ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷರಿಂದ   ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಗೆ ಸನ್ಮಾನ

ಸಂಜೆವಾಣಿ ವಾರ್ತೆ

ದಾವಣಗೆರೆ ಜು.೧೨: ಗಣಿ ಮತ್ತು ಭೂವಿಜ್ಞಾನ  ತೋಟಗಾರಿಕೆ ಸಚಿವರು ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರನ್ನು ದಾವಣಗೆರೆಯ ನಿವಾಸದಲ್ಲಿ   ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷರಾದ  ಎಚ್.ಆರ್ ಬಸವರಾಜಪ್ಪ  ನೇತೃತ್ವದಲ್ಲಿ ಆತ್ಮೀಯವಾಗಿ   ಸನ್ಮಾನ ಮಾಡಲಾಯಿತು.  ಹೆಚ್ ಆರ್ ಬಸರಾಜಪ್ಪ  ನೂತನ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರನ್ನು ಅಭಿನಂದಿಸಿ ಮಾತನಾಡುತ್ತಾ , ಮಲ್ಲಿಕಾರ್ಜುನ್   ಮಧ್ಯ ಕರ್ನಾಟಕದ ಯುವ ನಾಯಕರಾಗಿದ್ದು ನಾಡಿನ ಅಭಿವೃದ್ಧಿಯ ಬಗ್ಗೆ ಸದಾ ದೂರದೃಷ್ಟಿಯುಳ್ಳವರಾಗಿದ್ದಾರೆ. ಅವರ ಅವಧಿಯಲ್ಲಿ ಜಿಲ್ಲೆ ಮತ್ತು ನಾಡು ಅಭಿವೃದ್ಧಿ ಸಾಧಿಸುವಂತಾಗಲಿ ಎಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಸಂಘದ ಗೌರವ ಕಾರ್ಯದರ್ಶಿಗಳಾದ  ಎಮ್. ಬಿ. ಸಂಗಮೇಶ್ವರ ಗೌಡ, ಬಿ  .ವಾಮದೇವಪ್ಪ, ವೈ ವಸಂತಪ್ಪ, ಕೆ.ಸಿ ಲಿಂಗರಾಜ್ ಆನೆಕೊಂಡ ,ಎಸ್. ಆರ್. ಸಿರಗಂಬಿ ,ಡಾ ಎಚ್ ಎಸ್ ಮಂಜುನಾಥ್ ಕುರ್ಕಿ  ಜಿ.ಡಿ .ಗುರುಸ್ವಾಮಿ  , ಜಿ ಆರ್ .ಷಣ್ಮುಖಪ್ಪ ಇನ್ನು ಮಂತಾದವರು  ಉಪಸ್ಥಿತರಿದ್ದರು.