ಶ್ರೀಮಂತಿಕೆ, ಬಡತನ ಹೋಗುತ್ತವೆ ಬರುತ್ತವೆ:ಮಸೂತಿಶ್ರೀ

ತಾಳಿಕೋಟೆ:ಮಾ.28: ಶರೀರವೆಂಬುದು ಸೂತ್ರದ ಗೊಂಬೆ ಇದ್ದಂತೆ ಇದು ಏನೆಲ್ಲಾ ಬಯಸುತ್ತದೆ ಇದು ಏನೇಲ್ಲಾ ಕೇಳುತ್ತದೆ ಆದರೆ ಇದನ್ನು ಹತೋಟೆಯಲ್ಲಿ ಇಟ್ಟುಕೊಂಡು ನಡೆಯುವದೇ ಜೀವನವೆಂದು ಖ್ಯಾತ ಪುರಾಣ ಪ್ರವಚನಕಾರರಾದ ಮಸೂತಿಯ ಪೂಜ್ಯ ಶ್ರೀ ಡಾ.ಶಿವಲಿಂಗಯ್ಯ ಶರಣರು ನುಡಿದರು.
ಸಾಂಭ ಪ್ರಭು ಶರಣ ಮುತ್ಯಾರವರ ಜರುಗಲಿರುವ ಜಾತ್ರೋತ್ಸವ ಕುರಿತು ಬುಧವಾರರಂದು 17ನೇ ದಿನದಂದು ಜರುಗಿದ ಸುಕ್ಷೇತ್ರ ಅಂಕಲಿಯ ಶ್ರೀ ಗುರು ನಿರೂಪಾದೀಶ್ವರರ ಮಹಾ ಪುರಾಣ ಪ್ರವಚನದಲ್ಲಿ ಮಾತನಾಡುತ್ತಿದ್ದ ಅವರು ಕೀರ್ತಿ ಅಪಕೀರ್ತಿ ಎಂಬವಗಳು ಅವರು ಮನುಷ್ಯನಿಗೆ ಬಂದ ಮೇಲೆ ಅವು ಎಂದೂ ಹೋಗಲಾರವು ಹೋದ ಮೇಲೆ ಬರಲಾರದಂತವುಗಳು ಮಾನ ಮತ್ತು ಪ್ರಾಣ ಇವುಗಳಾಗಿವೆ ಎಂದು ಶ್ರೀಗಳು ನುಡಿದರು.
ಅಂಕಲಿ ನಿರುಪಾದೀಶ್ವರರು ಲಿಂಗಸೂರ ತಾಲೂಕಿನ ತಲಕಟ್ಟಿಗೆ ಹೋಗುತ್ತಾರೆ ಅವರು ಆ ಗ್ರಾಮಕ್ಕೆ ಹೋದ ನಂತರ ಅವರ ಧರ್ಮ ಪತ್ನಿ ಚೆನ್ನಮಲ್ಲಮ್ಮ ಹಾಗೂ ಅವರ ಪುತ್ರನಿಗೆ ಗೊತ್ತಾಗುತ್ತದೆ ಅವರೆಲ್ಲರೂ ಆಗಮಿಸಿ ಆನಂದದಿಂದ ಸಂಬ್ರಮಿಸುತ್ತಾರೆ. ಅದನ್ನೇಲ್ಲಾ ನೋಡಿ ನಿರುಪಾದೀಶ್ವರರು ಹೇಳುತ್ತಾರೆ ನಾನು ಬಂದದ್ದು ರಕ್ತ ಸಂಬಂದಿಕರಿಗಾಗಿ ಅಲ್ಲಾ ಭಕ್ತ ಸಂಬಂದಿಕರಿಗಾಗಿ ಬಂದಿದ್ದೇನೆ ಭಕ್ತರ ಉದ್ದಾರ ಮಾಡಬೇಕೆಂಬ ಇನ್ನೂ ನನ್ನ ಇಚ್ಚೆ ಇದೆ ಎಂದು ನಿರುಪಾದೀಶ್ವರರು ಹೇಳುತ್ತಾರೆ ಅಲ್ಲಿಯೇ ಇದ್ದ ಹಿರಿಯ ಜೀವಿ ಹಣಮವ್ವ ಎಂಬ ಮಹಿಳೆಗೆ ನಿರುಪಾದೀಶ್ವರರು ಹೇಳುತ್ತಾರೆ ಹಣಮವ್ವ ಗಟ್ಟಿನ ಹಾಲು ಹಾಕಿ ಚಹಾ ಮಾಡಿ ತೆಗೆದುಕೊಂಡು ಬಾ ಎಂದಾಗ ಇಲ್ಲರಿ ಗುರುಗಳೇ ಅದು ಇದುದ್ದು ಒಂದೇ ಗೊಡ್ಡ ಆಕಳು ಇದೆ ಅದು ಕಣಕಿ ತಿನ್ನುತ್ತದೆ ಹೋಗಿ ಬರುತ್ತದೆ ಅದು ಹಿಂಡುತ್ತಿಲ್ಲಾವೆಂದು ಹಣಮವ್ವ ಹೇಳುತ್ತಾಳೆ ಅದನ್ನು ಅರೀತ ನಿರುಪಾದೀಶ್ವರರು ತಮ್ಮಲ್ಲಿದ್ದ ಬೆತ್ತವನ್ನು ಆಕಳ ಮೇಲೆ ಎಳೆಯುತ್ತಾರೆ 7, 8 ವರ್ಷಗಳ ಕಾಲ ಹಿಂಡದೇ ಇದ್ದ ಗೊಡ್ಡ ಆಕಳು ಅವಾಗ ಹಾಲು ಕೊಡುತ್ತದೆ ಆಗ ಹಣಮವ್ವ ಶ್ರೀಗಳಿಗೆ ನಮಸ್ಕರಿಸಿ ಚಹಾ ಮಾಡಿ ಕೊಡುತ್ತಾಳೆಂದು ಶ್ರೀಗಳು ಹೇಳಿದರು.
