ಶ್ರೀರಾಮನವಮಿ ಕಾರ್ಯಕ್ರಮ

ಬೈಲಹೊಂಗಲ,ಮಾ31: ಶ್ರೀ ರಾಮನ ಭಕ್ತರಾದ ನಾವೆಲ್ಲರೂ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಆದರ್ಶಗಳ ಪಾಲನೆಯನ್ನು ಮಾಡಬೇಕೆಂದು ಮುರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ಯದಲ್ಲಿ ವಿಶ್ವ ಹಿಂದೂ ಪರಿಷತ ಬಜರಂಗದಳ ತಾಲೂಕು ಘಟಕದ ವತಿಯಿಂದ
ಶ್ರೀ ರಾಮನವಮಿ ಪ್ರಯುಕ್ತವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಶ್ರೀ ರಾಮನವಮಿ ಆಚರಿಸುತ್ತಿರುವುದು ತುಂಬಾ ಸಂತಸ ತಂದಿದೆ. ಭಾರತ ಮಾತೆಯ ಪುಣ್ಯ ಭೂಮಿಯಲ್ಲಿ ಜನ್ಮ ತಾಳಿದ ನಾವೆಲ್ಲರೂ ಶ್ರೀ ರಾಮಚಂದ್ರನ ಆದರ್ಶ ವನ್ನು ಪರಿಪಾಲಿಸಬೇಕು. ಶ್ರೀ ರಾಮನು ಅಂತರಂಗದಲ್ಲಿಯೂ ಹಾಗೂ ಬಹಿರಂಗದಲ್ಲಿಯೂ ಪರಿಶುದ್ಧನಾಗಿದ್ದ ನಾಗಿ ಆಡಳಿತ ನಡೆಸಿರುವುದರಿಂದ ಶ್ರೀ ರಾಮನನ್ನು ಕೇವಲ ರಾಜನಲ್ಲ, ದೇವರೆಂದು ನಾವು ಪೂಜಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮೋದಕುಮಾರ ವಕ್ಕುಂದಮಠ, ಕಾಶೀನಾಥ ಬಿರಾದಾರ, ರಾಜು ಕುಡಸೊಮಣ್ಣವರ, ಸಂಗಮೇಶ ಸವದತ್ತಿಮಠ, ಗುರು ಮೆಟಗುಡ್ಡ, ಅಶೋಕ ಸವದತ್ತಿಮಠ,ಗಿರಿಶ ಹರಕುಣಿ, ನಾರಾಯಣ ನಲವಡೆ,ಶಿವಾನಂದ ಬಡ್ಡಿಮನಿ,ವಿಜಯ ಮೆಟಗುಡ್ಡ,ರಾಜು ಸೊಗಲ, ಸೋಮನಾಥ ಸೊಪ್ಪಿಮಠ, ರಾಜು ಬಡಿಗೇರ,ರಾಜು ಹರಕುಣಿ, ಇನ್ನಿತರರು ಇದ್ದರು.