ಶ್ರೀಮದ್ ಭಗವದ್ಗೀತಾ ಅಭಿಯಾನ

ಸತ್ತೂರು,ಡಿ8 : ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀಮದ್ ಉತ್ತರಾದಿ ಮಠಾಧೀಶರಾದ ಪರಮಪೂಜ್ಯ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರ ಆಜ್ಞೆ ಹಾಗೂ ಅನುಗ್ರಹದಿಂದ ಭಾರತಾದ್ಯಂತ ಹಮ್ಮಿಕೊಂಡಿರುವಂತಹ ಶ್ರೀಮದ್ ಭಗವದ್ಗೀತಾ ಅಭಿಯಾನ ಕಾರ್ಯಕ್ರಮ ಚತುರ್ಥ ಅಧ್ಯಾಯ ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಹಿರಿಯ ಪ್ರವಚನಕಾರರಾದ ಪಂ. ಸುರೇಶಾಚಾರ್ ರಾಯಚೂರು ಇವರಿಂದ ಬರುವ ಏಕಾದಶಿಯಿಂದ ಅಂದರೆ ದಿನಾಂಕ 8-12-23 ರಿಂದ 10-12-23ರ ವರೆಗೆ ಸಾಯಂಕಾಲ 5:30ರಿಂದ 6:30ವರೆಗೆ ವನಸಿರಿ ನಗರದಲ್ಲಿರುವ ಪೆÇ್ರ. ವಾಮನ ಭಾದ್ರಿ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ. ತನ್ನಿಮಿತ್ತ ಸುಮಂಗಲಿಯರಿಂದ 4.30 ರಿಂದ 5.30ವರೆಗೆ ಭಜನೆ ಕಾಯ9ಕ್ರಮ ಹಮ್ಮಿಕೊಳ್ಳಲಾಗಿದೆ. ಸಕಲ ಸದ್ದಕ್ತರು ಸಕಾಲಕ್ಕೆ ಆಗಮಿಸಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 63 61 83 57 10 ಸಂಪರ್ಕಿಸಲು ಬಳಗದ ಸಂಚಾಲಕರಾದ ಶ್ರೀ ರಘೋತ್ತಮ ಅವಧಾನಿಯವರು ತಿಳಿಸಿದ್ದಾರೆ.