ಶ್ರೀರಾಮನ ಬ್ಯಾನರ್ ಹರಿದ ಆರೋಪಿಗಳ ಗಡಿಪಾರಿಗೆ ಮುನಿಸ್ವಾಮಿ ಆಗ್ರಹ

ಕೋಲಾರ,ಜ,೧೯- ಆಯೋದ್ಯೆಯಲ್ಲಿ ಜ.೨೨ ರಂದು ರಾಮಮಂದಿರ ಉದ್ಘಾಟನೆ ಹಿನ್ನೆಲೆ ಇಡೀ ದೇಶ ರಾಮನ ಜಪದಲ್ಲಿ ಮುಳುಗಿದ್ದು, ಒಂದು ಕಡೆಯಾದರೆ, ಹಿಂದೂಪರ ಸಂಘಟನೆಗಳಿಂದ ಅಳವಡಿಸಿದ್ದ ಶ್ರೀರಾಮರ ಬ್ಯಾನರ್‌ನನ್ನು ದುಷ್ಕರ್ಮಿಗಳು ಬ್ಲೇಡ್‌ನಿಂದ ಹರಿದು ಹಾಕಿರುವ ಘಟನೆ ಮುಳಬಾಗಿಲು ಪಟ್ಟಣದ ಗುಣಿಗಂಟೆಪಾಳ್ಯದಲ್ಲಿ ನಡೆದಿದೆ.
ವಿವಿಧ ಹಿಂದೂ ಪರ ಸಂಘಟನೆಗಳಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ, ನಗರದಲ್ಲಿ ಅಳವಡಿಸಲಾಗಿದ್ದ ಶ್ರೀರಾಮ ಬ್ಯಾನರ್ ಅನ್ನು ಕಿಡಿಗೇಡಿಗಳು ಬ್ಲೇಡ್ ನಿಂದ ಹರಿದು ಹಾಕಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬ್ಯಾನರ್ ಹರಿದು ಹಾಕಿರುವ ಘಟನೆ ವಿಷಯ ತಿಳಿಯುತ್ತಿದ್ದಂತೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸಂಸದ ಎಸ್.ಮುನಿಸ್ವಾಮಿ, ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶ್ರೀರಾಮರ ಬ್ಯಾನರ್‌ನನ್ನು ಹರಿದು ಹಾಕಿರುವ ಕೃತ್ಯ ಸಿಸಿ ಟಿವಿ ಸೆರೆಯಾಗಿದ್ದು, ವಿಡಿಯೋ ಆಧರಿಸಿ ಪೋಲೀಸರು ಇಬ್ಬರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಜಹೀರ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬರ ಹೆಸರು ತಿಳಿದು ಬರಬೇಕಿದೆ.
