ಶ್ರೀಮಂತ ಮುಖ್ಯಮಂತ್ರಿಗಳಲ್ಲಿ ಜಗನ್ ರೆಡ್ಡಿಗೆ ಮೊದಲ ಸ್ಥಾನ

ನವದೆಹಲಿ,ಏ.12- ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಒಟ್ಟು 510 ಕೋಟಿ ರೂ.ಗಳ ಆಸ್ತಿಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಅರುಣಾಚಲ ಪ್ರದೇಶದ ಮುಖ್ಯಮಂತ್ರಿ

ಪೆಮಾ ಖಂಡುವಾ ಅವರು ಒಟ್ಟು 163 ಕೋಟಿ ಆಸ್ತಿಯೊಂದಿಗೆ ದೇಶದ ಎರಡನೇ ಶ್ರೀಮಂತ ಮುಖ್ಯಮಂತ್ರಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರೆ,

ಒಡಿಶಾ ಮುಖ್ಯಮಂತ್ರಿ

ನವೀನ್ ಪಟ್ನಾಯಕ್ ಒಟ್ಟು 63 ಕೋಟಿ ರೂ.ಗಳ ಚರ ಮತ್ತು ಸ್ಥಿರ ಆಸ್ತಿಯೊಂದಿಗೆ ಮುಖ್ಯಮಂತ್ರಿಗಳ ಪೈಕಿ ಮೂರನೇ ಶ್ರೀಮಂತರಾಗಿದ್ದಾರೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸ್ -ಎಡಿಆರ್ ವರದಿಯ ಪ್ರಕಾರ, ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಒಟ್ಟು 510 ಕೋಟಿ ರೂ.ಗಳ ಆಸ್ತಿಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ ಎಂದು ತಿಳಿಸಿದೆ.

ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿಗಳು

ದೇಶದಲ್ಲಿ ಶ್ರೀಮಂತ ಮುಖ್ಯಮಂತ್ರಿಗಳ ನಡುವೆಯೇ ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿಗಳ ಪೈಕಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ 15 ಲಕ್ಷ ರೂಪಾಯಿ ಹೊಂದುವ ಮೂಲಕ ಕಡಿಮೆ ಆದಾಯದ ಮುಖ್ಯಮಂತ್ರಿ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗು

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್

ಅವರು ತಲಾ 1 ಕೋಟಿ ರೂಪಾಯಿ ಆದಾಯ ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದ್ಧಾರೆ.

ಎಡಿಆರ್ ವರದಿಯ ಪ್ರಕಾರ, ರಾಜ್ಯ ವಿಧಾನಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವಿಶ್ಲೇಷಿಸಲಾದ ಎಲ್ಲಾ 30 ಮುಖ್ಯಮಂತ್ರಿಗಳ ಪೈಕಿ 13 ( ಶೇ.43 ರಷ್ಟು) ಮುಖ್ಯಮಂತ್ರಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ.

ಒಡಿಶಾದ ಬಿಜು ಜನತಾ ದಳ (ಬಿಜೆಡಿ) ಭಾರತದ ಎರಡನೇ ಶ್ರೀಮಂತ ಪ್ರಾದೇಶಿಕ ರಾಜಕೀಯ ಪಕ್ಷವಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸ್ (ಎಡಿಆರ್) ತನ್ನ ಹಿಂದಿನ ವರದಿಯಲ್ಲಿ ಬಹಿರಂಗಪಡಿಸಿದೆ. ಡಿಎಂಕೆ ದೇಶದಲ್ಲೇ ಅತ್ಯಂತ ಶ್ರೀಮಂತವಾಗಿದೆ.

ಬಿಜೆಡಿಯು 307.288 ಕೋಟಿ ರೂ.ಗಳ ಎರಡನೇ ಅತಿ ಹೆಚ್ಚು ಆದಾಯ ಹೊಂದಿದೆ, ಇದು ಎಲ್ಲಾ ಪಕ್ಷಗಳ ಒಟ್ಟು ಆದಾಯದ 25.33 ಪ್ರತಿಶತ ಹೊಂದಿದೆ, ಇದು 318.745 ಕೋಟಿ ರೂ.ಗಳಲ್ಲಿ ಅತಿ ಹೆಚ್ಚು ಆದಾಯವನ್ನು ಹೊಂದಿರುವ ಡಿಎಂಕೆಗಿಂತ ಸ್ವಲ್ಪ ಹಿಂದಿದೆ.

ಟಿಆರ್‍ಎಸ್ ತನ್ನ ಆದಾಯವನ್ನು ರೂ 218.112 ಕೋಟಿ ಅಥವಾ ಒಟ್ಟು ಆದಾಯದ ಶೇ.17.98 ರಷ್ಟು ಎಂದು ವರದಿಯಲ್ಲಿ ಈ ವಿಷಯ ತಿಳಿಸಿದೆ.