ಶ್ರೀರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಚಾಮರಾಜನಗರ ಜಿಲ್ಲೆಯ ಕಾರ್ಯಾಲಯದ ಉದ್ಘಾಟನೆ

ಚಾಮರಾಜನಗರ, ಡಿ.27- ಶ್ರೀರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರಕ್ಕೆ ನಿಧಿ ಸಮರ್ಪಣಾ ಅಭಿಯಾನದ ಕಾರ್ಯಾಲಯವನ್ನು ಚಾಮರಾಜನಗರದಲ್ಲಿ ಇಂದು ಉದ್ಘಾಟಿಸಲಾಯಿತು,
ನಗರದಲ್ಲಿ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಕಾಯ೵ಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೈಸೂರು ವಿಭಾಗದ ಸಹ ಕಾರ್ಯವಾಹ ಮಹೇಶ್ ಮಾತನಾಡಿ, ಶ್ರೀ ರಾಮ ಮಂದಿರ ಟ್ರಸ್ಟ್‍ನ ನಿರ್ಣಯದಂತೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ರಾಮ ಮಂದಿರ ನಿರ್ಮಾಣವಾದರೆ, ಅದು ಅ ವ್ಯಕ್ತಿಯ ಸಂಸ್ಥೆಯ ಮಂದಿರ ಎಂದು ಬಿಂಬಿತವಾಗುತ್ತದೆ. ಆದ್ದರಿಂದ ಸಾವಿರಾರು ವರ್ಷಗಳಿಂದ ರಾಮ ಮಂದಿರ ನಿರ್ಮಾಣಕ್ಕಾಗಿ ಲಕ್ಷಾಂತರ ರಾಮ ಭಕ್ತರ ಬಲಿದಾನವಾಗಿದೆ. ಇದಕ್ಕೆ ಸಂಪೂರ್ಣ ಗೌರವ ಸಮರ್ಪಣೆಯಾಗುವುದು ರಾಮ ಮಂದಿರ ನಿರ್ಮಾಣಕ್ಕೆ ದೇಶದ ಪ್ರತಿ ಹಿಂದೂ ಮನೆಯಿಂದ ಕನಿಷ್ಠ 10 ರೂಪಾಯಿಯಿಂದ ಅವರವರ ಶಕ್ತಿಯಾನುಸಾರ ನಿಧಿ ಸಮರ್ಪಣೆಯಾದರೆ ಆಗ ಬಲಿದಾನವಾದ ರಾಮ ಭಕ್ತರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಅಲ್ಲದೇ ಹಿಂದೂ ಸಮಾಜದ ರಾಮ ಮಂದಿರ ನಿರ್ಮಾಣವಾಗಲು ಸಾಧ್ಯ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಚಾಮರಾಜನಗರದ ಉದ್ಯಮಿ ಜಿ.ಆರ್.ಅಶ್ವಥ್ ನಾರಾಯಣ ಅವರು, ಸಂಘ ಮತ್ತು ಪರಿವಾರ ಕಾರ್ಯಕರ್ತರು ಉತ್ತಮವಾದ ಕೆಲಸವನ್ನು ಪ್ರಾರಂಭಿಸಿದ್ದಾರೆ ಪ್ರತಿ ಹಿಂದು ಮನೆಯಿಂದ ನಿಧಿ ಪಡೆದು ರಾಮ ಮಂದಿರ ನಿರ್ಮಾಣವಾಗುತ್ತಿರುವುದು ಸಂತಸ ವಿಚಾರ. ಅಲ್ಲದೇ ಯಾವೊಬ್ಬ ಹಿಂದು ಅಯೋಧೆÀ್ಯಯಲ್ಲಿ ರಾಮನ ದರ್ಶನ ಪಡೆಯಲು ಸಾಧ್ಯವಾಗುತ್ತಿರಲ್ಲಿಲ್ಲ ಅಂತಹ ಲಕ್ಷಾಂತರ ಹಿಂದು ಬಂಧುಗಳಿಗೆ ಈ ಮೂಲಕ ಅವರ ಭಕ್ತಿ ಸಮರ್ಪಣೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಪ್ರಾಂತ ಭಾರತೀಯ ಕಿಸನ್ ಸಂಘದ ಸಂಘಟನ ಕಾರ್ಯದರ್ಶಿ ನಾರಾಯಣಸ್ವಾಮಿ, ಮುಖ್ಯ ಅತಿಥಿಗಳಾಗಿ ಖ್ಯಾತ ಇಂಜಿನಿಯರ್ ಆರ್. ಸುಭಾμï, ವಿಭಾಗದ ಟ್ರಸ್ಟ್‍ನ ಸಹ ಪ್ರಮುಖರಾದ ರಾ.ಸತೀಶ್‍ಕುಮಾರ್, ವಿಭಾಗದ ಸಾಧು ಸಂತರ ಪ್ರಮುಖರಾದ ಪೆÇ್ರೀ.ಮಲ್ಲಿಕಾರ್ಜುನಪ್ಪ, ಜಿಲ್ಲಾ ಪ್ರಚಾರಕ್ ಪ್ರಶಾಂತ್‍ಜೀ, ಜಿಲ್ಲಾ ಕಾರ್ಯವಾಹ ಮಹೇಂದ್ರ, ಚುಡಾ ಅಧ್ಯಕ್ಷ ಶಾಂತಮೂರ್ತಿ, ರಾಜ್ಯ ಕೇಂದ್ರ ಬರ ಪರಿಹಾರ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರ, ಭಾಜಪ ಜಿಲ್ಲಾ ಅಧ್ಯಕ್ಷ ಆರ್.ಸುಂದರ್, ಮುಖಂಡರಾದ ನಿಜಗುಣರಾಜು, ವೃಷಬೇಂದ್ರಪ್ಪ, ನಾರಾಯಣಪ್ರಸಾದ್, ಮಂಗಳಮ್ಮ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಸ್ತರದ ಟ್ರಸ್ಟ್‍ನ ಪ್ರಮುಖರು, ಮಾತೆಯರು ಉಪಸ್ಥಿತರಿದರು.