ಶ್ರೀಮಂತ ಪರಂಪರೆ ಹೊಂದಿದ ಭಾಷೆ ಕನ್ನಡ: ಡಾ. ಬಳಿಗಾರ

ಬಾದಾಮಿ:(ಕುಲಕರ್ಣಿ ಬಿಂದು ಮಾಧವ ಪ್ರಧಾನ ವೇದಿಕೆ),ಮಾ27: ಸಭ್ಯ ಸಮಾಜ ನಿರ್ಮಾಣಕ್ಕೆ ಲೇಖನಿಯನ್ನು ಬಳಸಿರಿ. ಕನ್ನಡ ಭಾಷೆÉ ಶ್ರೀಮಂತ ಪರಂಪರೆಯನ್ನು ಹೊಂದಿದೆ ಆದರೆ ಇಂದು ಆಪತ್ತು ಎದುರಾಗಿದೆ ಎಂದು ಜನಪದ ಸಾಹಿತಿ ಡಾ.ಶಂಭು ಬಳಿಗಾರ ಕಳವಳ ವ್ಯಕ್ತಪಡಿಸಿದರು.
ಅವರು ಶುಕ್ರವಾರ ತಾಲೂಕಿನ ನೀಲಗುಂದ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕಾ ಕನ್ನಡ ಸಾಹಿತ್ಯ ಪರಿಷÀತ್ತಿನ ಅಡಿಯಲ್ಲಿ ನಡೆದ 8 ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆÉಗೆ 1000 ವರ್ಷ ಗತಿಸಿದರೂ ಇಂದು ನಾವು ಮರ್ಯಾದೆಯಿಂದ ಬದುಕುತ್ತಿದ್ದೇವೆ. ಸಭ್ಯತೆಯ ಬೋಧನೆ ಇಂದಿನ ತುರ್ತು ಅಗತ್ಯವಾಗಿದೆ. ಸರ್ವಜ್ಞ ಸಭ್ಯ ಸಮಾಜಕ್ಕಾಗಿ ಹೋರಾಡಿದರು. ಸಭ್ಯತೆ ಎಲ್ಲೆ ಮೀರಬಾರದು. ಬಿಚ್ಚಿ ಹೇಳುವುದು ಕಾವ್ಯ. ಇಂದು ಓದುವುದು, ಬರೆಯುವುದು ಕಡಿಮೆಯಾಗಿದೆ. ಹಿಂದೆ ರೈತರೊಂದಿಗೆ ಅನ್ನ ಋಣದ ಸಂಬಂಧ ಇತ್ತು. ಹಿಂದೆ ಆಯಾ ಪದ್ದತಿ ಜಾರಿಯಲ್ಲಿತ್ತು. ಇಡೀ ಊರಿಗೆ ರೈತರು ಕಾಳು, ಕಡಿ ಕೊಟ್ಟು ನಡೆಸುತ್ತಿದ್ದರು. ಇಂದು ರೈತನ ಪರಿಸ್ಥತಿ ಚಿಂತಾಜನಕವಾಗಿದೆ. ರೈತರು ಸ್ವಾವಲಂಬಿಗಳಾಗಬೇಕು. ಕನ್ನಡಿಗರು ಸ್ವಾಭಿಮಾನಿಗಳಾಗಬೇಕು ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ಮಾತನಾಡಿ ಸಾಹಿತ್ಯ ಸಮ್ಮೇಳನಗಳು ನಗರ ಪ್ರದೇಶದಲ್ಲಿ ಯಶಸ್ವಿಯಾಗುವುದಿಲ್ಲ ಆದರೆ ಗ್ರಾಮೀಣ ಪ್ರದೇಶದಲ್ಲಿ ಯಶಸ್ವಿಯಾಗುತ್ತವೆ ಎಂದು ಹೇಳಿದರು. ವೇದಿಕೆಯ ಮೇಲೆ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಕರವೀರಪ್ರಭು ಕ್ಯಾಲಕೊಂಡ ದಂಪತಿಗಳು, ಜಿ.ಪಂ.ಸದಸ್ಯ ಬಸವರಾಜ ಹೊಸಮನಿ, ಗ್ರಾ.ಪಂ.ಅಧ್ಯಕ್ಷೆ ಶಾಂತವ್ವ ಮಾದರ, ಗುರಪ್ಪ ಜಂಬಗಿ, ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹುರಳಿ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ರಮೇಶ ಅಥಣಿ, ಕಸಾಪ ಹಿಂದಿನ ಅಧ್ಯಕ್ಷ ಶಂಕರ ಹೂಲಿ, ಶಿವನಗೌಡ ಸುಂಕದ, ತಾ.