ಶರಣರ ಬುತ್ತಿ ಜಾತ್ರೋತ್ಸವ ಕುರಿತು ಸಂಕಲ್ಪ ಮಾಡಿದಾಗ ತಾಳಿಕೋಟೆಯ ಜನತೆ ಹಾಗೂ ಕರಿಬಾವಿಯ ಜನತೆ ಒಗ್ಗೂಡಿ ಹಾಲು ಸಕ್ಕರಿಯಂತೆ ಬೆರೆತು ಈ ಶರಣಬುತ್ತಿ ಜಾತ್ರೋತ್ಸವವನ್ನು ಇಂದು ಯಶಸ್ವಿ ಮಾಡಿದ್ದೀರಿ ಸುಮಾರು 800 ಕ್ಕೂ ಮೇಲ್ಪಟ್ಟ ತಾಯಂದಿರರು ವಿದಿ ವಿದಾನಗಳೊಂದಿಗೆ ಶರಣರ ಬುತ್ತಿಯನ್ನು ತಂದು ಶ್ರೀಮಠಕ್ಕೆ ಒಪ್ಪಿಸಿರುವದು ಇದು ಮುಂದಿನ ಏಳಿಗೆಗೆ ಕಾರಣವಾಗಲಿದೆ ಎಂದು ಶ್ರೀಗಳು ನುಡಿದರು.
ಪಾದೋದಕ ಎಂಬ ಶಕ್ತಿ ಕುರಿತು ಅದರ ಮಹತ್ವ ಕುರಿತು ತಿಳಿ ಹೇಳಿದ ಶ್ರೀಗಳು ಲಿಂಗದ ಪಾದೋದಕ, ಧೂಳ ಪಾದಕ ಪಾದೋದಕ, ಗುರು ಪಾದೋದಕ ಕುರಿತು ವಿವರಿಸಿದರಲ್ಲದೇ ಗುರು ಪಾದೋದಕ ಲಿಂಗ ಪಾದೋದಕ ಎಂದರೇನು ಎಂಬುದರ ಕುರಿತು ಭಕ್ತರಿಗೆ ಮನವರಿಕೆ ಮಾಡಿದರು.
ಒಣಗಿದ ಪತ್ರಿಗಿಡವನ್ನು ಧೂಳ ಪಾದೋದಕ ನೀರಿನಿಂದ ಚಿಮಕಿಸಿ ಅದನ್ನು ಚಿಗರುವಂತೆ ಮಾಡಿದ ನಿರುಪಾದೀಶ್ವರರ ಪವಾಡವನ್ನು ಅರೀತ ಭಕ್ತರು ಶ್ರೀಗಳ ಮುಂದೆ ಈ ಕುರಿತು ಹೊಗಳಿದಾಗ ಅದನ್ನು ಮಾಡಿದವ ನಾನಲ್ಲಾ ಗದ್ದುಗೆಯಲ್ಲಿ ಕುಳಿತ ಅಡವಿ ಸಿದ್ದೇಶ್ವರರ ಆಶಿರ್ವಾದದ ಫಲದಿಂದ ಇದಾಗಿದೆ ಎಂದು ನಿರುಪಾದೀಶ್ವರರು ಹೇಳುತ್ತಾರೆ.
ಕಡಕೋಳ ಮಡಿಮಾಳೇಶ್ವರರು ಕಳ್ಳನಿಗೆ ಊಟ ಮಾಡಿಸಿ ಅವನಿಗೆ ಅರ್ಥೈಸಿದ ಕಥೆಯೊಂದನ್ನು ಹೇಳಿದ ಶ್ರೀಗಳು ಮಾಡಿದ ಕರ್ಮ, ಮಾಡಿದ ಧರ್ಮ, ನೀವೇ ಉಣಬೇಕು ಎಂಬುದನ್ನು ನಿರುಪಾದೀಶ್ವರರು ಹೇಳಿದ ನುಡಿಮುತ್ತನ್ನು ವಿವರಿಸಿದ ಶ್ರೀಗಳು ಮುಂದಿನ ಕಾಲ ಜ್ಞಾನ ಕುರಿತು ನಿರುಪಾದೀಶ್ವರರು ಹೇಳಿದ ಹಾಡನ್ನು ಹಾಡಿ ಶ್ರೀಗಳು ಏಚ್ಚರಿಸಿದರು.
ಜಗತ್ತಿನ ಕಾಲಜ್ಞಾನವನ್ನು ಬಸವಾದಿ ಶರಣರು ಬರೆದಿಟ್ಟಿದ್ದಾರೆ ಅವು ಯಾವವು ಇಲ್ಲಿಯವರೆಗೆ ಸುಳ್ಳಾಗಿಲ್ಲವೆಂದು ಶ್ರೀಗಳು ಹೇಳಿದರು.
ವೇದಿಕೆಯ ಮೇಲೆ ಬಸಣ್ಣಮುತ್ಯಾ ಶರಣರ, ಶರಣಪ್ಪಮುತ್ಯಾ ಶರಣರ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಶರಣಗೌಡ ಪೊಲೀಸ್‍ಪಾಟೀಲ, ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಶ್ರೀಮತಿ ಕಾಶಿಬಾಯಿ ಶರಣರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.