ಶ್ರೀರಾಮನ ಆದರ್ಶಗಳು ಸರ್ವಕಾಲಕ್ಕೂ ಅನ್ವಯ

ಗದಗ ಏ 22: ಮರ್ಯಾದಾ ಪುರುಷೋತ್ತಮ ಶ್ರೀರಾಮ ಆದರ್ಶ ಪುರುಷ’ ಶ್ರೀರಾಮನ ಆದರ್ಶಗಳು, ಸರ್ವಕಾಲಕ್ಕೂ ಅನ್ವಯವಾಗುತ್ತವೆ.
ಎ0ದು ಉಪನ್ಯಾಸಕ ಬಸವರಾಜ ಪಲ್ಲೇದ ತಿಳಿಸಿದರು.
ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ‘ಗದಗ ಜಿಲ್ಲಾ ಖೋ ಖೋ ಅಮೇಚೂರ್ ಸಂಸ್ಥೆ ಅಬ್ಬಿಗೆರೆ ಹಾಗೂ ಟುಟೋರಿಯಲ್ಸ್’ ಇವರ ಸಂಯುಕ್ತ ಆಶ್ರಯದಲ್ಲಿ ‘ಶ್ರೀ ದತ್ತಾತ್ರೇಯ ದೇವಸ್ಥಾನದ ಸಭಾಭವನದಲ್ಲಿ ಶ್ರೀರಾಮ ನವಮಿ ಆಚರಣೆ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಿ.ಬಿ ಗ್ಯಾನಪ್ಪನವರ ಮಾತನಾಡಿ, ನಡೆಯಲ್ಲಿ ನುಡಿಯಲ್ಲಿ ಶ್ರೀರಾಮನನ್ನು ಮೀರಿದವರು ಯಾರೂ ಇಲ್ಲ ಎ0ದು ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಅಂದಪ್ಪ ಉಳ್ಳಾಗಡ್ಡಿ ವಹಿಸಿದ್ದರು.
ಅತಿಥಿಗಳಾಗಿ, ವೆಂಕಣ್ಣ ಹಜಾರೆ, ಎಸ್ ಬಿ ತೆಗ್ಗಿನಕೇರಿ, ಶಿವಣ್ಣ ಜಂತಲಿ, ವಿ ಬಿ ಗುಜಮಾಗಡಿ, ಎಮ್ ಜಿ ಯಾಳಗಿ, ರಂಗಣ್ಣ ತಳವಾರ, ಅಶೋಕ ಕಟ್ಟಿಮನಿ, ಫಕೀರಶೆಟ್ಟಿ ಮಸಲವಾಡ, ಮಲ್ಲು ಗುಜಮಾಗಡಿ, ಸೋಮು ಹಡಪದ, ದೇವಣ್ಣ ಅಸುಂಡಿ, ಮಹೇಶ ಮಾರನಬಸರಿ, ಶಿವಣ್ಣ ಹೊಂಬಳ್ಳಿ, ಶೇಖರ ಗುಜಮಾಗಡಿ, ರಮೇಶ ಮಡಿವಾಳರ, ಸರಳಾದೇವಿ ರುದ್ರಗೌಡ್ರ, ಮಂಜುಳಾ ಸಾಲಿಮಠ, ಶೃತಿ ಪಸಾರದ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ಶ್ರೀ ರಾಮ ನಾಮ ಜಪ ಕೈಗೊಳ್ಳಲಾಯಿತು. ಅಲ್ಲದೆ ನೆರೆದವರಿಗೆ ಮಜ್ಜಿಗೆ ಹಾಗೂ ಪಾನಕ ವಿತರಣೆ ಕಾರ್ಯ ನಡೆಯಿತು.
ನೇತ್ರಾವತಿ ಭಾಸಲಾಪೂರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಉಪಾಧ್ಯ ವಂದಿಸಿದರು.