ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ.ಸರ್ಕಾರದ ಸೌಲಭ್ಯಗಳು ಮನೆ ಮನೆಗೆ ವಿಶೇಷ ಶಿಬಿರ

ಕಾಗವಾಡ : ಸೆ.20:ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ಸೋಮವಾರ ದಿ. 19 ರಂದು ಮುಂಜಾನೆ 9 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಕಾಗವಾಡ ಶಾಸಕರ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಮನೆ-ಮನೆಗೆ ತಲುಪಿಸುವ ನಿಟ್ಟಿನಲ್ಲಿ ವಿಶೇಷ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಇಲ್ಲಿನ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಶಿಬಿರದಲ್ಲಿ ಸಾವಿರಾರು ಸ್ತ್ರೀ-ಪುರುಷರು, ಯುವಕರು ಇದರ ಲಾಭವನ್ನು ಪಡೆದುಕೊಂಡರು.
ಶಾಸಕರ ಆಪ್ತ ಸಹಾಯಕನಾದ ವಿನಾಯಕ ಸಿಂಧೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಕಾಗವಾಡ ಶಾಸಕರಾದ ಶ್ರೀಮಂತ ಪಾಟೀಲ ಅವರು ತಮ್ಮ ಕ್ಷೇತ್ರದ ಪ್ರತಿಯೊಬ್ಬ ಪ್ರಜೆಯೂ ಸರ್ಕಾರದ ಸೌಲಭ್ಯದಿಂದ ವಂಚಿತವಾಗಬಾರದು ಎಂಬ ಮಹತ್ವಾಕಾಕ್ಷೆಯಿಂದ ಸರ್ಕಾರದ ಯೋಜನೆಗಳು ಮನೆ ಬಾಗಿಲಿಗೆ ಎಂಬ ಧ್ಯೇಯದೊಂದಿಗೆ ತಮ್ಮ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಇಂತಹ ಶಿಬಿರಗಳನ್ನು ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪ್ರಾರಂಭಿಸಿದ್ದು, ಇಂದು ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ಪಟ್ಟಣ ಪಂಚಾಯತಿ ಸಹಯೋಗದೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಜನರಿಗೆ ಮುಟ್ಟಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ಈ ಶಿಬಿರದಲ್ಲಿ ಸರ್ಕಾರಿ ಸೇವೆಗಳಾದ ಇ- ಶ್ರಮ ಕಾರ್ಡ, ಆಧಾರ್ ಕಾರ್ಡ್, ಅಂಗವಿಕಲ ಪಿಂಚಣಿ, ವಿದ್ಯಾ ಪಿಂಚಣಿ, ಸಂಧ್ಯಾ ಸುರಕ್ಷಾ ಪಿಂಚಣಿ ಸೇರಿದಂತೆ ಹಲವರು ವಿವಿಧ ಪಿಂಚಣಿ ಯೋಜನೆಗಳು. ಆರೋಗ್ಯ ಇಲಾಖೆಯ ಆಯುಷ್ಮಾನ್ ಭಾರತ ಕಾರ್ಡ್, ವಿವಿಧ ಸರ್ಕಾರಿ ಯೋಜನೆಗಳ ಆನ್‍ಲೈನ್ ಅರ್ಜಿಗಳು ಪಡೆದುಕೊಳ್ಳಲಾಯಿತು.
ಈ ಸಮಯದಲ್ಲಿ ಪಟ್ಟಣದ ಮುಖಂಡರಾದ ಕಿರಣ ಯಂದಗೌಡರ, ಭರತೇಶ ಪಾಟೀಲ, ಅರುಣ ಯಂದಗೌಡರ, ಸುಭಾಷ ಢಾಲೆ, ಉತ್ಕರ್ಷ ಪಾಟೀಲ, ದೀಪಕ ಕಾಂಬಳೆ, ರಾಜು ಸಿಂಧೆ, ವಸಂತ ಸಿಂಧೆ, ರಾಜು ಕುಸನಾಳೆ, ಸಚೀನ ಜಗತಾಪ, ಆದಿನಾಥ ಲಾಟಕರ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.