ಶ್ರೀರಾಮನಗರದಲ್ಲಿ ವಿಶ್ವ ಪುಸ್ತಕ ದಿನಾಚರಣೆ

ಗಂಗಾವತಿ ಏ 24 : ತಾಲೂಕಿನ ಶ್ರೀರಾಮನಗರದ ಗ್ರಂಥಾಲಯ ಆವರಣದಲ್ಲಿ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಾ.ಪಂ. ಅಧ್ಯಕ್ಷ ಮಹಮ್ಮದ್ ರಫಿ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ಓದುವ ಹವ್ಯಾಸ ರೂಪಿಸಿಕೊಳ್ಳುವ ಮೂಲಕ ನಿರ್ದಿಷ್ಟ ಗುರಿ ತಲುಪಬೇಕು. ಸತತ ಓದುವ ಅಭ್ಯಾಸದಿಂದ ಜ್ಞಾನ ಬೆಳೆಯುತ್ತದೆ.ಸಾಧಕರನ್ನು ಪ್ರೇರಣೆಯಾಗಿ ತೆಗೆದುಕೊಂಡು ಗುರಿ ಸಾಧಿಸಬೇಕು ಎಂದು ಸಲಹೆ ನೀಡಿದರು.
ಬಳಿಕ ಸಿಎ ತೇರ್ಗಡೆಯಾದ ಶ್ರೀ ವೆಂಕಟ್ ಗುಪ್ತಾ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಅಲ್ಲದೇ ಆವರಣದಲ್ಲಿ ವಿವಿಧ ತಳಿಯ ಸಸಿ ನೆಡಲಾಯಿತು. ನಂತರ ಗ್ರಂಥಾಲಯಕ್ಕೆ ಸಿ.ಹೆಚ್.ಶ್ರೀನಿವಾಸ್, ಗುಂಡೂರ್ ಕ್ರಾಸ್ ಅವರು ಕಳುಹಿಸಿದ ಪುಸ್ತಕಗಳನ್ನು ನೀಡುವುದರ ಮೂಲಕ ವಿಶೇಷವಾಗಿ ಪುಸ್ತಕ ದಿನ ಆಚರಿಸಲಾಯಿತು.
ಈ ವೇಳೆ ಗ್ರಾ.ಪಂ.ಅಧ್ಯಕ್ಷೆ ರೇಣುಕಮ್ಮ, ಪಶು ವೈದ್ಯಕೀಯ ಪರೀಕ್ಷಕ ಸಿ.ಪ್ರಭಾಕರ್ , ಕೊಂಡಯ್ಯ, ಈನಾಡು ಪ್ರಸಾದ್,ಪಂಪನ ಗೌಡ ಮಸ್ಕಿ, ತ್ರಿವೇಣಿ, ಸುಮಂಗಲ,ವೆಂಕಟೇಶ್, ಗ್ರಂಥ ಪಾಲಕ ರಾಕೇಶ್ ಉಪಸ್ಥಿತರಿದ್ದರು