
ಹಲವು ವೈವಿಷ್ಟತೆ ಮತ್ತು ವಿಭಿನ್ನತೆ ಹೊಂದಿರುವ ಚಿತ್ರ ಶ್ರೀಮಂತ ಚಿತ್ರ ಮೋಡಿ ಮಾಡಲು ಮುಂದಾಗಿದೆ. ಹಾಸನ್ ರಮೇಶ್ ನಿರ್ದೇಶನದ ಜೊತೆಗೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.
ಗಾನಗಂಧರ್ವ ಎಸ್ . ಪಿ ಬಾಲಸುಬ್ರಮಣ್ಯಂ ಕನ್ನಡದಲ್ಲಿ ಹಾಡಿರುವ ಕಟ್ಟಕಡೆಯ ” ರೈತ ರೈತ ಹಾಡು ಚಿತ್ರದಲ್ಲಿರುವುದು ವಿಶೇಷ. ಬಾಲಿವುಡ್ ನಟ ಸೋನು ಸೂದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅವರೊಂದಿಗೆ ಕಿಚ್ಚ ಸುದೀಪ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಅದು ಏನು ಎನ್ನುವುದು ಚಿತ್ರದ ವಿಶೇಷ.
ನಿರ್ದೇಶಕ,ನಿರ್ಮಾಪಕ ಹಾಸನ್ ರಮೇಶ್, ಮಾಹಿತಿ ನೀಡಿ ರಾಜ್ಯದ ಸಂಸ್ಕೃತಿ,ಆಚಾರ, ನಡೆ ನುಡಿ ಒಳಗೊಂಡಿರುವ ಸಮಗ್ರ ಚಿತ್ರ.ವಿಶೇಷವಾಗಿ ಮೂಡಿ ಬಂದಿದೆ. ರಾಜ್ಯದ ಎಲ್ಲಾ ಕಡೆ ಪ್ರಚಾರ ಮಾಡಲಾಗಿದೆ. ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಎಲ್ಲರೂ ಸಿನಿಮಾ ನೋಡಿ ಹರಸಿ. ಚಿತ್ರದ ಮೂಲಕ ಬದುಕಿನ ಸಂಭ್ರಮಗಳನ್ನು ತೋರಿಸಲಾಗಿದೆ. ಸಂಭ್ರಮಗಳಲ್ಲಿ ನಾವೂ ಕೂಡ ಭಾಗಿಯಾಗೋಣ ಎಂದರು.
ಸೋನುಸೂದ್ ಮನಾಲಿಯಲ್ಲಿ ಚಿತ್ರೀಕರಣದಲ್ಲಿದ್ದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಟಿಗೆ ಬರಲು ಸಾದ್ಯವಾಗಲಿಲ್ಲ. ಈ ವಾರ 250 ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದರು.
ಹಿರಿಯ ನಟಿ ಕಲ್ಯಾಣಿ ರಾಜು ಮಾತನಾಡಿ , ರೈತರ ಕುರಿತಾದ ಸಿನಿಮಾ,ನೋವು, ನಲಿವು ಕಷ್ಟ ಸುಖ ಆದರಿಸಿ ಮಾಡಿದ ಚಿತ್ರ.ಚಿತ್ರದಲ್ಲಿ ಕ್ಯಾಮಾರ್ ರವಿ ಕುಮಾರ ಸನಾ ಅವರ ಕ್ಯಾಮರಾ ಕೆಲಸ ಅತ್ತುತ್ತಮವಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ಹಾಸನ ಶೈಲಿಯ ಭಾಷೆ ಬಳಕೆ ಮಾಡಲಾಗಿದೆ. ಶಾಂತಮ್ಮ ಎನ್ನುವ ಮಹಿಳೆ ಪಾತ್ರ. ಗಾದೆಯಿಂದ ಆರಂಬಿಸಿ ಗಾದೆಯಿಂದ ಅಂತ್ಯ ಮಾಡುವ ಪಾತ್ರ .ಹಾಸನ ಭಾಷೆ ಹೇಗೆ ಮಾತನಾಡಬೇಕು ಎನ್ನುವ ಕುರಿತು ಚಿತ್ರೀಕರಣ ನಡೆಯುವ ದಿನಗಳಂದು ಪ್ರತಿ ಕ್ಲಾಸ್ ನಡೆಯುತ್ತಿತ್ತು ಎಂದರು
ನಿರ್ಮಾಪಕ ಸಂಜಯ್ ಬಾಬು , ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಪ್ರತಿ ಮನೆಮನಕ್ಕೆ ಮುಟ್ಟು ಸಿನಿಮಾ .ಎಲ್ಲರ ಸಹಕಾರವಿರಲಿ ಎಂದರು.
ಗಿರೀಶ್ ಶಿವಣ್ಣ , ಹಳ್ಳಿ ಪಾತ್ರ ಎಂದಾಗ ಒಕೆ ಅಂದೆ. ಚಿತ್ರದಲ್ಲಿ ಕೋಳಿ ಕಳ್ಳನ ಪಾತ್ರ ಮಾಡಿದ್ದೇನೆ. ಸಂಪೂರ್ಣ ಇಷ್ಡವಾಗಲಿದೆ ಎಂದರೆ ಕುರಿ ರಂಗ ಪಾತ್ರ ಚೆನ್ನಾಗಿ ಮೂಡಿ ಬಂದಿದೆ. ಚಿತ್ರ ಎಲ್ಲರನ್ನು ನಗಿಸಲಿದೆ ಸಹಕಾರ ಇರಲಿ ಕಥೆಯಲ್ಲಿ ಸಿರಿತನ ಕಾಪಾಡಿಕೊಂಡು ಬಂದಿದೆ ಎಂದರು.