ಶ್ರೀರಾಮನ ಆದರ್ಶಗಳು ಹಾಗೂ ಚಿಂತನೆಗಳು ವಿಶ್ವಕ್ಕೆ ಭಾರತದ ಮಹಾನ್ ಕೊಡುಗೆ-ಸುರೇಶ್‍ಎನ್‍ಋಗ್ವೇದಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜ.21- ಶ್ರೀ ರಾಮನ ಆದರ್ಶಗಳು ಹಾಗೂ ಚಿಂತನೆಗಳು ವಿಶ್ವಕ್ಕೆ ಭಾರತದ ಮಹಾನ್‍ಎಂದು ಶ್ರೀ ಕೃಷ್ಣ ಪ್ರತಿμÁ್ಠನದಅಧ್ಯಕ್ಷರು, ಸಂಸ್ಕೃತಿಚಿಂತಕರಾದ ಸುರೇಶ್‍ಎನ್‍ಋಗ್ವೇದಿ ತಿಳಿಸಿದರು.
ಅವರುಋಗ್ವೇದಿ ಕುಟೀರದಲ್ಲಿ ಶ್ರೀರಾಮ ಫಲ ವೃಕ್ಷಕ್ಕೆ ಪೂಜೆ ಮತ್ತು ಶ್ರೀರಾಮ ನಾಮ ಜಪ ಪೂಜಾಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕೊಡುಗೆಯಾಗಿದೆ ಭಾರತದ ಸಂಸ್ಕøತಿ ಪರಂಪರೆಯ ಆಧಾರ ಸ್ತಂಭವಾಗಿರುವ ಶ್ರೀರಾಮ ಮತ್ತುಕೃಷ್ಣರ ಸಂದೇಶಗಳು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿμÁ್ಠಪನೆಯ ಮೂಲಕ ಇದೇ ವಿಶ್ವದ ಮನೆಮನೆಗೆ ಜಾಗೃತಿಯ ಸಂದೇಶವನ್ನು ನೀಡುತ್ತಿರುವುದು ಬಹಳ ಹೆಮ್ಮಎಂದು ಬಣ್ಣಿಸಿದರು.
ಶ್ರೀ ರಾಮನಆದರ್ಶವೇ ಪ್ರಕೃತಿಯಚಿಂತನೆ. ಪ್ರಕೃತಿಯರಕ್ಷಣೆ ,ಧರ್ಮರಕ್ಷಣೆ, ಸಂಸ್ಕೃತಿಯರಕ್ಷಣೆ ಪ್ರತೀಜೀವ ರಾಶಿಗೂ ಸನ್ಮಾರ್ಗದಲ್ಲಿ ಹೋಗಲು ದಿವ್ಯ ಸಂದೇಶಗಳನ್ನು ನೀಡಿದ ಶ್ರಿರಾಮರವಿಶೇಷಗಳು ಜಾಗೃತವಾಗಿರಲಿ.
ಶ್ರೀರಾಮ ಪಾರಾಯಣ,ಭಜನೆ ಪೂಜೆಗಳ,ಮೂಲಕ ಪ್ರತಿಯೊಬ್ಬರು ಮನಸ್ಸನ್ನು ಸಂತೋಷಗೊಳಿಸಿಕೊಂಡು ಆಯುರಾರೋಗ್ಯ ಐಶ್ವರ್ಯಾದಿಗಳು ಹೆಚ್ಚಲಿ ಎಂದು ಪ್ರಾರ್ಥಿಸುವ ಮೂಲಕ ನಾಡಿಗೆ ಹಾಗೂ ಮನುಷ್ಯ ಕುಲಕ್ಕೆ ಉನ್ನತಿಯನ್ನು ನಾವೆಲ್ಲರೂ ಸಾಧಿಸುವ ದಿಕ್ಕಿನಲ್ಲಿ ನಡೆಯೋಣಎಂದು ತಿಳಿಸಿದರು. ಕಳೆದ 21 ವರ್ಷಗಳ ಹಿಂದೆಋಗ್ವೇದಿ ಕುಟೀರದಲ್ಲಿ ನೆಡಲ್ಪಟ್ಟ ಶ್ರೀರಾಮ ಫಲವೃಕ್ಷಇಂದು ಮೊಟ್ಟ ಮೊದಲ ಬಾರಿಗೆ ಶ್ರೀರಾಮ ಫಲ ಹಣ್ಣು ಬಿಡುವುದರೊಂದಿಗೆಎಲ್ಲರ ಸಂತೋಷವನ್ನು ಹೆಚ್ಚಿಸಿದೆ. ಅಯೋಧ್ಯೆಯಲ್ಲಿ ಸ್ಥಾಪನೆಯಾಗುತ್ತಿರುವ ಹಾಗೂ ಇಡೀ ವಿಶ್ವದಲ್ಲಿ ಶ್ರೀ ರಾಮ ನಾಮ ಜಪ ನಡೆಯುತ್ತಿರುವ ಸಂದರ್ಭದಲ್ಲಿ ಶ್ರೀ ರಾಮ ಫಲ ಬಿಟ್ಟಿರುವುದು ಬಹಳ ಸಂತೋಷತಂದಿದೆ.
ರಾಮ ಫಲ,ಸೀತಾಫಲ, ಲಕ್ಷ್ಮಣ ಫಲ, ಹನುಮಾನ್ ಫಲಗಳು ಪ್ರಕೃತಿ ಮತ್ತು ಮಾನವನಿಗಿರುವ ಅವಿನಾಭಾವ ಸಂಬಂಧ ಹಾಗೂ ಆಧ್ಯಾತ್ಮಿಕ ಶಕ್ತಿಯ ಸಂದೇಶವಾಗಿದೆಎಂದು ಹೇಳಿದರು.
ನಂತರಶ್ರೀರಾಮ ಫಲ ವೃಕ್ಷಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿಜೈ ಹಿಂದ್ ಪ್ರತಿμÁ್ಠನದ ಕುಸುಮ ಋಗ್ವೇದಿ,ಬ್ರಾಹ್ಮಿ ಮಹಿಳಾ ಸಂಘದ ವತ್ಸಲಾರಾಜಗೋಪಾಲ್,ಶಾರದಾ ಭಜನಾ ಮಂಡಳಿಯ ವಿಜಯಲಕ್ಷ್ಮಿ, ವಾಣಿಶ್ರೀ, ಸರಸ್ವತಿ,ಚಂದ್ರಕಲ, ಶಂಕರಪುರ ಹಿತರಕ್ಷಣ ಸಮಿತಿಯ ಮುರುಗೇಶ್, ಝಾನ್ಸಿ ಮಕ್ಕಳ ಪರಿಷತ್ತಿನ ಶ್ರಾವ್ಯಋಗ್ವೇದಿ ಇತರರುಇದ್ದರು