ಶ್ರೀರಾಮನ 15 ಅಡಿ ಎತ್ತರದ ಮೂರ್ತಿಯ ಭವ್ಯ ಶೋಭಾಯಾತ್ರೆ

ಕಲಬುರಗಿ,ಏ.17-ಶ್ರೀರಾಮ್ ನವಮಿ ಪ್ರಯುಕ್ತ ನಗರದ ರಾಮತೀರ್ಥದಿಂದ ಜಗತ್ ವೃತ್ತದವರೆಗೆ ಶ್ರೀರಾಮನ 15 ಅಡಿ ಎತ್ತರದ ಮೂರ್ತಿಯ ಭವ್ಯ ಶೋಭಾಯಾತ್ರೆ ನಡೆಯಿತು.
ರಾಮತೀರ್ಥದಿಂದ ಆರಂಭವಾದ ಶೋಭಾಯಾತ್ರೆ ಖಾದ್ರಿ ಚೌಕ್ ಮೂಲಕ ಆಳಂದ ನಾಕಾ, ಚೌಕ್ ಪೊಲೀಸ್ ಠಾಣೆ ವೃತ್ತದ ಮೂಲಕ ಜಗತ್ ವೃತ್ತ ತಲುಪಿತು.
ಸಾವಿರಾರು ಜನರು ಹಾಗೂ ಹಲವಾರು ಮಠಾಧೀಶರು ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆಯುದ್ದಕ್ಕೂ ರಾಮ ಭಕ್ತರಿಗೆ ತಂಪು ಪಾನೀಯ, ಮಜ್ಜಿಗೆ, ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಖಾದ್ರಿ ಚೌಕ್‍ನಲ್ಲಿ ಮುಸ್ಲಿಂ ಬಾಂಧವರು ರಾಮ ಭಕ್ತರಿಗೆ ತಂಪು ಪಾನೀಯದೊಂದಿಗೆ ಮಜ್ಜಿಗೆಯನ್ನೂ ಸಹ ವಿತರಿಸುವ ಮೂಲಕ ಸೌಹಾರ್ದತೆ ಮೆರೆದರು.