
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.30: ಬಳ್ಳಾರಿ:ನಗರದ ಶ್ರೀರಾಂಪುರ ಕಾಲೋನಿಯಲ್ಲಿ ಇಂದು ಅಲ್ಲಿನ ರಾಮಾದೇವರ ದೇವಸ್ಥಾನದಲ್ಲಿ ರಾಮ ನವಮಿ ಅಂಗವಾಗಿ ಬೆಳಿಗ್ಗೆ ರಾಮ, ಲಕ್ಷಣ, ಸೀತೆಯ ವಿಗ್ರಹಕ್ಕೆ ಅಭಿಷೇಕ ಮಾಡಿ, ವಿಶೇ಼ ಅಲಂಕಾರ ಮಾಡಿತ್ತು. ನಂತರ ಸೀತಾರಾಮ ಕಲ್ಯಾಣೋತ್ಸವ ನಡೆಯಿತು. ಸಂಜೆ ರಥೋತ್ಸವ ನಡೆಯಲಿದ್ದು. ನಾಳೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ.
ಇದೇ ರೀತಿ ನಗರದ ಹೊರ ವಲಯದ ಅಂದ್ರಾಳಿನಲ್ಲಿರುವ ಶ್ರೀರಾಮ ದೇವಸ್ಥಾನದಲ್ಲಿ ಕಲ್ಯಾಣೋತ್ಸವ ಮತ್ತು ಅನ್ನದಾನ ನಡೆಯಿತು. ಸಂಜೆ ರಥೋತ್ಸವ ನಡೆಯಲಿದೆ.
ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರ್ ವೆಂಕಟರೆಡ್ಡಿ, ಮಹಾನಗರ ಪಾಲಿಕೆ ಸದಸ್ಯ ಎಂ.ರಾಮಾಂಜನೇಯುಲು ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯ ವಿ.ಜಯರಾಮ್, ವಿ. ವೆಂಕಟೇಶಲು, ಗೋವಿಂದರೆಡ್ಡಿ, ಮಾರೆಣ್ಣ ಸೀತಣ್ಣ ಮೊದಲಾದವರು ಪಾಲ್ಗೊಂಡಿದ್ದರು.
ನಗರದ ಹೆಚ್.ಆರ್.ಜಿ.ವೃತ್ತದಲ್ಲಿನ ರಾಮ ಮಂದಿರದಲ್ಲಿಯೂ ರಾಮ ನವಮಿ ಆಚರಿಸಲಾಯ್ತು. ಪಾನಕ ಮತ್ತು ಕೋಸಂಬರಿ ಪ್ರಸಾದ ವಿತರಣೆ ಮಾಡಿದರು.