ಸಂಜೆವಾಣಿ ವಾರ್ತೆ
ಸಿರಿಗೇರಿ ಮಾ.31. ನಿನ್ನೆ ಶ್ರೀರಾಮ ನವಮಿಯ ದಿನದಂದು ಗ್ರಾಮದ ಸಿರಿಗೇರಮ್ಮ ದೇವಿಯ ಉತ್ಸವವು ಸಂಬ್ರಮ ಸಡಗರದಿಂದ ನಡೆಯಿತು. ಶ್ರೀನಾಗನಾಥೇಶ್ವರ ಜಾತ್ರೆಯ ನಂತರ ಬರುವ ಶ್ರೀರಾಮನವಮಿಯಂದು ನಡೆಯುವ ಹೆಣ್ಣುಮಕ್ಕಳ ಪ್ರೀತಿಯ ದೇವತೆಯಾಗಿರುವ ಸಿರಿಗೇರಮ್ಮದೇವಿಯ ಉತ್ಸವವು ಪ್ರತೀವರ್ಷ ಸಂಬ್ರಮದಿಂದ ನಡೆಸಿಕೊಂಡು ಬರುವುದು ವಾಡಿಕೆಯಾಗಿದೆ. ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಂಗಳಾರತಿಗಳು, ಕಾಯಿ ನೀಡುವ ಸಂಪ್ರದಾಯಗಳನ್ನು ಗ್ರಾಮದ ಮತ್ತು ಸುತ್ತಲಿನ ಗ್ರಾಮಗಳ ಹೆಣ್ಣುಮಕ್ಕಳು ದೇವಸ್ಥಾನಕ್ಕೆ ಬಂದು ನೆರವೇರಿಸಿದರು. ಸಂಜೆ 5-30 ರಿಂದ ದೇವಸ್ಥಾನದ ಸಮಿತಿಯಿಂದ ಮತ್ತು ಗ್ರಾಮದ ಮುಖಂಡರ ನೇತೃತ್ವದಲ್ಲಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದ ಸಾಗಿದ ರೋಥೋತ್ಸವವು ಕುರುಗೋಡು ರಸ್ತೆಯ ಅಂಬೆಡ್ಕರ್ ಸರ್ಕಲ್ ಹತ್ತಿರದ ಹುಲಿಗೆಮ್ಮದೇವಿ ದೇವಸ್ಥಾನದ ವರೆಗೆ ಬಂದು ಮರಳಿತು. ಸಾವಿರಾರು ಮಹಿಳೆಯರು ಕಿಕ್ಕಿರಿಯುವಂತೆ ಉತ್ಸವದಲ್ಲಿ ಪಾಲ್ಗೊಂಡಿದ್ದರು. ನಂತರ ರಾತ್ರಿ 8ಗಂಟೆಯಿಂದ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಪವಾಡಪುರುಷ ಶ್ರೀ ಯಲ್ಲಾಲಿಂಗ ಮಹಸ್ವಾಮಿಗಳ ಪುರಾಣವೂ ಮಂಗಲಗೊಂಡಿತು.
One attachment • Scanned by Gmail