ಶ್ರೀಮದ್ ಭಗವದ್ಗೀತಾ ಅಭಿಯಾನ ಉದ್ಘಾಟನೆ


ಹುಬ್ಬಳ್ಳಿ,ಏ.22: ಭಗವದ್ಗೀತಾ ಆಭಿಯಾನದ ಉದ್ಘಾಟನಾ ಸಮಾರಂಭವನ್ನು ಶ್ರೀ ಗೋಪಾಲಾಚಾರ್ ಹರಿಹರ ಅವರ ಮನೆಯಲ್ಲಿ, ಸತ್ತೂರಿನ ನಾರಾಯಣ – ಪಾರಾಯಣ ಬಳಗದ ಆಶ್ರಯದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಜಗದ್ಗುರು ಶ್ರಿಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ಮದ್ ಉತ್ತರಾದಿ ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆಜ್ಞೆ ಹಾಗೂ ಅನುಗ್ರಹದಿಂದ ಭಾರತಾದ್ಯಂತ ಹಮ್ಮಿಕೊಂಡಿರುವ ಶ್ರೀಮದ್ ಭಗವದ್ಗೀತಾ ಅಭಿಯಾನವನ್ನು , ಹುಬ್ಬಳ್ಳಿಯ ಮಹಾಚಾರ್ಯ ವಿದ್ಯಾಲಯದ ಕುಲಪತಿಗಳಾದ ಶ್ರೀ ಪ್ರದ್ಯುಮ್ನಾಚಾರ್ಯ ಜೋಷಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ , ಮಹಾಭಾರತದಲ್ಲಿ ವಿಷ್ಣುಸಹಸ್ರನಾಮ ಹಾಗೂ ಭಗವದ್ಗೀತೆ ಎರಡು ಮುಖ್ಯ ಘಟ್ಟಗಳು, ಮುಕ್ತಿ ಮಾರ್ಗ ತೋರುವ ಮಾರ್ಗ ದರ್ಶಕಗಳು ಎಂದು ಹೇಳಿದರು.
ಜೀವನದಲ್ಲಿ ಅನಿವಾರ್ಯ ಹಾಗೂ ಆವಶ್ಯಕ ಎಂಬ ಎರಡು ಕರ್ತವ್ಯಗಳಿದ್ದು, ಜೀವನ ನಿರ್ವಹಣಾ ಕರ್ತವ್ಯ ಅನಿವಾರ್ಯ ಎಲ್ಲರೂ ಮಾಡಿಯೇ ಮಾಡುತ್ತಾರೆ. ಅದೇ ರೀತಿ ಜೀವನ ಮೌಲ್ಯಗಳನ್ನು ಉನ್ನತಿಗೆ ಕೊಂಡೊಯ್ಯುವ ಆಧ್ಯಾತ್ಮದ ಅಧ್ಯಯನ ತುಂಬಾ ಆವಶ್ಯಕ. ಅದಿಲ್ಲದಿದ್ದರೆ ಜೀವನವೇ ವ್ಯರ್ಥವಾಗುವ ಭಯವಿದೆ. ಆದಕಾರಣ ಆತ್ಮೋನ್ನತಿಗೂ ಅವಶ್ಯಕ ಕ್ರಮ ಕೈಗೊಂಡು ಪಡೆದ ಶಿಕ್ಷಣವನ್ನು ಸಮಾಜ ಹಾಗೂ ಆತ್ಮೋನ್ನತಿಗೆ ಹೇಗೆ ಉಪಯೋಗಿಸಿಕೊಳ್ಳಬೇಕು ಎನ್ನುವುದೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನ ಮುಖಾಂತರ ನಮ್ಮೆಲ್ಲರಿಗೆ ಹೇಳಿದ್ದಾನೆ ಎಂದು ಹೇಳಿದರು.
ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ತ್ರಿನೇತ್ರ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನದ, ಪಂಡಿತ ರವಿ ಆಚಾರ್ಯ ಮತ್ತಿಹಳ್ಳಿ ಅವರು ಭಗವದ್ಗೀತೆ, ಯುದ್ಧ ಸ್ಫೋಟ ಸಮಯದಲ್ಲಿ ಶ್ರೀಕೃಷ್ಣ, ಅರ್ಜುನನಿಗೆ ಮನಃ ಶಾಸ್ತ್ರಜ್ಞನಾಗಿ, ಗೆಳೆಯನಾಗಿ, ಮಾರ್ಗದರ್ಶಕನಾಗಿ, ಜಗತ್ತಿನ ಏಕೈಕ ನಿಯಾಮಕನಾಗಿ ಶ್ರೀಹರಿ ಇರುವುದರಿಂದ ನಿಮ್ಮ ನಿಮ್ಮ ನಿಯತ ಕೆಲಸಗಳನ್ನು ಫಲಾಪೇಕ್ಷೆ ಇಲ್ಲದೇ ಮಾಡು ಎಂದು ಉಪದೇಶಿದ, ಎಂದು ತಿಳಿಸಿದರು. ಅದೇ ರೀತಿ “ಹರಿಃ ಪರಿತರಃ” ಅಂದರೆ ಪರಮಾತ್ಮನಿಗಿಂತ ಶ್ರೇಷ್ಠರು, ಅಥವಾ ಆತನಿಗೆ ಸಮನಾದವರು ಯಾರೂ ಇಲ್ಲಎಂದು ಹೇಳುತ್ತಾ, ಆ ಭಗವಂತನಿಗೆ ಪ್ರಿಯ ಕಾರ್ಯಗಳನ್ನು ಮಾಡಿ ಯಶಸ್ವಿಯಾಗೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೃಷ್ಣ ಹುನುಗುಂದ , ಜಯತೀರ್ಥ ನಿಲೋಗಲ್, ಪೆÇ್ರ. ವಾಮನ ಭಾದ್ರಿ , ಶ್ರೀನಿವಾಸ ಪಟ್ಟನಕುಡಿ, ಪ್ರಕಾಶ ದೇಸಾಯಿ, ಬದರಿನಾಥ್ ಬೆಟಗೇರಿ , ಪ್ರಮೋದ್ ಶಿರಗುಪ್ಪಿ , ವಿಲಾಸ್ ಸಬ್ನೀಸ್ , ಗೋಪಾಲಾಚಾರ್ ಜೋಶಿ , ಕೇಶವ ಕುಲಕರ್ಣಿ , ಸಂಜೀವ್ ಜೋಶಿ , ರಾಘವೇಂದ್ರಾಚಾರ್ ಆಶ್ರಿತ್, ಪೆÇ್ರ. ಸಿ ಕೆ ಕುಲಕರ್ಣಿ , ಅನಿಲ್ ಹರಿಹರ ಹಾಗೂ ಮುಂತಾದ ಕುಟುಂಬದವರು ಉಪಸ್ಥಿತರಿದ್ದರು.