ಶ್ರೀರಾಮನವಮಿ ಪ್ರಯುಕ್ತ ಪಾನಕ, ಮಜ್ಜಿಗೆ ವಿತರಣೆ

ದಾವಣಗೆರೆ: ಹಿಂದೂ ಜನಜಾಗೃತಿ ಸೇನಾ ಸಮಿತಿಯ ಜಿಲ್ಲಾ ಘಟಕ ವತಿಯಿಂದ ಶ್ರೀ ರಾಮನವಮಿಯ ಪ್ರಯುಕ್ತ ಮಜ್ಜಿಗೆ ಮತ್ತು ಪಾಯಸ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಚೇತನ್, ಜಿ. ಓಬಳೇಶ್, ಶಾಂತಕುಮಾರ್, ಮಧು, ಶಾಂತೇಶ್, ಪ್ರಕಾಶ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶಕುಂತಲಾ, ವಿಜಯಲಕ್ಷ್ಮಿ,  ಕೆ.ಬಿ ಕೊಟ್ರೇಶ್, ನಾಗರಾಜ್ ಲೋಕೀಕೆರೆ, ಶ್ರೀನಿವಾಸ್, ಎಸ್.ಟಿ ವೀರೇಶ್, ಕೆ.ಎಂ ವೀರೇಶ್, ಗೋಪಾಲ್ ರಾವ್ ಸಾವಂತ್, ಅತಿತ್ ಅಂಬರ್ಕರ್, ಪವನ್ ಮತ್ತು ಹಿಂದೂ ಜನಜಾಗೃತಿ ಸೇನಾ ಸಮಿತಿ ಕಾರ್ಯಕರ್ತರು ಉಪಸ್ಥಿತರಿದ್ದರು.