ಶ್ರೀರಾಮಕೃಷ್ಣ ಶಾಲೆಗೆ ಶಿವಶಕ್ತಿದತ್ತಾ ಭೇಟಿ

ಮಾನ್ವಿ.ಜ.೧೦- ತಾಲೂಕಿನ ಅಮರೇಶ್ವರ ಕ್ಯಾಂಪಿನ ಶ್ರೀರಾಮಕೃಷ್ಣ ತೆಲುಗು ಮತ್ತು ಕನ್ನಡ ಮಾಧ್ಯಮ ಅನುದಾನಿತ ಶಾಲೆಗೆ ತೆಲುಗು ಚಿತ್ರರಂಗದ ಸಂಗೀತ ನಿರ್ದೇಶನ ಎಂ ಎಂ ಕೀರವಾಣಿ ಅವರ ತಂದೆ ಶಿವಶಕ್ತಿ ದತ್ತಾ ಭೇಟಿ ಮಾಡಿ ಶಾಲೆ ಮಕ್ಕಳ ಜೊತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು,ನಂತರ ಮಕ್ಕಳ ಜೊತೆಗೆ ಊಟವನ್ನು ಸವಿದ ಹಿರಿಯ ಜೀವಿಯೂ ಬಹಳ ಸರಳ ವ್ಯಕ್ತಿತ್ವದವರಾಗಿದ್ದು ಇವರು ಕಳೆದ ಬಾರಿ ಆಗಮಿಸಿದಾಗ ನಮ್ಮ ಶಾಲೆಗೆ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಮೂಲಕ ಒಂದು ಶಾಲೆ ಕೊಟ್ಟಡಿಯನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ..
ತೆಲುಗು ಚಿತ್ರರಂಗದ ದಿಗ್ಗಜರಾದ ಎಂ ಎನ್ ರಾಜಮೌಳಿ, ಖ್ಯಾತ ಸಂಗೀತ ನಿರ್ದೇಶಕ ಎಂ ಎಂ ಕೀರವಾನಿ ಮೂಲತಃ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಅಮರೇಶ್ವರ ಕ್ಯಾಂಪಿನ ನಿವಾಸಿಗಳಾದ್ದಾರೆ ಅವರ ಮೂಲ ಹೊಲ ಮನೆ ಸೇರಿದಂತೆ ಎಲ್ಲ ಸಂಬಂಧಿಕರು ಕೂಡ ಇದೇ ಗ್ರಾಮದಲ್ಲಿ ವಾಸವಾಗಿದ್ದು ಸಮಯ ಸಿಕ್ಕಾಗ ತಪ್ಪದೇ ಇಲ್ಲಿಗೆ ಆಗಮಿಸಿ ತಮ್ಮವರ ಜೊತೆಗೆ ನಮ್ಮ ಶಾಲೆಗೆ ಬೇಟಿ ನೀಡಿ ಮಕ್ಕಳ ಜೊತೆಗೆ ಸಮಯವನ್ನು ಕಳೆದು ನಮ್ಮ ಸಮಸ್ಯೆಗಳನ್ನು ಆಲಿಸಿ ತಮಗಾಗುವ ಸಹಾಯವನ್ನು ಮಾಡುತ್ತಾರೆ ಎಂದು ಶಾಲೆಯ ಶಿಕ್ಷಕರು ಹೇಳಿದರು..
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಗೋಪಾಲಕೃಷ್ಣ ಮೂರ್ತಿ, ಶಿಕ್ಷಕರಾದ ಹರ್ಷವರ್ಧನ, ಸೇರಿದಂತೆ ಎಲ್ಲ ಸಹ ಶಿಕ್ಷಕರು ಉಪಸ್ಥಿತರಿದ್ದರು.