ಶ್ರೀಮಂತರ ಪಟ್ಟಿಯಲ್ಲಿ ಭಾರತಕ್ಕೆ ೩ನೇ ಸ್ಥಾನ

ಮುಂಬೈ, ಮಾ ೨೩- ಹುರೂನ್ ಗ್ಲೋಬಲ್ ರಿಚ್ ಲಿಸ್ಟ್ ೨೦೨೩ ಬಿಡುಗಡೆ ಮಾಡಲಾಗಿದ್ದು, ಅಮೆರಿಕ ಹಾಗೂ ಚೀನಾ ಬಳಿಕ ಭಾರತದಲ್ಲೇ ಅತಿ ಹೆಚ್ಚಿನ ಬಿಲಿಯನೇರ್‌ಗಳಿದ್ದಾರೆ. ಜಾಗಾತಿಕವಾಗಿ ಶೇ ೫೩ ರಷ್ಟು ಬಿಲಿಯನೇರ್ ಗಳು ಕೇವಲ ಅಮೆರಿಕ ಹಾಗೂ ಚೀನಾದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಭಾರತ ಪಡೆದುಕೊಂಡಿದೆ.
ಈ ವರದಿ ಪ್ರಕಾರ ಭಾರತದಲ್ಲಿ ಬರೋಬ್ಬರಿ ೬೬ ಶತಕೋಟ್ಯಾಧಿಪತಿಗಳು (ಬಿಲಿಯನೇರ್) ವಾಣಿಜ್ಯ ನಗರಿ ಮುಂಬೈ ಒಂದರಲ್ಲೇ ಇದ್ದಾರೆ.
ಹರೂನ್ ಗ್ಲೋಬಲ್ ರಿಚ್ ಲಿಸ್ಟ್ ೨೦೨೩ ಪ್ರಕಾರ ವಿಶ್ವದ ಅಗ್ರ ೧೦ ಶ್ರೀಮಂತರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖೇಶ್ ಅಂಬಾನಿ ಮಾತ್ರ ಏಕೈಕ ಭಾರತೀಯರಾಗಿದ್ದಾರೆ. ಅವರ ಒಟ್ಟು ಆದಾಯ ೮೨ ಬಿಲಿಯನ್ ಯುಎಸ್ ಡಾಲರ್. ಇನ್ನು ಗೌತಮ್ ಅದಾನಿ ಈ ಪಟ್ಟಿಯಲ್ಲಿ ದೊಡ್ಡ ಮಟ್ಟದ ಕುಸಿದ ಕಂಡಿದ್ದು ೨೩ನೇ ಸ್ಥಾನಕ್ಕೆ ತಲುಪಿಸಿದ್ದಾರೆ. ಇದನ್ನು ಸೈರಸ್ ಪೋನಾವಾಲಾ ಮತ್ತು ಶಿವ ನಾಡರ್ ಕುಟುಂಬ ಕ್ರಮವಾಗಿ ಈ ಪಟ್ಟಿಯಲ್ಲಿ ೪೬ ಹಾಗೂ ೫೦ನೇ ಸ್ಥಾನದಲ್ಲಿದೆ.
ಉದಯ್ ಕೋಟಕ್ ಈ ಪಟ್ಟಿಯಲ್ಲಿ ೧೩೫ನೇ ಸ್ಥಾನದಲ್ಲಿದ್ದಾರೆ, ಈ ವರ್ಷದ ಭಾರತದ ಶತಕೋಟ್ಯಧಿಪತಿಗಳ ಪಟ್ಟಿಗೆ ೧೫ ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಆದರೆ, ೨೦೨೩ರ ಹರೂನ್ ಗ್ಲೋಬಲ್ ರಿಚ್ ಲಿಸ್ಟ್‌ನಲ್ಲಿರುವ ಇರುವ ಶತಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಭಾರತ ಇಳಿಕೆ ಇಳಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ೨೮ ಮಂದಿ ಶತಕೋಟ್ಯಧಿಪತಿಗಳ ಪಟ್ಟಿಯಿಂದ ಹೊರಬಿದ್ದಿದ್ದಾರೆ.
ಇನ್ನು ನವದೆಹಲಿ ೩೯ ಬಿಲಿಯನೇರ್‌ಗಳ ತವರಾಗಿದ್ದರೇ, ಬೆಂಗಳೂರಲ್ಲಿ ೨೧ ಬಿಲಿಯನೇರ್‌ಗಳು ನೆಲೆಸಿದ್ದಾರೆ ಎಂದು ವರದಿ ಹೇಳಿದೆ.ಗ್ರಾಹಕ ಸರಕು ಉತ್ಪಾದನೆ ವಲಯದ ನಂತರ ಆರೋಗ್ಯ ಕ್ಷೇತ್ರದಲ್ಲಿನ ಬಿಲಿಯನೇರ್‌ಗಳು ಪಟ್ಟಿಯಲ್ಲಿ ಹೆಚ್ಚಿನ ಸ್ಥಾನದಲ್ಲಿದ್ದಾರೆ.
ಇನ್ನೊಂದು ವಿಶೇಷವೆಂದರೆ ಬೈಜುಸ್ ಕಂಪನಿ ಸಹ ಸ್ಥಾಪಕ ಹಾಗೂ ಸಿಇಒ ರವೀಂದ್ರನ್ ಅವರು ಜಗತ್ತಿನಲ್ಲೇ ಶೈಕ್ಷಣಿಕ ವಲಯದ ಎರಡನೇ ಅತಿದೊಡ್ಡ ಉದ್ಯಮಿ ಎಂದು ಗುರುತಿಸಿಕೊಂಡಿದ್ದಾರೆ.