ಮಂಗಳವಾರ ತಡ ರಾತ್ರಿ ೧೦.೪೫ಕ್ಕೆ ಶ್ರೀರಾಮನ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಕಿಡಿಗೇಡಿಗಳು ಬ್ಲೇಡ್‌ನಿಂದ ಕತ್ತರಿಸಿ ಘಟನೆ ನಡೆದಿದ್ದು, ಇದು ಉದ್ದೇಶ ಪೂರ್ವಕವಾಗಿ ಹರಿದು ಹಾಕಲಾಗಿದೆಯೆ ಅಥವಾ ಕೋಮುಗಲಭೆ ಸೃಷ್ಟಿಸಲು ಹರಿದು ಹಾಕಿದ್ದಾರೆಯೇ ಎನ್ನುವ ವಿಷಯವನ್ನ ಪೋಲೀಸರಿಗೆ ಹೆಚ್ಚಿನ ತನಿಖೆಯಿಂದ ಹೊರಬರಬೇಕಿದೆ, ಬ್ಯಾನರ್ ಹರಿದಿರುವ ವಿಷಯ ಸದ್ಯ ಬೂದಿ ಮುಚ್ಚಿದ ಕೆಂಡದಂತಿದ್ದು, ಮುಳಬಾಗಿಲು ಪಟ್ಡಣದಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸಂಸದ ಎಸ್,ಮುನಿಸ್ವಾಮಿ ಮುಳಬಾಗಿಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಶ್ರೀರಾಮರ ಬ್ಯಾನರ್ ಹರಿದು ಹಾಕಿರುವ ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಹಾಗೂ ಕ್ಷಮೆ ಕೇಳುವಂತೆ ಮಾಡ ಬೇಕೆಂದು ಒತ್ತಾಯಿಸಿದರು
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಸಿಎಂ ಸಿದ್ದರಾಮಯ್ಯ ೧೦ ಸಾವಿರ ಕೋಟಿ ಮುಸ್ಲಿಂ ಸಮುದಾಯಕ್ಕೆ ಮೀಸಲಿಡುತ್ತೇವೆ ಎಂಬ ಹೇಳಿಕೆ ನೀಡಿರುವುದು ಇಂತಹ ಘಟನೆಗಳು ನಡೆಯಲು ಕಾರಣವಾಗಿದೆ
ಮಾಲೂರಿನ ಮಾರಿಕಾಂಬ ದಿಪೋತ್ಸವದ ಮೇಲೆ ಕಲ್ಲು ತೂರಾಟ, ಮುಳಬಾಗಿಲು ಪಟ್ಟಣದಲ್ಲಿ ಶ್ರೀರಾಮರ ಬ್ಯಾನರ್ ಹರಿದು ಹಾಕಿದ್ದಾರೆ ಹಾಗಾಗಿ ಈ ದೇಶದಲ್ಲಿ ಇರಲು ಯೋಗ್ಯರಲ್ಲ, ನಾವೆಲ್ಲಾ ಒಂದೇ ಎಂದು ಈದ್ ಮಿಲಾದ್ ಉರುಸ್‌ನಲ್ಲಿ ಬಾಗಿಯಾಗುತ್ತಿದ್ದೇವೆ, ಜ.೨೨ ರಂದ ಆಯೋದ್ಯೆಯಲ್ಲಿ ಶ್ರೀರಾಮ ದೇವಾಲಯ ಉದ್ಘಾಟನೆ ಸಹಿಸಲು ಹಾಗದೆ ಇಂತಹ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ದೂರಿದರು
ಶಾಂತವಾಗಿದ್ದ ಮುಳಬಾಗಿಲಿನಲ್ಲಿ ಯಾರಾದರು ಹಣ ಕೊಟ್ಟು ಇವರಿಗೆ ಬ್ಯಾನರ್ ಹರಿದು ಹಾಕಿಸಿದ್ದಾರೆ ಅನುಮಾನ ಇದೆ, ನಾವು ಬಹು ಸಂಖ್ಯಾತರು ಕೋಲಾರ ಜಿಲ್ಲೆಯಲ್ಲಿದ್ದೇವೆ, ಬ್ಯಾನರ್ ಹರಿದು ಹಾಕಿರುವ ಕಿಡಿಗೇಡಿಗಳನ್ನು
ಪಾಕಿಸ್ತಾನ ಏಜೆಂಟ್ ರೀತಿ ಕೆಲವು ಮುಸ್ಲಿಮರು ವರ್ತಿಸುತ್ತಿದ್ದಾರೆ. ಸರ್ಕಾರದ ಎಲ್ಲಾ ಸೌಲಭ್ಯಗಳನ್ನುಬಳಸಿಕೊಳ್ಳುತ್ತಿದ್ದಾರೆ, ಮಾಲೂರು ತಾಲೂಕಿನಲ್ಲಿ ದೀಪೋತ್ಸವ ವೇಳೆ ಹೆಣ್ಣು ಮಕ್ಕಳ ಮೇಲೆ ಕಲ್ಲು ಎಸೆದಿದ್ದಾರೆ.ಶ್ರೀರಾಮನ ಫೋಟೋಗೆ ಬ್ಲೇಡ್ ಹಾಕಿದ್ದಾರೆ, ದೇಶದಲ್ಲಿ ವಾಸ ಮಾಡುವ ಯೋಗ್ಯತೆ ಅವರಿಗಿಲ್ಲ, ಇಲ್ಲಿರುವ ಮುಸ್ಲಿಮರು ಮೊದಲು ಹಿಂದುಗಳು ಆಗಿದ್ದರು ನಂತರದಲ್ಲಿ ಮತಾಂತರ ಅಗಿದ್ದಾರೆ ಎಂದರು.
