ಬೀದರ್: ಎ.3:ನಿನ್ನೆ ಶ್ರೀಮಂಡಲ ಗ್ರಾಮದಲ್ಲಿ ನಡೆದ ಮಹಾದೇವ ಮಂದಿರದ 34ನೇ ಜಾತ್ರ ಮಹೋತ್ಸವ ಮತ್ತು ಶ್ರೀಮಂಡಲ ಶ್ರೀಗಳು ಬರೆದೇ ಮಹಾದೇವನ ಮಹಿಮೇಯ ವಚನಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ ಅಧ್ಯಕ್ಷರಾದ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ಅವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದೇವರು ಅವರು ಯುವ ನಾಯಕ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ಅವರ ಮಾಡಿದ ಕಾಯಕ,ಜನಪರ ಮತ್ತು ಸಾಮಾಜಿಕ ಕಾರ್ಯಗಳ ಬಗ್ಗೆ ಶ್ಲಾಘಿಸಿದರು ಮತ್ತು ರಾಜಕೀಯ ಜೀವನದಲ್ಲಿ ಉನ್ನತ ಮಟ್ಟದಲ್ಲಿ ಬೆಳಿಬೇಕು ಎಂದು ಆಶೀರ್ವಾದಿಸಿದರು.
ಈ ಕಾರ್ಯಕ್ರಮದಲ್ಲಿ ತಮ್ಮಲೂರ ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ, ಶ್ರೀ ರುದ್ರಮುನಿ ಸ್ವಾಮಿ ಚಾಂಬೋಳ, ಶ್ರೀ ರುದ್ರಮುನಿ ಸ್ವಾಮಿ, ಹೆಡಗಾಪೂರ,ಶ್ರೀ ಪ್ರಶಾಂತ ಸ್ವಾಮಿ ಶ್ರೀಮಂಡಲ ಸ್ವಾಮಿ, ಅಕ್ಕಾ ಸುವರ್ಣ,ಅಕ್ಕಾ ಭಾರತಿ ಪಾಟೀಲ,ಶ್ರೀ ಬಸವರೆಡ್ಡಿ ಸರ್, ಶ್ರೀ ಗುರುಪದಯ್ಯಾ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ದಿವ್ಯ ಆಶೀರ್ವಾದ ಪಡೆದರು. ಈ ಕಾರ್ಯಕ್ರಮದಲ್ಲಿ ಶ್ರೀ ಶರಣಪ್ಪ ಚಿಮಕೋಡ, ಶ್ರೀ ರಾಜಶೇಖರ ಪಾಟೀಲ್, ಶ್ರೀ ಮಂಜು,ಶ್ರೀ ಅಮರ ಪಾಟೀಲ್ ಮತ್ತು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.