ಶ್ರೀರಾಮನವಮಿ ಸರಳ ಆಚರಣೆ-ವಿಶೇಷ ಪೂಜೆ

ರಾಯಚೂರು.ಏ.೨೧-ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಿದ್ದು, ನಗರದಾದ್ಯಂತ ಅದ್ದೂರಿಯಾಗಿ ನಡೆಯುತ್ತಿದ್ದ ಶ್ರೀರಾಮ ನವಮಿ ಆಚರಣೆ ಈ ಬಾರಿ ಸರಳವಾಗಿ ನೆರವೇರಲಿದೆ.
ನಗರದ ರಾಮ ಮಂದಿರ ದೇವಸ್ಥಾನದಲ್ಲಿ ರಾಮನವಮಿ ಅಂಗವಾಗಿ ಯಾವುದೇ ವಿಜೃಂಭಣೆಯ ಪೂಜಾ ಪುನಸ್ಕಾರಗಳು, ವಿಶೇಷ ಅಲಂಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸದಿರಲು ಆಡಳಿತ ಮಂಡಳಿಗಳು ನಿರ್ಧರಿಸಿದ್ದು, ಸಾಂಕೇತಿಕವಾಗಿ ಸರಳ ಪೂಜೆ ಸಲ್ಲಿಸಲಾಯಿತು.
ರಾಮನವಮಿ ದಿನದಂದು ರಾಮ, ಲಕ್ಷ್ಮಣ, ಸೀತೆ ಹಾಗೂ ಆಂಜನೇಯ ಮೂರ್ತಿಗಳಿಗೆ ತರಹೇವಾರಿ ಅಲಂಕಾರಗಳು, ಪಂಚಾಭಿಷೇಕ, ಹೋಮ, ಕಲ್ಯಾಣೋತ್ಸವ ಹಾಗೂ ಬೃಹತ್ ಮೆರವಣಿಗೆಗಳು ನಡೆಯುತ್ತಿದ್ದವು. ಶ್ರೀರಾಮ ಹಾಗೂ ಹನುಮಂತನ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಸಲ್ಲಿಸಲಾಗುತ್ತಿತ್ತು
ಆದರೆ ಈ ಬಾರಿ ಕೊರೊನಾ ಎರಡನೇ ಅಲೆ ಯಿಂದ ಕೊರೊನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಜಿಲ್ಲಾಡಳಿತ ಮುನ್ನೆಚ್ಚರಿಗೆ ಕ್ರಮವಾಗಿ ಭಕ್ತದಿಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ದರಿಸಿದವರಿಗೆ ಮಾತ್ರ ಅವಕಾಶ ನೀಡಲಾಗಿದೆ.