ಶ್ರೀಮಾರುತಿ ತೊಗಲಗೊಂಬೆ ಕಲಾ ಟ್ರಸ್ಟ್ ನ ಮೂರನೇ ವಾರ್ಷಿಕೋತ್ಸವ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.30: ನಗರದ ಶ್ರೀರಾಂಪುರ ಕಾಲೋನಿಯ ಶ್ರೀರಾಮ ದೇವಸ್ಥಾನದ ಆವರಣದಲ್ಲಿ  ನಿನ್ನೆ ಸಂಜೆ
ಬಳ್ಳಾರಿಯ ಶ್ರೀಮಾರುತಿ ತೊಗಲಗೊಂಬೆ ಕಲಾ ಟ್ರಸ್ಟ್ ನ ಮೂರನೇ ವಾರ್ಷಿಕೋತ್ಸವದ ಅಂಗವಾಗಿ  ಶ್ರೀರಾಮ ನವಮಿ ಸಾಂಸ್ಕೃತಿಕ ಸಂಭ್ರಮ  ಹಮ್ಮಿಕೊಂಡಿತ್ತು.
ಕಾರ್ಯಕ್ರಮವನ್ನು  ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಮನೋಹರ್  ಉದ್ಘಾಟಿಸಿದರು.1975 ರಲ್ಲಿ ದೇವಸ್ಥಾನ ನಿರ್ಮಾಣ ಮಾಡಿದೆ. ಪ್ರತಿವರ್ಷ ಶ್ರೀರಾಮು ನವಮಿಯನ್ನು ಆಚರಣೆ ಮಾಡಲಾಗುತ್ತಿದೆ. ಶ್ರೀರಾಮ ದೇವರ ಮೆರವಣಿಗೆ ನಡೆಯಲಿದೆಂದು ತಿಳಿಸಿದರು.
ಸಾಗರ್ ಕುಮಾರ್
ಕಲಾವಿದರಿಗೆ ಆರ್ಥಿಕತೆಯ ಸಹಾಯಕತೆ ಇದೆ. ಸದಾ ಎಲ್ಲರ ಪ್ರೋತ್ಸಾಹ ಮುಖ್ಯ ಎಂದರು.
ಅಭಿನಯ ಕಲಾಕೇಂದ್ರದ ಕೆ.ಜಗದೀಶ ಮತ್ತು ನೃತ್ಯ ಕಲಾವಿದ ಅಭಿಷೇಕ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಲಾವಿದ ಸುಂದರ್, ಅಣ್ಣಾಜಿ ಡಾ.ಕೃಷ್ಣಾ ರೆಡ್ಡಿ, ಪತ್ರಕರ್ತ ಎನ್.ವೀರಭದ್ರಗೌಡ ಕಲಾ ಟ್ರಸ್ಟ್ ನ ಅಧ್ಯಕ್ಷ ಸುಬ್ಬಣ್ಣ ಮೂದಲಾದವರು ಇದ್ದರು.
ನಂತರ ಆರ್.ಕೆ.ವೀರಾಂಜಿನೇಯ ಮತ್ತು ತಂಡದಿಂದ ತೊಗಲಗೊಂಬೆ ಪ್ರದರ್ಶನ, ಅಭಿಷೇಕ್ ಮತ್ತು ತಂಡದಿಂದ ಜಾನಪದ ಸಮೂಹ ನೃತ್ಯ, ಕುಮಾರಗೌಡ ಅಮರಾಪುರ, ಮತ್ತು ಸಣ್ಣ ಹೊನ್ನೂರ್ ಸಾಬ್ ಶಂಕರಬಂಡೆ ಇವರಿಂದ ಜಾನಪದ ಗೀತ ಗಾಯನ ನಡೆಯಿತು.