ಪಂ.ಸದಸ್ಯ ನಿಂಗಪ್ಪ ಹೊಸಮನಿ, ಇನ್ಫೋಸಿಸ್ ಕಾರ್ಯದರ್ಶಿ ನಾರಾಯಣ ಕುಲಕರ್ಣಿ, ಗ್ರಾ.ಪಂ.ಉಪಾಧ್ಯಕ್ಷ ಮಹಾಂತೇಶ, ಎಸ್.ಡಿ.ಎಂ.ಸಿ.ಅಧ್ಯಕ್ಷ ಎಚ್.ಡಿ.ಬಾರಕೇರ, ಎಂ.ಎಸ್.ಹಿರೇಹಾಳ, ವ್ಯಂಗ್ಯ ಚಿತ್ರಕಾರ, ಸಾಹಿತಿ ವೆಂಕಟೇಶ ಇನಾಮದಾರ ಹಾಜರಿದ್ದರು. ರಾಜ್ಯ ಪಿಕಾರ್ಡ ಬ್ಯಾಂಕ್ ಉಪಾಧ್ಯಕ್ಷ ಮಹಾಂತೇಶ ಮಮದಾಪೂರ, ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ, ಡಾ.ಶೀಲಾಕಾಂತ ಪತ್ತಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಮಾಜಿ ಸದಸ್ಯ ಮಹಾಂತೇಶ ಹಟ್ಟಿ ಮಾತನಾಡಿದರು.
ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಅವರ ಸಂದೇಶವನ್ನು ಸಾಹಿತಿ ಸದಾಶಿವ ಮರಡಿ, ವಿಪ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಇವರ ಸಂದೇಶವನ್ನು ವಿನೋದ ಯಡಹಳ್ಳಿ ಓದಿದರು. ರವಿ ಕಂಗಳ ಬರೆದ ಪರಿಧಿಯೊಳಗಿನ ಕಾಯಕ ಪುಸ್ತಕವನ್ನು ರಾಜ್ಯ ಪಿಕಾರ್ಡ ಬ್ಯಾಂಕ್ ಉಪಾಧ್ಯಕ್ಷ ಮಹಾಂತೇಶ ಮಮದಾಪೂರ, ಸದಾಶಿವ ಮರಡಿ ಬರೆದ ಫಿನಿಕ್ಸ್ ಪ್ರೇಮಕಾವ್ಯ ಕೃತಿಯನ್ನು ಡಾ.ಶೀಲಾಕಾಂತ ಪತ್ತಾರ, ಎಸ್.ಎಂ.ಹಂಪಸಾಗರಮಠ ಅವರ ಬೆತ್ತಲು ಬೇರು ಕೃತಿಯನ್ನು ರಮೇಶ ಅಥಣಿ ಮತ್ತು ಸುಭಾಸಚಂದ್ರ ಕಿತ್ತಲಿಯವರು ಬರೆದ ಚಂದ್ರಗ್ರಹಣ ರಕ್ತಚಂದ ಕೃತಿಯನ್ನು ಗುರಪ್ಪ ಜಂಬಗಿಯವರು ಲೋಕಾರ್ಪಣೆಗೊಳಿಸಿದರು. ಇನ್ಫೋಸೊಸ್ ಸುಧಾಮೂರ್ತಿ ಇವರು ಕೊಡಮಾಡಿದ 10 ಗಣಕಯಂತ್ರಗಳನ್ನು ಮತ್ತು 20 ಸಾವಿರ ರೂ.ಮೌಲ್ಯದ ಪುಸ್ತಕಗಳನ್ನು ಸರಕಾರಿ ಶಾಲೆಗೆ ಕಾರ್ಯದರ್ಶಿ ನಾರಾಯಣ ಕುಲಕರ್ಣಿ ಹಸ್ತಾಂತರಿಸಿದರು. ಕಸಾಪ ತಾಲೂಕಾಧ್ಯಕ್ಷ ರವಿ ಕಂಗಳ ಪ್ರಾಸ್ಥಾವಿಕವಾಗಿ ಮಾತನಾಡಿದರು. ಡಿ.ವೈ.ಹೊಸಮನಿ ಸ್ವಾಗತಿಸಿದರು. ಎಸ್.ಎಂ.ನದಾಫ, ಶೀಲಾ ಗೌಡರ ಕಾರ್ಯಕ್ರಮ ನಿರೂಪಿಸಿದರು.