ನಿಯೋಜಿಸಬೇಕು.ನಿರ್ಲಕ್ಷಿಸಿದರೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಶಂಕರ ಚೋಕಾ,ದಶರಥ ಇಂಗೊಳೆ,ಮಹಾದೇವ ಕೋಟನೂರ ಸೇರಿದಂತೆ ಹಲವರಿದ್ದರು.