ಶ್ರೀಮದ್ಗೀತಾ ಭಾವಾಮೃತ ವರ್ಷಿಣಿ ಗ್ರಂಥ ಬಿಡುಗಡೆ

ಕಲಬುರಗಿ ನ6: ಇಲ್ಲಿನ ಆರ್ ಟಿ ನಗರದಲ್ಲಿ ಸತ್ಯಾತ್ಮತೀರ್ಥ ಶ್ರೀಗಳವರುವರು ಬಿಡುಗಡೆಗೊಳಿಸಿದ
ಶ್ರೀಮದ್ಗೀತಾ ಭಾವಾಮೃತ ವರ್ಷಿಣಿ ಗ್ರಂಥವನ್ನು ಇಂದು ನಡೆದ ಪಾರಾಯಣದಲ್ಲಿ ರವಿ ಲಾತೂರಕರ ಮತ್ತು ಪದ್ಮನಾಭಚಾರ್ಯ ಜೋಷಿ ಅವರು ಮರುಬಿಡುಗಡೆಗೊಳಿಸಿ ಎಲ್ಲರಿಗೂ ವಿತರಿಸಿದರು.
ಶ್ರೀಮದ್ಗೀತೆ 18 ಅಧ್ಯಾಯಗಳನ್ನು ಅತಿ ಸರಳವಾಗಿ ಕನ್ನಡಕ್ಕೆ ಅನುವಾದ ಮಾಡಿದ ದಿ. ಅನಂತ ಆಚಾರ್ಯ ಆದ್ಯ ಜಾಗೀರದಾರ ಅವರ ಕಾರ್ಯ ಶ್ಲಾಘನೀಯ.ಆ ಅನುವಾದವನ್ನು ಪುಸ್ತಕ ರೂಪದಲ್ಲಿ ಅವರ ಪುತ್ರಿ ಜೋತ್ಸ್ನಾ
ಹೇರೂರ ಅವರು ಜನರಿಗೆ ತಲುಪಿಸಿದ್ದಾರೆ ಎಂದು
ಪುಸ್ತಕದ ಪರಿಚಯವನ್ನು ಮಾಡಿದ ಹಿರಿಯ ಪತ್ರಕರ್ತ ಶೇಷಮೂರ್ತಿ ಅವಧಾನಿಯವರು ನುಡಿದರು.
ವೀರೇಶ್ ಕುಲ್ಕರ್ಣಿ, ಅಪ್ಪಾರಾವ ಟಕ್ಕಳಕಿ,ಅನಿಲ್ ಕುಲ್ಕರ್ಣಿ,ಸುರೇಶ್ ಕುಲಕರ್ಣಿ,ವಿನುತ ಜೋಷಿ,ಗುರುರಾಜ್ ದೇವ್ ನವದ್ಗಿ,ಗಿರೀಶ್ ಕುಲ್ಕರ್ಣಿ,ಪ್ರಾಣೇಶ್ ಮೂಜುಮದಾರ್,ರಂಗರಾವ್,ನರಸಿಂಗ ರಾವ್,ರಾಜೇಂದ್ರ ಹೇರೂರ ,ಹನುಮಂತ ರಾವ್ ,ಶ್ರೀಧರ್ ಜೋಷಿ,ಅಶುತೋಷ್,ಅನಿರುದ್ಧ,ವಿಶ್ವಾಸ್ ಉಪಸ್ಥಿತರಿದ್ದರು.