ಶ್ರೀಮಾಧವ ಗೋಶಾಲೆಯಲ್ಲಿ ಪಾರಾಯಣ

ಕಲಬುರಗಿ.ಏ 10: ನಗರದ ಶ್ರೀ ಸತ್ಯ ಪ್ರಮೋದ ಕೃಪಾ ಪೆÇೀಷಿತ ಪಾರಾಯಾಣ ಸಂಘದ ವತಿಯಿಂದ ಕುಸನೂರಿನ ಶ್ರೀ ಮಾಧವ ಗೋಶಾಲೆಯಲ್ಲಿ ಪಾರಾಯಣ ಹಮ್ಮಿಕೊಳ್ಳಲಾಯಿತು. ಗೋಭಕ್ತರು ಗೋವುಗಳ ಸಮ್ಮುಖದಲ್ಲಿ ಪಾರಾಯಣ ಮಾಡಿದರು. ಇದೇ ಸಂದರ್ಭದಲ್ಲಿ ಗೋಪೂಜೆ ಸಲ್ಲಿಸಿ ಗೋವುಗಳಿಗೆ ಗೋಗ್ರಾಸ, ಫಲ ಅರ್ಪಿಸಿದರು.
ರೋಗಗ್ರಸ್ತ, ನಿರಾಶ್ರಿತ, ವಯಸ್ಸಾದ ಗೋವುಗಳ ಸೇವೆಯಲ್ಲಿ ತೊಡಗಿರುವ ಶ್ರೀ ಮಾಧವ ಗೋಶಾಲೆಗೆ ಶ್ರೀ ಸತ್ಯ ಪ್ರಮೋದ ಕೃಪಾ ಪೆÇೀಷಿತ ಪಾರಾಯಾಣ ಸಂಘದ ಸದಸ್ಯರಿಂದ ಗೋಸೇವಾ ನಿಧಿ ಅರ್ಪಿಸಲಾಯಿತು.