, ಈದ್ ಮಿಲಾದ್ ಹಾಗೂ ಉರುಸ್ ವೇಳೆ ನಾವ್ಯಾರು ತೊಂದರೆ ಕೊಟ್ಟಿಲ್ಲ. ೨೨ನೇ ತಾರೀಖು ನಡೆಯುವ ಪ್ರಾಣಪ್ರತಿಷ್ಠಾಪನೆ ಕಂಡು ಸಹಿಸುತ್ತಿಲ್ಲ. ಶ್ರೀರಾಮನ ಪ್ಲೆಕ್ಸಿ ವಿರೂಪಗೊಳಿಸಿರುವವರನ್ನು ಬಂಧಿಸಿ, ಬಹಿರಂಗವಾಗಿ ಕ್ಷಮೆ ಕೇಳಿಸಬೇಕು, ಇಲ್ಲಿ ಮಟ್ಟನ್ ಅಂಗಡಿ ಮಾಲೀಕ ಮುಜ್ಜು ಅನ್ನೋ ವ್ಯಕ್ತಿಯಿಂದ ಶ್ರೀರಾಮನ ಪ್ಲೆಕ್ಸಿ ವಿರೋಪ ಗೊಳಿಸುವಲ್ಲಿ ಕುಮ್ಮಕ್ಕು ನೀಡಲಾಗಿದೆ. ಮುಜ್ಜು ನ ಬಂಧಿಸಿ ಅವನ ಹಿಂದಿರುವ ಸಂಘಟನೆ ಯಾವುದು ಎಂದು ತನಿಖೆ ಮಾಡಬೇಕೆಂದು ಆಗ್ರಹಿಸಿದರು.
ಮುಳಬಾಗಿಲಿನಲ್ಲಿ ನಡೆದ ಘಟನೆಯಲ್ಲಿ ತಕ್ಕ ಶಿಕ್ಷೆಯಾಗಬೇಕು, ಮತ್ತೊಬ್ಬರು ಇಂತಹ ತಪ್ಪು ಮಾಡದಂತೆ ಕ್ರಮ ವಹಿಸಲು ಪೋಲೀಸರಿಗೆ ಸೂಚನೆ ನೀಡಿದ್ದೇನೆ, ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ, ಈ ಸಂದರ್ಭದಲ್ಲಿ ಈ ಘಟನೆಯನ್ನೇ ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದರು.
ಮುಳಬಾಗಲಿನ ಜಹಾಂಗೀರ್ ಮೊಹಲ್ಲಾದ ಬಳಿ ಶ್ರೀರಾಮ ಪ್ಲೆಕ್ಸ್‌ಗೆ ಬ್ಲೆಡ್‌ನಿಂದ ಬ್ಲೆಡ್ ಹಾಕಿ ವಿರೂಪ ಮಾಡಿದ ಪ್ಲೆಕ್ಸನ್ನು ಬೇರೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಶ್ರೀರಾಮನ ಬೇರೆ ಪ್ಲೆಕ್ಸ್ ಹಾಕುವ ಮೂಲಕ ಕಾರ್ಯಕರ್ತರು ಜಯಕಾರ ಕೂಗಿದರು.