ಶ್ರೀಮತ್ ಕಣ್ವಮಠದಲ್ಲಿ ಕಾರ್ತಿಕ ದೀಪೆÇೀತ್ಸವ

ಕಲಬುರಗಿ:ನ.10:ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿದಂತೆ ಕಾರ್ತಿಕ ಮಾಸದಲ್ಲಿ ಶ್ರೀ ಕೃಷ್ಣ ಪರಮಾತ್ಮನಿಗೆ ದೀಪಗಳನ್ನು ಅರ್ಪಿಸುವುದರಿಂದ ಯಜ್ಞಗಳು ಮತ್ತು ಪವಿತ್ರ ನದಿಗಳ ಸ್ಥಾನ ಮಾಡಿದ ಪುಣ್ಯ ಲಭಿಸುತ್ತದೆ ಹಾಗೆಯೆ ಸರ್ವರೋಗ ನಿವಾರಕವಾದ ಶ್ರೀ ಧನ್ವಂತರಿ ಹೋಮವನ್ನು, ಶ್ರೀ ವಿದ್ಯಾಕಣ್ವವಿರಾಜ ತೀರ್ಥ ಶ್ರೀಪಾದಂಗಳವರ ಆದೇಶದ ಮೇರೆಗೆ ಶ್ರೀಮತ್ ಕಣ್ವಮಠ ಹುಣಸಿಹೊಳೆಯಲ್ಲಿ ಆಯೋಜಿಸಲಾಗಿದೆ.

ಶನಿವಾರ ದಿನಾಂಕ 12 ನವಂಬರ್ 2022ರಂದು ಸಾಯಂಕಾಲ ದೀಪೆÇೀತ್ಸವ ಮತ್ತು ಪಂಡಿತ್ ಶ್ರೀ ಅರುಣಕುಮಾರ್ ಜೋಶಿ ರಂಗಂಪೇಟೆ ಅವರಿಂದ ಪ್ರವಚನ ಮತ್ತು ರವಿವಾರ ದಿನಾಂಕ 13 ನವಂಬರ್ 2022 ರಂದು ಬೆಳಿಗ್ಗೆ 6 ಘಂಟೆಗೆ ಶ್ರೀಯುತ ಚಿದಂಬರ ದೇಶಪಾಂಡೆ ಇಳಕಲ್ ಅವರಿಂದ ಯೋಗ ಶಿಬಿರ, 9 ಘಂಟೆಗೆ ವೇದಮೂರ್ತಿಗಳಾದ ಶ್ರೀ ವಿಷ್ಣುಪ್ರಕಾಶ್ ಜೋಶಿ, ಶ್ರೀ ಜಗನ್ನಾಥಾಚಾರ್ ಜೋಶಿ ಶ್ರೀ ಶಂಕರಭಟ್ ಜೋಶಿ ಮತ್ತು ಶ್ರೀ ಮಾರುತಿ ಬೈಚಬಾಳ ಅವರ ನೇತೃತ್ವದಲ್ಲಿ ಶ್ರೀ ಧನ್ವಂತರಿ ಹೋಮ ಪೂರ್ಣಾಹುತಿ ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯುತ್ತದೆ.
ಟ್ರಸ್ಟನ ಅಧ್ಯಕ್ಷರಾದ ಮನೋಹರ ಮಾಡಿಗೇರಿ, ಉಪಾಧ್ಯಕ್ಷರಾದ ರಾಜು ಜೋಶಿ, ದಿವಾನರಾದ ಸುರೇಶ್ ಕುಲಕರ್ಣಿ, ಮಲ್ಹರರಾವ್ ಗಾರಂಪಳ್ಳಿ ರಾಘವೇಂದ್ರ ವಕೀಲ, ವಿನುತ ಎಸ್ ಜೋಶಿ ಹಾಗೂ ಟ್ರಸ್ಟನ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಶ್ರೀ ಸಂಸ್ಥಾನದ ಶಿಷ್ಯವರ್ಗ ಭಕ್ತರೆಲ್ಲರೂ ಭಾಗವಹಿಸಿ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೋರಲಾಗಿದೆ, ಹೆಚ್ಚಿನ ಮಾಹಿತಿ ಮೋ:9845947203 ಮತ್ತು 9986974100 ಪ್ರಕಟಣೆಯಲ್ಲಿ ವಿನುತ ಜೋಶಿ ತಿಳಿಸಿದ್ದಾರೆ.