(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.03: ದಾಸಸಾಹಿತ್ಯ, ಹಾಗೂಭಕ್ತಿಯುಗದ ಪ್ರವತ೯ತರಾಗಿಸಂಗೀತದ ಮೂಲಕಭಕ್ತಿಯನ್ನು, ಜನಸಾಮಾನ್ಯರ ಹೃದಯ ಗಳಿಗೆ ಕೊಂಡೊಯ್ದ ಭಾಗವತೋತ್ತಮರಾದ ಶ್ರೀ ಶ್ರೀಪಾದರಾಜರ ಆರಾಧನಾ ಮಹೋತ್ಸವ ವನ್ನು ಬಳ್ಳಾರಿ ಯರೇಡಿಯೋ ಪಾಕ೯ ಶ್ರೀ ವ್ಯಾಸರಾಜ ಮಠದಲ್ಲಿ ಶ್ರದ್ದಾ ಭಕ್ತಿ ಯಿಂದ ಆಚರಿಸಲಾಯಿತು.
ಪಂಡಿತಶ್ರೀ ಸತ್ಯ ಸಂಕಲ್ಪ ಆಚಾಯ೯ರಿಂದಶ್ರೀಪಾದರಾಜರ ಕುರಿತು ವಿಶೇಷ ಉಪನ್ಯಾಸ ಜರುಗಿತು. ಶ್ರೀಪಾದ ರಾಜರ ಭಾವಚಿತ್ರಕ್ಕೆ ವಿಶೇಷ ವಾಗಿ ಅಲಂಕರಿಸಿ ರಜತ ರಥದಲ್ಲಿರಿಸಿ ರಥೋತ್ಸವ ನೇರವೇರಿಸಿ ವಾಯಿತು. ಈ ಸಂದರ್ಭದಲ್ಲಿ ಭಜನಾ ಮಂಡಳಿ ಸದಸ್ಯ ರಿಂದ ಕೋಲಾಟ, ಸಾಮೂಹಿಕ ದೇವರನಾಮ ಗಳ ಸಂಕೀರ್ತನೆ ನಡೆಯಿತು.
ಆರಾಧನಾ ಅಂಗವಾಗಿ ಬೆಳಿಗ್ಗೆ ಶ್ರೀ ಗುರುರಾಜ ಸೇವಾ ಸಮಿತಿ ಹಾಗೂ ಅಷ್ಟೋತ್ತರ ಸಂಘದ ಸದಸ್ಯರರಿಂದ ಶ್ರೀರಾಘವೇಂದ್ರಸ್ವಾಮಿಗಳಅಷ್ಟೋತ್ತರ ವಾಯುಸ್ತುತಿ, ಪಾರಾಯಣ, ವೆಂಕಟೇಶ್ವರ ಸ್ತೋತ್ರ ನಡೆಯಿತು. ಪಂಚಬೃಂದಾವನಗಳಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು. ಬೃಂದಾವನ ಗಳಿಗೆ ರಜತಕವಚದಿಂದ ಅಲಂಕಾರ, ನೂತನ ವಸ್ತ್ರ ಧಾರಣೆ ಮಾಡಿ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ಮಧ್ಯಾಹ್ನ ಮಹಾಮಂಗಳಾರತಿ, ಬ್ರಾಹ್ಮಣಅಲಂಕಾರ ಭೋಜನ, ಭಕ್ತಾದಿಗಳಿಗೆ ತೀರ್ಥ ಪ್ರಸಾದ ಜರುಗಿತು.ಶ್ರೀ ಉದಯಚಾಯ೯ಮತ್ತು ವಾಸುದೇವ ಆಚಾರ್ಯಪೂಜಾ ಕೈಂಕರ್ಯಗಳನ್ನು ನೇರವೇರಿಸಿದರು. ಎಲ್ಲಾ ಕಾಯ೯ಕ್ರಮಗಳು ಮಠದ ವ್ಯವಸ್ಥಾಪಕ ರಾದ ಶ್ರೀ ಅಶೋಕ್ ಕುಲಕರ್ಣಿ ಯವರ ನೇತೃತ್ವದಲ್ಲಿ ಜರುಗಿದವು. ಕಾರ್ಯಕ್ರಮ ದಲ್ಲಿ ಮಠದ ಹಲವಾರು ಭಕ್ತಾದಿಗಳು ಭಾಗವಹಿಸಿದ್ದರು.