ಶ್ರೀಮದ್ ಉಜೈನಿ ಸದ್ಧರ್ಮ ಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಶರನ್ನವರಾತ್ರಿ ಹಾಗೂ ದಸರಾ ಮಹೋತ್ಸವ

ಕೊಟ್ಟೂರು, ಅ.27: ವಿಜಯದಶಮಿಯಂದು ತಾಲೂಕಿನ ಉಜ್ಜಿನಿ ಪೀಠದಲ್ಲಿ ಪೀಠದ ಜಗದ್ಗುರು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಭಾಗವತ ದಿವ್ಯ ಸಾನಿಧ್ಯದಲ್ಲಿ ಬನ್ನಿ ವೃಕ್ಷಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ಬನ್ನಿಮುಡಿದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸದ್ಭಕ್ತರಿಗೆ ಬನ್ನಿ ಬಂಗಾರವಾಗಲಿ ಎಂದು ಆಶೀರ್ವದಿಸಿದರು ಇದೇ ಸಂದರ್ಭದಲ್ಲಿ ಎಲ್ಲ ಭಕ್ತಾದಿಗಳಿಗೆ ಆರೋಗ್ಯದ ಹಿತದೃಷ್ಟಿಯಿಂದ ಶ್ರೀಗುರುಗಳು 2000ಕ್ಕೂ ಹೆಚ್ಚು ಮಾಸ್ಕ್ ಹಂಚುವುದರ ಮೂಲಕ ಕರೋನ ವಿರುದ್ಧ ಹೋರಾಡುವ ಮೂಲಕ ಜಾಗೃತಿ ಮೂಡಿಸಿ ಭಕ್ತರಿಗೆ ವಿಶೇಷ ಆಶೀರ್ವಾದ ನೀಡಿದರು
ಈ ಎಲ್ಲಾ ಕಾರ್ಯಕ್ರಮ ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರದ ಮೂಲಕ ಅತ್ಯಂತ ಸರಳವಾಗಿ ನಡೆಯಿತು.