ಶ್ರೀರಾಮನವಮಿ ಆಚರಣೆ

ಬೈಲಹೊಂಗಲ, ಏ17 ಶ್ರೀ ರಾಮನವಮಿ ಪ್ರಯುಕ್ತ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಪ್ರಭು ನೀಲಕಂಠ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಚಿತ್ರನಟ ಶಿವರಂಜನ ಬೋಳನ್ನವರ,ವಿಜಯ ಮೆಟಗುಡ್ಡ,ಮಹಾಂತೇಶ ತುರಮರಿ, ಕಾಶಿನಾಥ ಬಿರಾದಾರ, ಬಿ. ಬಿ. ಗಣಾಚಾರಿ, ಅಶೋಕ ಸವದತ್ತಿ,ರಾಜು ಬಡಿಗೇರ,ಸುನೀಲ ಮರಕುಂಬಿ,ಸುಭಾಷ್ ತುರಮರಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವೇ. ಮೂ.ವೀರೇಶ ನಂದಳ್ಳಿ ಮಠ ಶಾಸ್ತ್ರಿಗಳು ಪೂಜಾ ಕೈಂಕರ್ಯ ನೆರವೇರಿಸಿದರು.